×
Ad

ಕೇರಳ: ಕ್ಯಾಬಿನೆಟ್ ರ್ಯಾಂಕ್ ಇರುವ ಸರಕಾರದ ಸಲಹೆಗಾರ ಸ್ಥಾನ ವಿ.ಎಸ್. ಅಚ್ಯುತಾನಂದನ್‌ಗೆ

Update: 2016-05-26 14:29 IST

ತಿರುವನಂತಪುರಂ,ಮೇ 26: ಕ್ಯಾಬಿನೆಟ್ ರ್ಯಾಂಕ್ ಇರುವ ಸರಕಾರದ ಸಲಹೆಗಾರ ಸ್ಥಾನವನ್ನು ಹಿರಿಯ ನಾಯಕ ವಿಎಸ್ ಅಚ್ಯುತಾನಂದನ್ ವಹಿಸಿಕೊಳ್ಳಲಿದ್ದಾರೆ. ಎಲ್‌ಡಿಎಫ್ ಚೇರ್‌ಮೆನ್ ಸ್ಥಾನವನ್ನೂ ವಿಎಸ್‌ಗೆ ನೀಡಲು ತೀರ್ಮಾನಿಸಲಾಗಿದೆ. ಈ ಕುರಿತು ಸಿಪಿಎಂ ಪ್ರಧಾನಕಾರ್ಯದರ್ಶಿ ಸೀತರಾಂ ಯೆಚೂರಿ ವಿಎಸ್‌ಗೆ ತಿಳಿಸಿದ್ದಾರೆ ಹಾಗೂ ಇದಕ್ಕೆ ಸಂಬಂಧಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತಳೆಯಲಾಗುವುದು ಎಂದು ವರದಿಯಾಗಿದೆ.

ಈ ನಡುವೆ ವಿಎಸ್‌ಗೆ ರಾಜ್ಯ ಸಿಪಿಎಂ ಸೆಕ್ರಟರಿಯೇಟ್‌ನಲ್ಲಿ ಸದಸ್ಯತ್ವವನ್ನು ನೀಡಲು ಪಕ್ಷ ನಾಯಕತ್ವ ತಾತ್ವಿಕವಾಗಿ ತೀರ್ಮಾನಿಸಿದೆ. ಈಗ ಅವರು ರಾಜ್ಯ ಸಮಿತಿಯಲ್ಲಿ ಆಹ್ವಾನಿತನಾಗಿದ್ದಾರೆ. ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿರುವಂತೆ ಕ್ಯಾಬಿನೆಟ್ ದರ್ಜೆಯ ಉನ್ನತ ಸ್ಥಾನ ವಿಎಸ್‌ಗೆ ನೀಡಲು ನಿರ್ಧರಿಸಿದ್ದರೂ ಅವರು ಪೂರಕ ನಿಲುವು ತಳೆದಿರಲಿಲ್ಲ. ಈ ಕುರಿತು ಮಾಧ್ಯಮದವರು ವಿಎಸ್‌ರನ್ನು ಕೇಳಿದಾಗ ಸ್ಥಾನಮಾನಗಳನ್ನು ಬಯಸುವ ವ್ಯಕ್ತಿತಾನಲ್ಲ ಎಂದು ಉತ್ತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News