ಪಿಯುಸಿ: ಸುಳ್ಯ ತಾಲೂಕಿನ ಕಾಲೇಜುಗಳಿಗೆ ಉತ್ತಮ ಫಲಿತಾಂಶ

Update: 2016-05-26 12:19 GMT

ಸುಳ್ಯ, ಮೇ 26: ಸುಳ್ಯ ಶಾರದಾ ಹೆಣ್ಮಕ್ಕಳ ಪಿ.ಯು ಕಾಲೇಜು ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಶೇ.96.38 ಫಲಿತಾಂಶ ಪಡೆದಿದ್ದು, ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ. ಕಲಾವಿಭಾಗದಲ್ಲಿ 23 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ.100 ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ 35 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.100 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ 13ವಿದ್ಯಾರ್ಥಿಗಳು ಹಾಜರಾಗಿದ್ದು, 10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.76.92 ಫಲಿತಾಂಶ ಲಭಿಸಿದೆ. ಒಟ್ಟು ಕಾಲೇಜಿಗೆ ಶೇ.96.38 ಫಲಿತಾಂಶ ಲಬಿಸಿದೆ. ಕಲಾ ವಿಭಾಗದಲ್ಲಿ ಧನ್ಯಕುಮಾರಿ (529), ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ಉಡುಪ(561), ಮೋನಿಕಾ(515), ಶಮನಾ(512) ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಸುಳ್ಯ ರೋಟರಿ ವಿದ್ಯಾಸಂಸ್ಥೆ

ಸುಳ್ಯ ರೋಟರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಉತ್ತಮ ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ 10 ಮಂದಿ ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆಯಾಗಿ ಶೇ. 100 ಫಲಿತಾಂಶ ಬಂದಿದೆ. 6 ಮಂದಿ ಪ್ರಥಮ ದರ್ಜೆ, ದ್ವಿತೀಯ ದರ್ಜೆಯಲ್ಲಿ 2 ಮಂದಿ ಉತ್ತೀರ್ಣರಾಗಿದ್ದಾರೆ. ಫಾತಿಮ 470, ಸುರಕ್ಷಾ ಪಿ.ಎಸ್ 449 ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 30 ಮಂದಿ ವಿದ್ಯಾರ್ಥಿಗಳಲ್ಲಿ 28 ಮಂದಿ ತೇರ್ಗಡೆ ಹೊಂದಿ ಶೇ. 93.33 ಫಲಿತಾಂಶ ದಾಖಲಾಗಿದೆ. 5 ಮಂದಿ ವಿಶಿಷ್ಠ ಶ್ರೇಣಿ, 20 ಮಂದಿ ಪ್ರಥಮ ಶ್ರೇಣಿ, 3 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು ಕಾಲೇಜಿನಲ್ಲಿ 40ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ.95 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದ ಹಿತಾ ಎಂ.ಕೆ. 565, ಆದಿತ್ಯ ಕೇಶವ 560, ಆದಿತ್ಯ ರಮಣ 525, ಅಜಿತ್ ಎಂ.ಎಸ್. 534, ಮೋಕ್ಷಿತಾ 514 ಅಂಕ ಗಳಿಸಿದ್ದಾರೆ.

 ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.87.20

ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದಿಂದ ಒಟ್ಟು 344 ಮಂದಿ ಪರೀಕ್ಷೆ ಬರೆದಿದ್ದು, 300 ಮಂದಿ ತೇರ್ಗಡೆಯಾಗಿ ಸಂಸ್ಥೆಗೆ ಶೇ.87.20 ಫಲಿತಾಂಶ ದಾಖಲಾಗಿದೆ.

ವಿಜ್ಞಾನ ವಿಭಾಗದಿಂದ 55 ವಿದ್ಯಾರ್ಥಿಗಳು ಪರೀಕ್ಷೆ ಬರೆದು 49 ಮಂದಿ ತೇರ್ಗಡೆಯಾಗಿದ್ದಾರೆ. ಶೇ.89 ಫಲಿತಾಂಶ ದಾಖಲಾಗಿದೆ. ಡಿಸ್ಟಿಂಕ್ಷನ್‌ನಲ್ಲಿ 3, ಪ್ರಥಮ ಶ್ರೇಣಿಯಲ್ಲಿ 36, ದ್ವಿತೀಯ ಶ್ರೇಣಿಯಲ್ಲಿ 10 ಮಂದಿ ಪಾಸಾಗಿದ್ದಾರೆ. ರಕ್ಷಿತ್ 551, ಪ್ರದೀಪ 529, ಎಂ.ಧನ್ಯಕುಮಾರಿ 515 ಅತಿ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ 116 ಮಂದಿ ಪರೀಕ್ಷೆ ಬರೆದು 97 ಮಂದಿ ಪಾಸಾಗಿದ್ದಾರೆ. ಶೇ.83.62 ಫಲಿತಾಂಶ ದಾಖಲಾಗಿದೆ. ಡಿಸ್ಟಿಂಕ್ಷನ್ 1, ಪ್ರಥಮ ಶ್ರೇಣಿ 43, ದ್ವಿತೀಯ ಶ್ರೇಣಿಯಲ್ಲಿ 36 ಮಂದಿ ತೇರ್ಗಡೆಯಾಗಿದ್ದಾರೆ. ಜಿ.ಕೆ.ಭವ್ಯಕುಮಾರಿ 516, ಸಚಿನ್‌ಕುಮಾರ್ 471, ಕೆ.ಪೂರ್ಣಚಂದ್ರ 462 ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಿಂದ 173 ಮಂದಿ ಪರೀಕ್ಷೆ ಬರೆದು 154 ಮಂದಿ ಪಾಸಾಗಿದ್ದಾರೆ. ಶೇ.89 ಫಲಿತಾಂಶ ದಾಖಲಾಗಿದೆ. ಡಿಸ್ಟಿಂಕ್ಷನ್ 2, 106 ಮಂದಿ ಪ್ರಥಮ ಶ್ರೇಣಿ, 33 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಜೆ.ಯಾಮಿನಿ 526, ಕೆ.ಸುರಕ್ಷಾ 519, ಕೆ.ಎಸ್.ಲಾವಣ್ಯ 509 ಅತಿಹೆಚ್ಚು ಅಂಕ ಪಡೆದುಕೊಂಡಿದ್ದಾರೆ.

ಗಾಂಧಿನಗರ ಪದವಿ ಪೂರ್ವ ಕಾಲೇಜಿಗೆ ಶೇ.60 ಫಲಿತಾಂಶ

ಗಾಂಧಿನಗರ ಸರಕಾರಿ ಪದವಿಪೂರ್ವ ಕಾಲೇಜಿಗೆ ಪಿಯುಸಿ ಪರೀಕ್ಷೆಯಲ್ಲಿ ಶೇ.60 ಫಲಿತಾಂಶ ಲಭಿಸಿದೆ. ಕಲಾ ವಿಭಾಗದಿಂದ 25 ಮಂದಿ ಪರೀಕ್ಷೆ ಬರೆದಿದ್ದು, 17 ಮಂದಿ ತೇರ್ಗಡೆಯಾಗಿದ್ದಾರೆ. ಪಮಿನಾ ಟಿ.ಪಿ. 468, ಲತಾಕುಮಾರಿ 454 ಅತಿ ಹೆಚ್ಚು ಅಂಕವನ್ನು ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಿಂದ 8 ಮಂದಿ ಪರೀಕ್ಷೆ ಬರೆದು 3 ಮಂದಿ ತೇರ್ಗಡೆಯಾಗಿದ್ದಾರೆ. ಪೂಜಾ 375, ಪೌಜಿನಾ 339 ಅತಿ ಹೆಚ್ಚು ಅಂಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News