×
Ad

ಅಚ್ಯುತಾನಂದನ್‌ರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲು ನಿರ್ಧರಿಸಿದ ಪಾಲಿಟ್‌ಬ್ಯೂರೊ

Update: 2016-05-30 16:40 IST

ಹೊಸದಿಲ್ಲಿ, ಮೇ 30: ಹಿರಿಯ ನಾಯಕ ವಿಎಸ್ ಅಚ್ಯುತಾನಂದನ್‌ರಿಗೆ ಕ್ಯಾಬಿನೆಟ್ ದರ್ಜೆಯ ಸೂಕ್ತ ಸ್ಥಾನವನ್ನು ನೀಡಲು ಸಿಪಿಎಂ ಪೊಲಿಟ್ ಬ್ಯೂರೊ ತೀರ್ಮಾನಿಸಿದೆ. ಆದರೆ ಯಾವ ಪದವಿ ನೀಡುವುದೆಂಬ ವಿಷಯದಲ್ಲಿ ಇನ್ನೂ ನಿರ್ಧಾರವಾಗಿಲ್ಲ.

ವಿಎಸ್‌ರನ್ನು ಪ್ರತಿಪಕ್ಷ ನಾಯಕ ಎಂಬ ನೆಲೆಯಲ್ಲಿ ಲಭಿಸುತ್ತಿದ್ದ ಸೌಲಭ್ಯಗಳನ್ನು ಮುಂದುವರಿಸುವ ರೀತಿಯ ಸ್ಥಾನವನ್ನು ಅವರಿಗೆ ನೀಡಲು ಚಿಂತನೆ ನಡೆಸಲಾಗಿದೆ. ಮುಖ್ಯಮಂತ್ರಿಯ ಅಧೀನವಲ್ಲದ, ಸ್ವತಂತ್ರ ಅಧಿಕಾರವಿರುವ ರೀತಿಯ ಸ್ಥಾನವನ್ನು ಅವರು ಪಡೆಯಲಿದ್ದಾರೆ.

ವಿಎಸ್‌ರಿಗೆ ಹೊಸ ಸ್ಥಾನವನ್ನು ನೀಡಿದಾಗ ರಾಜ್ಯದಲ್ಲಿ ಎರಡು ಅಧಿಕಾರ ಕೇಂದ್ರಗಳ ನಿರ್ಮಾಣ ಉಂಟಾಗುವ ಪರಿಸ್ಥಿತಿಯನ್ನು ದೂರವಿಡಬೇಕೆಂದು ಪೊಲಿಟ್‌ಬ್ಯೂರೊ ಕೇಂದ್ರ ಕಮಿಟಿಗೆ ಸೂಚನೆ ಕಂಡು ಬಂದಿದೆ. ಮುಂದಿನ ತಿಂಗಳು ನಡೆಯಲಿರುವ ಪೊಲಿಟ್ ಬ್ಯೂರೊ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ನಂತರ ರಾಜ್ಯ ಸರಕಾರಕ್ಕೆ ಪೊಲಿಟ್‌ಬ್ಯೂರೊದ ತೀರ್ಮಾನವನ್ನು ತಿಳಿಸಲಾಗುವುದು.

ಅದನ್ನು ರಾಜ್ಯಸರಕಾರವೇ ಪ್ರಕಟಿಸಲಿದೆ.ಕ್ಯಾಬಿನೆಟ್ ರ್ಯಾಂಕ್‌ನ ಸಚಿವಸಂಪುಟ ಸಲಹೆಗಾರನ ಸ್ಥಾನ, ಎಲ್‌ಡಿಎಫ್ ಚೇರ್‌ಮೆನ್, ಸಿಪಿಎಂ ರಾಜ್ಯ ಸೆಕ್ರಟರಿಯೇಟ್ನಲ್ಲಿ ಸದಸ್ಯತನ ನೀಡಬೇಕೆಂದು ಅಚ್ಯುತಾನಂದನ್ ಸೀತಾರಾಂ ಯೆಚೂರಿಗೆ ಪತ್ರ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News