ಲವ್ಲಿನ್ ಪ್ರಕರಣ: ಪಿಣರಾಯಿ ವಿರುದ್ಧ ರಿವಿಶನ್ ಅರ್ಜಿ ಬೇಗನೆ ಪರಿಗಣಿಸಬೇಕೆಂದು ಹೈಕೋರ್ಟ್‌ಗೆ ಮೊರೆ
Update: 2016-05-26 15:58 IST
ಕೊಚ್ಚಿ, ಮೇ 26: ಲವ್ಲಿನ್ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಸೇರಿ ಇತರರನ್ನು ಆರೋಪಮುಕ್ತಗೊಳಿಸಿರುವುದಕ್ಕೆ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಆದಷ್ಟು ಶೀಘ್ರ ಪರಿಗಣಿಸಬೇಕೆಂದು ಅರ್ಜಿ ಸಲ್ಲಿಸಲಾಗಿದೆ. ಸಿಬಿಐ ಕೋರ್ಟ್ ತೀರ್ಪಿನ ವಿರುದ್ಧ ಸಿಬಿಐ ಮತ್ತು ಇತರರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯ ಪರಿಗಣನೆಯಲ್ಲಿರುವಂತೆ ಪಿಣರಾಯಿ ವಿಜಯನ್ ಶಾಸಕರು ಮತ್ತು ಮುಖ್ಯಮಂತ್ರಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಬೇಗನೆ ಪರಿಗಣಿಸಬೇಕೆಂದು ಕ್ರೈಂ ಎಡಿಟರ್ ನಂದಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 2013 ನವೆಂಬರ್ 21ಕ್ಕೆ ಪರಿಗಣಿಸಿದ ಅರ್ಜಿ ನಂತರ 2016 ಫೆಬ್ರವರಿಯಲ್ಲಿ ಕೊನೆಯದಾಗಿ ಪರಿಗಣಿಸಲಾಗಿತ್ತು. ಎಪ್ರಿಲ್‌ನಲ್ಲಿ ಪುನಃ ಪರಿಗಣಿಸಬೇಕಾಗಿತ್ತು. ಆದರೆ ಈವರೆಗೂ ಪರಿಗಣಿಸಿಲ್ಲ.