ಅಪಪ್ರಚಾರ ನಡೆಸುತ್ತಿರುವ ಜೋಮೋನ್ ವಿರುದ್ಧ ಕಾನೂನು ಹೋರಾಟ ನಡೆಸುವೆ: ಜಿಶಾ ತಾಯಿ ರಾಜೇಶ್ವರಿ
ಪೆರುಂಬಾವೂರ್,ಮೇ 26: ಮಾನವ ಹಕ್ಕುಗಳ ಕಾರ್ಯಕರ್ತ ಜೋಮೋನ್ ಪುತ್ತನಪುರಕ್ಕಲ್ ವಿರುದ್ಧ ಕಾನೂನು ಹೋರಾಟ ನಡೆಸುವ ಎಂದು ಪೆರುಂಬಾವೂರಿನಲ್ಲಿ ಕೊಲೆಯಾದ ಕಾನೂನು ವಿದ್ಯಾರ್ಥಿನಿ ಜಿಶಾರ ತಾಯಿ ರಾಜೇಶ್ವರಿ ಹೇಳಿದ್ದಾರೆ. ಯುಡಿಎಫ್ ಸಂಚಾಲಕ ಪಿಪಿ ತಂಗಚ್ಚನ್‌ರೊಂದಿಗೆ ಸೇರಿ ನಿರಾಧಾರ ಕಥೆಗಳನ್ನು ಜೋಮೋನ್ ಪ್ರಚಾರ ಮಾಡುತ್ತಿದ್ದಾರೆ. ತನ್ನನ್ನು ಒಂದು ಸಲ ಕೂಡಾ ಭೇಟಿಯಾಗಿಲ್ಲ ಎಂದು ರಾಜೇಶ್ವರಿ ಹೇಳಿದ್ದಾರೆ.
ಪಿಪಿ ತಂಗಚ್ಚನ್‌ರ ಮನೆಯಲ್ಲಿ ಜಿಶಾರ ಅಮ್ಮ ರಾಜೇಶ್ವರಿ ಬಹಳ ಸಮಯ ಕೆಲಸ ಮಾಡಿದ್ದರೆಂದು ಮಾನವಹಕ್ಕು ಕಾರ್ಯಕರ್ತ ಜೋಮೋನ್ ಪುತ್ತನ್‌ಪುರಕ್ಕಲ್ ಇತೀಚೆಗೆ ಮುಖ್ಯಮಂತ್ರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು. ಆದರೆ ಜಿಶಾರ ತಾಯಿಯ ಬಗ್ಗೆ ತನಗೆ ಗೊತ್ತಿಲ್ಲ ಎಂದು ಯುಡಿಎಫ್ ಸಂಚಾಲಕ ಪಿಪಿ ತಂಗಚ್ಚನ್ ಹೇಳಿದ್ದಾರೆ. ಕೊಲೆಕೃತ್ಯಕ್ಕೂ ತನಗೋ ತನ್ನ ಕುಟುಂಬಕ್ಕೋ ಯಾವ ರೀತಿಯ ಸಂಬಂಧವೂ ಇಲ್ಲ. ಅವರು ತನ್ನ ಮನೆಯಲ್ಲಿ ಇಪ್ಪತ್ತುವರ್ಷ ಕೆಲಸಕ್ಕಿದ್ದರು ಎಂಬುದು ಬಹುದೊಡ್ಡ ಸುಳ್ಳು. ತನ್ನ ಮನೆಯಲ್ಲಿ ಜಿಶಾರ ತಾಯಿ ಮನೆಕೆಲಸಕ್ಕೆ ಇರಲಿಲ್ಲ ಎಂದು ತಂಗಚ್ಚನ್ ಸ್ಪಷ್ಟಪಡಿಸಿದ್ದಾರೆ.
ಜೋಮೋನ್ ಪುತ್ತನ್‌ಪುರಕ್ಕಲ್‌ದ್ದು ಮಾನಹರಣ ವಿಚಾರವಾಗಿದೆ. ಕಾನೂನು ಕ್ರಮ ಕೈಗೊಳ್ಳುವೆ. ಪೆರುಂಬಾವೂರ್‌ನಲ್ಲಿ ಎಡಪಕ್ಷ ಸೋತದ್ದರ ಪ್ರತೀಕಾರವನ್ನು ಆತ ತೀರಿಸಲು ಹೊರಟಿದ್ದಾರೆ ಎಂದು ತಂಗಚ್ಚನ್ ಹೇಳಿದ್ದಾರೆ. ಜಿಶಾರ ತಾಯಿ ಯಾವುದೇ ಅಗತ್ಯಕ್ಕೂ ತನ್ನ ಮನೆಗೆ ಬಂದಿಲ್ಲ. ಜಿಶಾ ಕೊಲೆಯಾದ ಬಳಿಕ ಅಮ್ಮ ರಾಜೇಶ್ವರಿಯನ್ನು ಅವರು ಆಸ್ಪತ್ರೆಯಲ್ಲಿದ್ದಾಗ ಸಂದರ್ಶಿಸಿದ್ದೆ. ಕೆಪಿಸಿಸಿಯ ಹಣಕಾಸು ಸಹಾಯವನ್ನು ಹಸ್ತಾಂತರಿಸಲು ಆಸ್ಪತ್ರೆಗೆ ಹೋಗಿದ್ದೆ. ಆಧಾರರಹಿತ ಪ್ರಚಾರ ನಡೆಸುವುದು ಸರಿಯಲ್ಲ. ಇದು ರಾಜಕೀಯವಲ್ಲ ಎಂದು ತಂಗಚ್ಚನ್ ಖಾರವಾಗಿ ಹೇಳಿದ್ದಾರೆ.