ರಾಜಧಾನಿ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ, ಏರ್‌ಇಂಡಿಯಾದಲ್ಲಿ ಪ್ರಯಾಣಿಸಿ!
ಹೊಸದಿಲ್ಲಿ, ಮೇ 26: ರಾಜಧಾನಿ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ ವೇಟಿಂಗ್ ಲಿಸ್ಟಿನಲ್ಲಿರುವರ ಪಾಲಿಗೆ ಏರ್‌ಇಂಡಿಯಾ ಮಹಾರಾಜ ಆಪತ್ಭಾಂಧವನಾಗಲಿದ್ದಾನೆ. ಇಂತಹ ಪ್ರಯಾಣಿಕರು ಸ್ವಲ್ಪ ಹೆಚ್ಚು ಹಣ ಪಾವತಿಸಿದಲ್ಲಿ ಅವರು ಇನ್ನು ಮುಂದೆ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬಹುದು.
ಏರ್‌ಇಂಡಿಯಾ ಮತ್ತು ಐಆರ್‌ಸಿಟಿಸಿ ಈ ಬಗ್ಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು ಈ ಯೋಜನೆ ಇನ್ನೊಂದು ವಾರದಲ್ಲಿ ಜಾರಿಯಾಗಲಿದೆಯೆಂದು ಏರ್‌ಇಂಡಿಯಾ ಮುಖ್ಯಸ್ಥ ಅಶ್ವನಿ ಲೊಹಾನಿ ತಿಳಿಸಿದ್ದಾರೆ.
ರಾಜಧಾನಿ ರೈಲು ಪ್ರಯಾಣಿಕರ ಹೆಸರು ವೇಟಿಂಗ್ ಲಿಸ್ಟಿನಲ್ಲಿದ್ದಲ್ಲಿ, ಅವರು ಪ್ರಯಾಣಿಸ ಬೇಕೆಂದಿದ್ದ ಊರಿಗೆ ಏರ್‌ಇಂಡಿಯಾ ವಿಮಾನ ಸೌಲಭ್ಯವಿದ್ದಲ್ಲಿ ಹಾಗೂ ಸ್ವಲ್ಪಹೆಚ್ಚು ಪಾವತಿಸಲು ಅವರು ತಯಾರಿದ್ದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ದೊರೆಯುವುದು. ಆದರೆ ರಾಜಧಾನಿ ರೈಲುಗಳ ಎಸಿ ಮೊದಲನೆ ದರ್ಜೆ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಲು ಹೆಚ್ಚಿನ ಞಟತ್ತ ಪಾವತಿಸಬೇಕಾಗಿರುವುದಿಲ್ಲ. ಆದರೆ ಎರಡನೆ ಮತ್ತು 3ನೆ ಎಸಿ ಪ್ರಯಾಣಿಕರು ಪ್ರತಿ ಟಿಕೆಟ್ಟಿಗೆ ರೂ .2,000 ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ. ಇಂತಹ ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ಐಆರ್‌ಸಿಟಿಸಿ ಮುಖಾಂತರ ನೀಡಲಾಗುವುದು.
ಇಂತಹ ಒಂದು ಕ್ರಮದಿಂದ ಏರ್‌ಇಂಡಿಯಾಗೆ ಹೆಚ್ಚಿನ ಸೀಟುಗಳನ್ನು ತುಂಬಿಸಲು ಸಾಧ್ಯವಾಗುವುದು.
ತರುವಾಯ ಹೆಚ್ಚಿನ ರಾಜ್ಯಗಳಲ್ಲಿ ಸಣ್ಣ ವಿಮಾನಗಳ ಸೇವೆಗಳನ್ನು ಒದಗಿಸುವ ಬಗ್ಗೆಯೂ ಏರ್‌ಇಂಡಿಯಾ ಯೋಚಿಸುತ್ತಿದೆ. ಈ ನಿಟ್ಟಿನಲ್ಲಿ ಏರ್‌ಇಂಡಿಯಾ ಪ್ರಾಯೋಜಿತ ಅದರ ಅಂಗ ಸಂಸ್ಥೆ ಏರ್‌ಅಲಾಯನ್ಸ್ ತನ್ನಲ್ಲಿರುವಎಟಿಆರ್ ಸಂಖ್ಯೆಯನ್ನು ಮುಂದಿನ ನಾಲ್ಕು ವರ್ಷಗಳಲ್ಲಿ 35ಕ್ಕೆ ಏರಿಸಲಿದೆ. ಪ್ರಸಕ್ತ ಏರ್‌ಅಲಾಯನ್ಸ್ ಬಳಿ 7 ಎಟಿಆರ್ ಗಳಿವೆ. ಮಾರ್ಚ್ 2017ರ ಒಳಗಾಗಿ ತನ್ನಲ್ಲಿರುವ ಎಟಿಆರ್-72 ವಿಮಾನಗಳ ಸಂಖ್ಯೆಯನ್ನು 18ಕ್ಕೆ ಏರಿಸಲು ಅದು ಯೋಚಿಸುತ್ತಿದೆ.