×
Ad

ಕಾಂಗ್ರೆಸ್‌ಗೆ ಬಿಜೆಪಿಯೇ ಮಂಜೇಶ್ವರ ಕಾಸರಗೋಡುಗಳಲ್ಲಿ ನೆರವು ನೀಡಿದೆ: ಸಿಪಿಐಎಂ ಆರೋಪ

Update: 2016-05-30 17:17 IST

   ಕಾಸರಗೋಡು, ಮೇ 30: ಕೇರಳ ವಿಧಾನಸಭೆಯ ಚುನಾವಣೆಯಲ್ಲಿ ಈ ಬಾರಿ ಎಲ್‌ಡಿಎಫ್ ಮತಗಳು ಮಂಜೇಶ್ವರ ಮತ್ತು ಕಾಸರಗೋಡುಗಳಲ್ಲಿ ಕಾಂಗ್ರೆಸ್ ಪಾಲಾಗಿವೆ ಎಂಬ ಬಿಜೆಪಿ ಜಿಲ್ಲಾಧ್ಯಕ್ಷರ ಆರೋಪಕ್ಕೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಸತೀಶ್ಚಂದ್ರನ್ ಬಿಜೆಪಿ ನಾಯನಿಂದ ಇಂತಹ ಆರೋಪಗಳು ಮಂಜೇಶ್ವರದಲ್ಲಾದ ಹತಾಶೆಯಿಂದ ಹೊರಬಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

  ಮಂಜೇಶ್ವರ ಕ್ಷೇತ್ರದಲ್ಲಿ ಎಲ್‌ಡಿಎಫ್‌ಗೆ ಹಿಂದೆ ಸಿಕ್ಕಿದ್ದಕ್ಕಿಂತ ಹೆಚ್ಚು (ಶೇ.35.8) ಮತಗಳು ಲಭಿಸಿವೆ. ಆದರೆ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಸುಧಾಕರನ್‌ರಿಗೆ ಬಿಜೆಪಿ ಅಡ್ಡ ಮತ ಹಾಕಿದೆ ಎಂದು ಸತೀಶ್ಚಂದ್ರನ್ ಟೀಕಿಸಿದ್ದಾರೆ. ಅಲ್ಲಿ ಬಿಜೆಪಿಯ ಮತಶೇ. 13.25ಕ್ಕೆ ಕುಸಿದಿದ್ದು ಹೇಗೆಂದು ಅವರು ಪ್ರಶ್ನಿಸಿದ್ದಾರೆ. ಇಲ್ಲಿ 2011ಕ್ಕಿಂತ ಶೇ.3.2ರಷ್ಟು ಹೆಚ್ಚು ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಗಳಿಸಿದ್ದಾರೆ.. ಇದು ಬಿಜೆಪಿ ಕಾಂಗ್ರೆಸ್‌ಗೆ ಅಡ್ಡ ಮತ ಹಾಕಿದ  ಕಾರಣದಿಂದ ಸಂಭವಿಸಿದೆ ಎಂದು ಕೆ.ಪಿ ಸತೀಶ್ಚಂದ್ರನ್ ಹೇಳಿದ್ದಾರೆ. ಉದುಮದಲ್ಲಿ ವಿಧಾನಸಭಾ ಕ್ಷೇತ್ರ ಎಲ್‌ಡಿಎಫ್‌ಗೆದ್ದಿದೆ.

   ಶಾಸಕ ಕುಂಞಿರಾಮನ್ ಸಿಪಿಎಂ ಪ್ರಬಲವಾಗಿರುವ ಬೂತೊಂದರಲ್ಲಿ ಏನೋ ಸಮಸ್ಯೆಯಾಗಿದೆ ಎಂದು ಅರಿತು ಧಾವಿಸಿ ಬಂದು ಅಲ್ಲಿನ ಬಿಜೆಪಿ ಏಜೆಂಟ್‌ರನ್ನು ರಕ್ಷಿತವಾಗಿ ಮನೆಗೆ ತಲುಪಿಸಲು ಪ್ರಯತ್ನಿಸಿದ್ದರು. ಆದರೆ ಈ ಘಟನೆಯನ್ನು ಬಿಜೆಪಿ ದುರುಪಯೋಗಿಸುತ್ತಿದೆ ಎಂದು ಸತೀಶ್ಚಂದ್ರನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News