×
Ad

ಪೂವರಣಿ ಅತ್ಯಾಚಾರ ಪ್ರಕರಣ: ಮುಖ್ಯ ಆರೋಪಿ ಲಿಸಿ ಸಹಿತ ಆರು ಮಂದಿ ತಪ್ಪಿತಸ್ಥರು, ಕೋರ್ಟು

Update: 2016-05-26 15:56 IST

ಕೋಟ್ಟಯಂ, ಮೇ 26: ಕೇರಳವನ್ನೇ ನಡುಗಿಸಿದ ಪೂವರಣಿ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗಳಲ್ಲಿ ಅರು ಮಂದಿ ತಪ್ಪಿತಸ್ಥರೆಂದು ಕೋಟ್ಟಯಂ ಅಡಿಷನಲ್ ಸೆಶನ್ಸ್ ಕೋರ್ಟ್ ತೀರ್ಪು ನೀಡಿದೆ.

ಸ್ಕೂಲ್ ವಿದ್ಯಾರ್ಥಿನಿಯನ್ನು ತಿಂಗಳುಗಳ ಕಾಲ ಲೈಂಗಿಕವಾಗಿ ಬಳಸಿ ಏಡ್ಸ್ ಬಾಧಿಸುವಂತೆ ಮಾಡಿ ವಿದ್ಯಾರ್ಥಿನಿ ಸಾಯಲು ಕಾರಣರಾಗಿದ್ದಾರೆ ಎಂದು ಪ್ರಾಶಿಕ್ಯೂಶನ್ ಕೇಸು ವಾದಿಸಿತ್ತು. 2008 ಮೇ 27ಕ್ಕೆ ಸಂಬಂಧಿಕಳಾದ ಮಹಿಳೆ ತನ್ನ ಮಗಳನ್ನು ಹಲವರಿಗೆ ಉಣಬಡಿಸಿದ್ದಾಳೆಂದು ಪೂವರಣಿ ನಿವಾಸಿಯೊಬ್ಬರು ದೂರು ನೀಡಿದ್ದರು. ಕಿರುಕುಳದಿಂದಾಗಿ ಹದಿನಾಲ್ಕು ವರ್ಷದ ಬಾಲಕಿ ಏಡ್ಸ್‌ರೋಗದಿಂದ ಮೃತಳಾಗಿದ್ದಳು.

ಪ್ರಕರಣದಲ್ಲಿ 12 ಆರೋಪಿಗಳಿದ್ದರು. ಕೇಸು ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿ ಸತ್ತಿದ್ದ. ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ, ಮಾರಾಟಕ್ಕೆ ಯತ್ನ ಪ್ರಕರಣ ಆರೋಪಿಗಳ ವಿರುದ್ಧ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News