ಐಪಿಎಲ್ ಕ್ವಾಲಿಫೈಯರ್-2: ಹೈದರಾಬಾದ್‌ಗೆ 163 ರನ್ ಗುರಿ
ಹೊಸದಿಲ್ಲಿ, ಮೇ 27: ಐಪಿಎಲ್ ಟ್ವೆಂಟಿ-20 ಟೂರ್ನಿಯ ಎರಡನೆ ಕ್ವಾಲಿಫೈಯರ್ ಪಂದ್ಯದಲ್ಲಿ ಆ್ಯರೊನ್ ಫಿಂಚ್(50ರನ್, 32 ಎಸೆತ) ಬಾರಿಸಿದ ಅರ್ಧಶತಕದ ನೆರವಿನಿಂದ ಗುಜರಾತ್ ಲಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ 163 ರನ್ ಗುರಿ ನೀಡಿದೆ.
ಶುಕ್ರವಾರ ಇಲ್ಲಿನ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಗುಜರಾತ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.
ಗುಜರಾತ್ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಏಕಲವ್ಯ ದ್ವಿವೇದಿ(5) ವಿಕೆಟ್‌ನ್ನು ಕಳೆದುಕೊಳ್ಳುವುದರೊಂದಿಗೆ ಕಳಪೆ ಆರಂಭ ಪಡೆಯಿತು. ಮೆಕಲಮ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ದ್ವಿವೇದಿಗೆ ಭುವನೇಶ್ವರ ಕುಮಾರ್ ಪೆವಿಲಿಯನ್‌ಗೆ ಕಳುಹಿಸಿದರು.
3ನೆ ಕ್ರಮಾಂಕದಲ್ಲಿ ಆಡಿದ ನಾಯಕ ಸುರೇಶ್ ರೈನಾ ಕೇವಲ 1 ರನ್ ಗಳಿಸಿ ಬೌಲ್ಟ್ ಬೌಲಿಂಗ್‌ನಲ್ಲಿ ಔಟಾದರು. ಆಗ 3ನೆ ವಿಕೆಟ್‌ಗೆ 44 ರನ್ ಜೊತೆಯಾಟವನ್ನು ನಡೆಸಿದ ದಿನೇಶ್ ಕಾರ್ತಿಕ್(26ರನ್) ಹಾಗೂ ಮೆಕಲಮ್(32 ರನ್, 29 ಎಸೆತ, 5 ಬೌಂಡರಿ) ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ, ಕಾರ್ತಿಕ್ ರನೌಟಾಗುವ ಮೂಲಕ ಈ ಜೋಡಿ ಬೇರ್ಪಟ್ಟಿತು.
ಡ್ವೇಯ್ನ ಸ್ಮಿತ್(1), ಅಲ್ಪ ಮೊತ್ತಕ್ಕೆ ಔಟಾದಾಗ ಲಯನ್ಸ್ ಸ್ಕೋರ್ 5 ವಿಕೆಟ್‌ಗಳ ನಷ್ಟಕ್ಕೆ 83 ರನ್.
6ನೆ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿದ ಫಿಂಚ್(50 ರನ್, 32 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಜಡೇಜ(ಔಟಾಗದೆ 19, 15 ಎಸೆತ, 1 ಬೌಂಡರಿ ) ಗುಜರಾತ್ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಲು ನೆರವಾದರು.
ಸ್ಕೋರ್ ವಿವರ
ಗುಜರಾತ್ ಲಯನ್ಸ್
20 ಓವರ್‌ಗಳಲ್ಲಿ 162/7
ದ್ವಿವೇದಿ ಸಿ ಬೌಲ್ಟ್ ಬಿ ಕುಮಾರ್ 05
ಮೆಕಲಮ್ ಸಿ ಕುಮಾರ್ ಬಿಪುಲ್ ಶರ್ಮ 32
ಸುರೇಶ್ ರೈನಾ ಎಲ್‌ಬಿಡಬ್ಲು ಬೌಲ್ಟ್ 01
ದಿನೇಶ್ ಕಾರ್ತಿಕ್ ರನೌಟ್ 26
ಫಿಂಚ್ ಬಿ ಕಟ್ಟಿಂಗ್ 50
ಡ್ವೆಯ್ನೆ ಸ್ಮಿತ್ ಸಿ ಧವನ್ ಬಿ ಕಟ್ಟಿಂಗ್ 01
ರವೀಂದ್ರ ಜಡೇಜ ಔಟಾಗದೆ 19
ಡ್ವೇಯ್ನ ಬ್ರಾವೊ ಬಿ ಕುಮಾರ್ 20
ಧವಳ್ ಕುಲಕರ್ಣಿ ಔಟಾಗದೆ 03
ಇತರ 05
ವಿಕೆಟ್ ಪತನ: 1-7, 2-19, 3-63, 4-81, 5-83, 6-134, 7-158.
ಬೌಲಿಂಗ್ ವಿವರ:
ಭುವನೇಶ್ವರ ಕುಮಾರ್ 4-0-27-2
ಟ್ರೆಂಟ್ ಬೌಲ್ಟ್ 4-0-39-1
ಸ್ರಾನ್ 3-0-28-0
ಬಿಪುಲ್ ಶರ್ಮ 3-0-21-1
ಕಟ್ಟಿಂಗ್ 3-0-20-2
ಹೆನ್ರಿಕ್ಸ್ 3-0-27-0.