×
Ad

ಜಿಶಾ ಕಾಂಗ್ರೆಸ್ ನಾಯಕರ ಪುತ್ರಿ: ಸಾಮಾಜಿಕ ಕಾರ್ಯಕರ್ತನಿಂದ ಮುಖ್ಯಮಂತ್ರಿಗೆ ದೂರು

Update: 2016-05-26 15:49 IST

ಕೊಚ್ಚಿ, ಮೇ 26: ಜಿಶಾ ಕೊಲೆ ಪ್ರಕರಣ ಹಿಂದೆ ಉನ್ನತ ಕಾಂಗ್ರೆಸ್ ನಾಯಕ ಮತ್ತು ಅವರ ಪುತ್ರ ಇದ್ದಾರೆಂದು ಸಾರ್ವಜನಿಕ ಕಾರ್ಯಕರ್ತ ಜೋಮೋನ್ ಪುತ್ತನ್‌ಪುರಕ್ಕಲ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಅವರು ದೂರು ನೀಡಿದ್ದಾರೆ. ಉನ್ನತ ಕಾಂಗ್ರೆಸ್ ನಾಯಕರ ಪುತ್ರಿ ಜಿಶಾ ಎಂದುದೂರಿನಲ್ಲಿ ಇವರು ಹೇಳಿದ್ದಾರೆ.

ಜಿಶಾರ ತಾಯಿ ಇಪ್ಪತ್ತುವರ್ಷಗಳಿಂದ ಈ ಕಾಂಗ್ರೆಸ್ ನಾಯಕರ ಮನೆಯಲ್ಲಿಕೆಲಸ ಮಾಡುತ್ತಿದ್ದರು. ಮಗಳೆಂಬ ನೆಲೆಯಲ್ಲಿ ಈ ನಾಯಕನ ಮನೆಗೆ ಹೋಗಿ ಜಿಶಾ ಆಸ್ತಿ ಹಕ್ಕು ಕೇಳಿದರೂ ಕೊಡಲಿಲ್ಲ. ಆನಂತರ ತಂದೆಯ ಸ್ಥಾನವನ್ನು ಖಚಿತಗೊಳಿಸಲು ಡಿಎನ್‌ಎ ಪರೀಕ್ಷೆ ನಡೆಸುವೆ ಎಂದು ಬೆದರಿಕೆ ಹಾಕಿದ ನಂತರ ಜಿಶಾ ಕೊಲೆಯಾಗಿದ್ದಾರೆ ಎಂದು ಜೋಮೋನ್ ಹೇಳಿದ್ದಾರೆ.

ತಂದೆ ಯಾರೆಂದು ಗೊತ್ತಾಗದಿರಲಿಕ್ಕಾಗಿ ಮೃತದೇಹವನ್ನು ಸುಟ್ಟುಹಾಕಲಾಗಿದೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಈ ನಡುವೆ ಆರೋಪಿಯೆಂದು ಶೇ. 90 ಸಾಧ್ಯತೆಗಳಿರುವ ವ್ಯಕ್ತಿಯನ್ನು ಡಿಎನ್‌ಎ ಪರೀಕ್ಷೆಗೆ ಗುರಿಪಡಿಸಿದಾಗ ಆತ ನಿರಪರಾಧಿಯೆಂದು ಪತ್ತೆಯಾಗಿದೆ. ಈತನ ಡಿಎನ್‌ಎಗೂ ಆರೋಪಿಯ ಡಿಎನ್‌ಎಗೂ ಹೋಲಿಕೆಯಿಲ್ಲ ಎಂದು ಬುಧವಾರ ಖಚಿತವಾಗಿತ್ತು. ನಿನ್ನೆ ಆರು ಮಂದಿಯ ಡಿಎನ್‌ಎಯನ್ನು ಪರೀಕ್ಷಿಸಿದರೂ ಪ್ರಯೋಜನವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News