ಜೆಡಿಯು ಶಾಸಕಿಯ ಜಾಮೀನು ಮನವಿ ತಿರಸ್ಕೃತ
Update: 2016-05-27 22:18 IST
ಗಯಾ, ಮೇ 27: ಆದಿತ್ಯ ಸಚ್‌ದೇವ್ ಹತ್ಯೆ ಪ್ರಕರಣದ ಪ್ರಧಾನ ಆರೋಪಿ ರಾಕಿ ಯಾದವ್‌ನ ತಾಯಿ, ಅಮಾನತುಗೊಂಡಿರುವ ಜೆಡಿಯು ಶಾಸಕಿ ಮನೋರಮಾ ದೇವಿಯ ಜಾಮೀನು ಮನವಿಯನ್ನು ಸ್ಥಳೀಯ ನ್ಯಾಯಾಲಯವೊಂದು ತಿರಸ್ಕರಿಸಿದೆ. ಅವರು ಸಂಪೂರ್ಣ ಪಾನ ನಿಷೇಧವಿರುವ ಬಿಹಾರದ ತನ್ನ ನಿವಾಸದಲ್ಲಿ ಮದ್ಯವನ್ನು ಶೇಖರಿಸಿದ ಆರೋಪದಲ್ಲಿ ಕಾರಾಗೃಹ ಸೇರಿದ್ದಾರೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಜಲ್ ಮಂಡಲ್ವಾರ್, ಮನೋರಮಾ ದೇವಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದಾರೆ.
ಜೆಡಿಯು ಶಾಸಕಿಯ ಜಾಮೀನು ಅರ್ಜಿಯ ಸಂಬಂಧ ಮೇ 24ರಂದು ನ್ಯಾಯಧೀಶರು ಕೇಸ್ ಡೈರಿ ಹಾಗೂ ಎಸಿಜೆಎಂ ನ್ಯಾಯಾಲಯದ ಕಲಾಪ ದಾಖಲೆಯನ್ನು ಕೇಳಿದ್ದರು. ಎಸಿಜೆಎಂ ನ್ಯಾಯಾಲಯ ಮೇ 19ರಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.