ಸಾರ್ವಜನಿಕರ ಸಲಹೆ-ಸೂಚನೆಗಳಿಗೆ ಬೆಲೆಯಿದೆಯೇ?

Update: 2016-05-26 18:09 GMT

ಮಾನ್ಯರೆ,
ನಾಲ್ಕೈದು ತಿಂಗಳುಗಳ ಹಿಂದೆ ನಗರದಲ್ಲಿ ಸಂಚಾರವನ್ನು ಸುಲಭಗೊಳಿಸಲು ಮಂಗಳೂರು ನಗರದ ಪುರಭವನದಲ್ಲಿ ಸಾರ್ವಜನಿಕರ ಜೊತೆ ಚರ್ಚಾ ಕಾರ್ಯಕ್ರಮ ನಡೆದಿತ್ತು. ಸಂಚಾರ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ವಾಹನಗಳ ಸಂಚಾರ ಲೇನ್ ರಚಿಸಲಾಗುವುದು, ಅಲ್ಲದೆ ಪೊಲೀಸ್ ಸಿಬ್ಬಂದಿಯ ಕೊರತೆಯನ್ನು ತುಂಬಿಸಲಾಗುವುದೆಂದು ಸಂಬಂಧಪಟ್ಟವರು ಈ ಸಭೆಯಲ್ಲಿ ಭರವಸೆ ನೀಡಿದ್ದರು. ಆದರೆ ಈ ಭರವಸೆಗಳು ಕಾರ್ಯಗತವಾಗಿವೆಯೇ?
ಸಾರ್ವಜನಿಕರು ನೀಡಿದ ಸಲಹೆ-ಸೂಚನೆಗಳಿಗೆ ಬೆಲೆ ಸಿಗದಿರುವಾಗ ಇಂತಹ ಚರ್ಚಾಕೂಟಗಳನ್ನು ನಡೆಸುವುದರ ಆವಶ್ಯಕತೆ ಇವೆಯೇ?

 
ನಮ್ಮ ಸಿಟಿಬಸ್ಸುಗಳಲ್ಲಿ ಅಳವಡಿಸಿರುವ ಕರ್ಕಶ ಹಾರ್ನ್‌ಗಳನ್ನು ಇಂದು ತೆಗೆದರೆ ಎರಡೇ ದಿನಗಳೊಳಗೆ ಮತ್ತದೇ ಕರ್ಕಶ ಹಾರ್ನ್ ಗಳನ್ನು ಮರುಅಳವಡಿಸಿ ಸಮಸ್ಯೆಯನ್ನು ದ್ವಿಗುಣಗೊಳಿಸುತ್ತಾರೆ. ಹಾಗಾದರೆ ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರವೇ ಇಲ್ಲವೇ? ಅಲ್ಲದೆ ಸಿಟಿಬಸ್ಸುಗಳು ಬೆಂದೂರ್‌ವೆಲ್, ಕಂಕನಾಡಿ, ಬಲ್ಮಠಗಳಂತಹ ಕಡೆಗಳಲ್ಲಿ ಯದ್ವಾತದ್ವ ನಿಲ್ಲಿಸಿ ಟ್ರಾಫಿಕ್ ಜ್ಯಾಂ ಉಂಟಾಗಿ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯೊಡ್ಡುತ್ತವೆ. ಇಂತಹ ಸಮಸ್ಯೆಯನ್ನು ತಂದೊಡ್ಡುವುದರಲ್ಲಿ ಆಟೊ ರಿಕ್ಷಾಗಳ ಕೊಡುಗೆ ಕಡಿಮೆಯೇನಿಲ್ಲ. ಪೊಲೀಸ್ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿಬಿದ್ದಿವೆ. ಈ ಹುದ್ದೆಗಳನ್ನು ತುಂಬಿಸಿದರೆ ಇಂತಹ ಟ್ರಾಫಿಕ್ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬಹುದು. ಆದರೆ ಸಂಬಂಧಿತ ಇಲಾಖೆ ಮನಮಾಡಬೇಕಷ್ಟೇ.

Writer - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Editor - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Similar News