×
Ad

ವಿಶ್ವ ಬಾಕ್ಸಿಂಗ್ ಟೂರ್ನಿ: ಸೋನಿಯಾ ಫೈನಲ್‌ಗೆ

Update: 2016-05-26 23:47 IST

ಅಸ್ತಾನ, ಮೇ 26: ಎಐಬಿಎ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿರುವ ಸೋನಿಯಾ ಲಾಥರ್(57 ಕೆ.ಜಿ.) ಭಾರತಕ್ಕೆ ಆರು ವರ್ಷಗಳ ಪದಕದ ಬರ ನೀಗಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ 24ರ ಹರೆಯದ ಸೋನಿಯಾ ಕಝಕಿಸ್ತಾನದ ಐಝಾನ್ ಖಾಜಬೆಕೊವಾರನ್ನು 3-0 ಅಂತರದಿಂದ ಮಣಿಸಿದರು. ಸೋನಿಯಾ ಪ್ರಶಸ್ತಿ ಸುತ್ತಿನಲ್ಲಿ ಇಟಲಿಯ ಅಲೆಸ್ಸಿಯಾ ಮೆಸಿಯಾನೊರನ್ನು ಎದುರಿಸಲಿದ್ದಾರೆ.

ಭಾರತ 2010ರ ಬಳಿಕ ವಿಶ್ವ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನದ ಪದಕವನ್ನು ಜಯಿಸಿಲ್ಲ. ಮೇರಿ ಕೋಮ್ 48 ಕೆಜಿ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದರು. ಇದೀಗ ಸೋನಿಯಾ ಭಾರತಕ್ಕೆ ಚಿನ್ನದ ಗೆದ್ದುಕೊಡುವ ವಿಶ್ವಾಸ ಮೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News