×
Ad

ವೀಸಾ ಬದಲಾವಣೆಗೆ ಅಗತ್ಯ ಕ್ರಮಗಳನ್ನು ಪಾಲಿಸಬೇಕು: ಕುವೈಟ್ ಮ್ಯಾನ್‌ಪವರ್ ಅಥಾರಿಟಿ

Update: 2016-05-29 17:37 IST

   ಕುವೈಟ್ ಸಿಟಿ, ಮೇ 29: ಕೆಲಸಕ್ಕೆ ಸಂಬಂಧಿಸಿದ ವಿವಾದಗಳಿಂದಾಗಿ ವೀಸಾ ಬದಲಾಯಿಸಲು ಶ್ರಮಿಸುವ ಕಾರ್ಮಿಕರಿಗೆ ಕುವೈಟ್ ಮ್ಯಾನ್‌ಪವರ್ ಅಥಾರಿಟಿ ಮುನ್ನೆಚ್ಚರಿಕೆ ನೀಡಿದೆ. ವೀಸಾ ಬದಲಾವಣೆಗೆ ಅಗತ್ಯ ವಿಧಿವಿಧಾನಗಳು ಪೂರ್ತಿಯಾದ ಬಳಿಕವೇ ಇದಕ್ಕೆ ಸಂಬಂಧಿಸಿದ ವಿಭಾಗದಿಂದ ವೀಸಾ ಬದಲಿಸಲು ಸಂಪರ್ಕಿಸಿ ಅನುಮತಿ ಕೇಳಬೇಕು ಎಂದು ಅಥಾರಿಟಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯ ಕ್ರಮಗಳನ್ನು ಅನುಸರಿಸಿ ಅದನ್ನು ಪೂರ್ತಿಗೊಳಿಸದೆ ಒಂದು ವೇಳೆ ವೀಸಾ ಪರಿವರ್ತನೆಗೆ ಅನುಮತಿ ಸಂಪಾದಿಸಿದ್ದರೂ ಒಂದು ತಿಂಗಳ ಬಳಿಕ ಅವರು ಪಡೆದ ಅನುಮತಿ ಪತ್ರ ಅಪ್ರಯೋಜಕಗೊಳ್ಳಲಿದೆ ಎಂದು ಮ್ಯಾನ್‌ಪವರ್ ಅಥಾರಿಟಿ ತನ್ನ ಹೊಸ ಆದೇಶದಲ್ಲಿ ತಿಳಿಸಿದೆ. ಕೆಲಸದೆಡೆಯಿಂದ ಬೇರೆ ಕಡೆಗೆ ಕೆಲಸಕ್ಕೆ ಹೋಗಲು ಬಯಸುವ ಕಾರ್ಮಿಕ ತಾನು ದುಡಿಯುತ್ತಿರುವ ಸಂಸ್ಥೆಯ ಮಾಲಕನಿಗೆ ಮುಂಚಿತವಾಗಿ ತಿಳಿಸಿ ಆ ಅವಧಿಯಲ್ಲಿ ಸಂಬಂಧಿಸಿ ವಿಭಾಗಕ್ಕೆ ವೀಸಾ ಬದಲಾವಣೆಗೆ ಅರ್ಜಿ ಸಲ್ಲಿಸಬೇಕಾಗಿದೆ. ಇದಕ್ಕೆ ತಪ್ಪಿದ್ದು ಒಂದು ವೇಳೆ ಅನುಮತಿ ಪತ್ರವನ್ನು ಸಂಬಂಧಿತ ಇಲಾಖೆಯಿಂದ ಪಡೆದಿದ್ದರೂ ಅದು ಅನೂರ್ಜಿತಗೊಳ್ಳಲಿದೆ.

    ತನ್ನ ಕೆಲಸಗಾರ ವೀಸಾ ಪರಿವರ್ತನೆಯ ಅನುಮತಿ ಪಡೆದುಕೊಂಡಿದ್ದರೆ ಅದರ ವಿರುದ್ಧ ಸ್ಫೋನ್ಸರ್ ನೀಡುವ ದೂರು ಸ್ವೀಕಾರಾರ್ಹವಾಗುವುದಿಲ್ಲ ಎಂದು ಹೊಸ ಆದೇಶದಲ್ಲಿದೆ. ಕಾರ್ಮಿಕ ಇಲಾಖೆಗೆ ಸಂಪರ್ಕಿಸಿ ಇಂತಹ ಕಾಗದ ಪತ್ರಗಳಿಗೆ ಕಾರ್ಮಿಕ ಸಹಿಹಾಕಿದ್ದರೆ ಮಾತ್ರ ಸ್ಪೋನ್ಸರ್ ನೀಡುವ ದೂರು ಅಸ್ವೀಕಾರಾರ್ಹಗೊಳ್ಳಲಿದೆ. ಅದೇ ವೇಳೆ ಒಪ್ಪಂದದಲ್ಲಿ ಕೆಲಸ ಮಾಡುತ್ತಿರುವ ಸಂಸ್ಢೆಯ ಕಾರ್ಮಿಕರು ವೀಸಾ ಬದಲಾಯಿಸಲು ಸಂಸ್ಥೆಯ ಮಾಲಕನಿಗೆ ತಾವು ವೀಸಾ ಬದಲಾಯಿಸಲು ಬಯಸುತ್ತಿದ್ದೇವೆ ಎಂದು ಪೂರ್ವಮಾಹಿತಿ ನೋಟಿಸು ನೀಡಬೇಕಾಗಿದೆ. ನಿಗದಿತ ಸಂಬಳಕ್ಕೆ ಕಂಪೆನಿಯು ನೇಮಿಸಿದ್ದ ಕಾರ್ಮಿಕ ವೀಸಾ ಬದಲಿಸುವುದಕ್ಕಿಂತ ಮೂರು ತಿಂಗಳ ಮೊದಲು ತಾನು ಕೆಲಸ ಮಾಡುವ ಸಂಸ್ಥೆಯ ಮಾಲಕನಿಗೆ ನೋಟಿಸ್ ನೀಡಬೇಕು ಮತ್ತು ಇತರ ಕಾರ್ಮಿಕರು ಒಂದು ತಿಂಗಳು ಮೊದಲು ಕೆಲಸದ ಮಾಡುತ್ತಿರುವ ಸಂಸ್ಥೆಯ ಮಾಲಕನಿಗೆ ಪೂರ್ವ ಮಾಹಿತಿ ನೋಟಿಸ್ ನೀಡಿದರೆ ವೀಸಾ ಬದಲಾಯಿಸಲು ಸಾಧ್ಯವಾಗಲಿದೆ . ಪೂರ್ವ ಮಾಹಿತಿ ನೋಟಿಸ್‌ನಲ್ಲಿ ತಾನು ವೀಸಾ ಬದಲಿಸಲು ಬಯಸುತ್ತಿದ್ದೇನೆಂದೂ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದೂ ಬರೆದು ತಾನುದುಡಿಯುತ್ತಿರುವ ಸಂಸ್ಥೆಯ ಮಾಲಕನಿಗೆ ತಿಳಿಸಬೇಕು. ಈ ಅವಧಿಯಲ್ಲಿ ದುಡಿಯುತ್ತಿರುವಲ್ಲಿನ ಮಾಲಕ ಗೊತ್ತುಪಡಿಸಿದ ಮೊತ್ತವನ್ನು ಪಾವತಿಸಿ ಕಾರ್ಮಿಕ ವೀಸಾ ಬದಲಾಯಿಸಲು ಸಂಬಂಧಿತ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News