ಸಿಇಟಿ: ವೈದ್ಯಕೀಯದಲ್ಲಿ ಮೂಡುಬಿದಿರೆ ಆಳ್ವಾಸ್ ನ ಅನಂತ್, ಇಂಜಿನಿಯರಿಂಗ್ ನಲ್ಲಿ ಬೆಂಗಳೂರಿನ ಮಿಲಿನ್ ಅಗ್ರ ಸ್ಥಾನಿಗಳು

Update: 2016-05-28 09:40 GMT

ಮಂಗಳೂರು, ಮೇ 28: ಮೆಡಿಕಲ್  ನಲ್ಲಿ ಮಂಗಳೂರು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಅನಂತ್ ಜಿ ಗೆ ಮೊದಲ ಸ್ಥಾನ, ಇಂಜಿನಿಯರಿಂಗ್ ನಲ್ಲಿ ವಿವಿಎಸ್ ಸರ್ಧಾರ್  ಕಾಲೇಜ್, ಬೆಂಗಳೂರು ಇಲ್ಲಿನ ಮಿಲಿನ್ ಕುಮಾರ್ ಪ್ರಥಮ,  ಆರ್ಕಿಟೆಕ್ಚರ್ ನಲ್ಲಿ  ಸಿಎಂಆರ್ ನ್ಯಾಷನಲ್ ಪಿಯು ಕಾಲೇಜ್, ಬೆಂಗಳೂರು ಇಲ್ಲಿನ ಮೃದುಲಾ.ಸಿ.ಆರ್, ಹಾಗೂ ಹೋಮಿಯೋಪಥಿಯಲ್ಲಿ  ಶೇಷಾದ್ರಿಪುರಂ ಪಿಯು ಕಾಲೇಜ್, ಬೆಂಗಳೂರು ಇಲ್ಲಿನ ಸಂಜಯ್ ಎಂಎಂ ಗೌಡರ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ವೈದ್ಯ ದಂತವೈದ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಆಳ್ವಾಸ್ ಕಾಲೇಜಿನ ಅನಂತ್‌ ಜಿ. ಪ್ರಥಮ, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಂಜಯ್ ಎಂ ಗೌಡರ್ ದ್ವಿತೀಯ, ಬೀದರ್‌ನ ಅಹ್ಮದ್ ಬಾಗ್ ಗೋಲಖಾನ್‌ ಶಹೀನ್ ಸ್ವತಂತ್ರ ಪಿಯು ಕಾಲೇಜಿನ ವಚನಶ್ರೀ ತೃತೀಯ ರ‍್ಯಾಂಕ್‌ ಗಳಿಸಿದ್ದಾರೆ. 

ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಕಾಲೇಜಿನ ಮಿಲಿಂದ್ ಕುಮಾರ್ ವಡ್ಡಿರಾಜು ಪ್ರಥಮ, ಮಂಗಳೂರಿನ ಕೊಡಿಯಾಬೈಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಿರಂಜನ್ ಕಾಮತ್ ದ್ವಿತೀಯ ಹಾಗೂ ಬೆಂಗಳೂರಿನ ರಾಜಾಜಿನಗರದ ಕೆಎಲ್‌ಇ ಸ್ವತಂತ್ರ ಪಿಯು ಕಾಲೇಜಿನ ದಿವ್ಯಾ ಎ. ಜಮಖಂಡಿ ಮೂರನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ಭಾರತೀಯ ವೈದ್ಯಪದ್ಧತಿ, ಹೋಮಿಯೋಪತಿಯಲ್ಲಿ ಬೆಂಗಳೂರಿನ ಯಲಹಂಕ ಶೇಷಾದ್ರಿಪುರಂ ಕಾಲೇಜಿನ ಸಂಜಯ್ ಎಂ. ಗೌಡರ್ ಪ್ರಥಮ, ಬೀದರ್ ಅಹ್ಮದ್ ಬಾಗ್ ಗೋಲಖಾನದ ಶಹೀನ್ ಸ್ವತಂತ್ರ ಪಿಯು ಕಾಲೇಜಿನ ವಚನಶ್ರೀ ದ್ವಿತೀಯ, ಮೂಡಬಿದರೆಯ ಆಳ್ವಾಸ್ ಕಾಲೇಜಿನ ಅನಂತ್‌ ಜಿ. ಮೂರನೇ ರ‍್ಯಾಂಕ್‌ ಗಳಿಸಿದ್ದಾರೆ.

ಅರ್ಕಿಟೆಕ್ಚರ್‌ ವಿಭಾಗದಲ್ಲಿ ಬೆಂಗಳೂರಿನ ಸಿಎಂಆರ್ ನ್ಯಾಷನಲ್ ಸ್ಕೂಲ್‌ನ ಮೃದುಲಾ ಸಿ.ಆರ್ ಪ್ರಥಮ, ಬೆಂಗಳೂರಿನ ಅಮೃತ ಅಕಾಡೆಮಿಯ ಐಶ್ವರ್ಯ ಮಹದೇವನ್ ದ್ವಿತೀಯ, ಬೆಂಗಳೂರಿನ ಸೋಫಿಯಾ ಹೈಸ್ಕೂಲ್‌ನ ನೇಹಾ ಸರಹ್ ಅಬ್ರಹಾಂ ಮೂರನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ಸಿಇಟಿ ಮೆಡಿಕಲ್ ನಲ್ಲಿ ಶಹೀನ್ ಕಾಲೇಜಿನ ವಿದ್ಯಾರ್ಥಿನಿ ವಚನಶ್ರೀ ಪಟಿಲ್ 3ನೆ ರ್ಯಾಂಕ್, ಅಬ್ದುಲ್ ರಹ್ಮಾನ್ 23ನೆ ರ್ಯಾಂಕ್ ಹಾಗೂ ಸುಹೈಲ್ ಅಹ್ಮದ್ 25ನೆ ರ್ಯಾಂಕ್ ಪಡೆದಿದ್ದಾರೆ.

ಸಿಇಟಿಯಲ್ಲಿ ಟಾಪರ್ ಆಗಿರುವ, ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಸಚಿವ ಟಿ.ಬಿ. ಜಯಚಂದ್ರ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು. 

ಈ ಬಾರಿ ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಕಾಮೆಡ್‌‌‌ ಕೆಯಲ್ಲಿ ಸರ್ಕಾರಿ ಕೋಟಾ ಇಲ್ಲದೆ ಇರುವ ಕುರಿತು ಕಾನೂನು ಪರಿಣಿತರ ಸಲಹೆಯನ್ನು ಸರ್ಕಾರ ಪಡೆದುಕೊಳ್ಳಲಿದೆ. ನಂತರ ನಾವು ನಿರ್ಣಯವನ್ನು ತೆಗೆದುಕೊಳ್ಳಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದ್ದಾರೆ. 

ಅಲ್ಲದೇ ವೈದ್ಯಕೀಯ ಕೋರ್ಸ್ ಸೇರಬಯಸುವರು ನೀಟ್ 2 ಪರೀಕ್ಷೆ  ಬರೆಯುವುದು ಒಳಿತು. ಇದರಿಂದ ಸಿಇಟಿಯಲ್ಲಿ ಸೀಟು ಸಿಗದಿದ್ದರೆ ಕಾಮೆಡ್ ಕೆ ನಲ್ಲಾದರೂ ಸೀಟು ಸಿಗುತ್ತದೆ ಎಂದೂ ಅವರು ಹೇಳಿದರು. 

ಒಟ್ಟು 391 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 1,71,868 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ವೈದ್ಯ ದಂತವೈದ್ಯ ಕೋರ್ಸ್‌ಗಳಿಗೆ 41,530 ಅಭ್ಯರ್ಥಿಗಳು, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಕೋರ್ಸ್‌ಗೆ  99,791, ಎಂಜಿನಿಯರಿಂಗ್ ಕೋರ್ಸ್‌ಗೆ 1,27,576, ಆರ್ಕಿಟೆಕ್ಚರ್ ಕೋರ್ಸ್‌ಗೆ 1,395 ಅಭ್ಯರ್ಥಿಗಳು, ಕೃಷಿ ಕೋರ್ಸ್‌ಗೆ 96,341 ಅಭ್ಯರ್ಥಿಗಳು, 99,788 ಪಶುಸಂಗೋಪನೆ, 1,31,324 ಅಭ್ಯರ್ಥಿಗಳು ಬಿ.ಫಾರ್ಮ್‌ಗೆ, ಮತ್ತು ಡಿ ಫಾರ್ಮ್ ಕೋರ್ಸ್‌ಗೆ ಅರ್ಹತೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News