×
Ad

ಇಸ್ರೇಲ್ ಬಗ್ಗೆ ಮಾತನಾಡಿದ್ದಕ್ಕೆ ಜಾಗತಿಕ ಭಾಷಣ ಸ್ಪರ್ಧೆಯಿಂದ ಬ್ರಿಟಿಷ್ - ಫೆಲೆಸ್ತೀನಿ ವಿದ್ಯಾರ್ಥಿನಿ ಔಟ್ !

Update: 2016-05-30 21:02 IST

ಲಂಡನ್, ಮೇ 30: ಬ್ರಿಟಿಶ್-ಫೆಲೆಸಸ್ತೀನಿ ಶಾಲಾ ಬಾಲಕಿಯೊಬ್ಬಳ ಭಾಷಣ ಸಾಮಾಜಿಕ ಜಾಲ ತಾಣಗಳ್ಲಲಿ ವೈರಲ್ ಆದ ಬಳಿಕ ಆಕೆಯನ್ನು ಸಾರ್ವಜನಿಕ ಭಾಷಣ ಸ್ಪೆರ್ದೆಯಿಂದ ಉಚ್ಚಾಟಿಸಲಾಗಿದೆ.
ಲಂಡನ್‌ನ ವಾನ್‌ಸ್ಟೆಡ್ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿನಿಯಾಗಿರುವ 15 ವರ್ಷದ ಲಿಯಾನ್ ಮುಹಮ್ಮದ್ ಜಾಕ್ ಪೆಚಿ ಸ್ಪೀಕ್‌ಔಟ್ ಚಾಲೆಂಜ್‌ನ ಪ್ರದೇಶಿಕ ಫೈನಲ್‌ಗೆ ಆಯ್ಕೆಯಾಗಿದ್ದಳು.
‘ಬರ್ಡ್ಸ್ ನಾಟ್ ಬಾಂಬ್ಸ್’ ಎಂಬ ತನ್ನ ಭಷಣದಲ್ಲಿ ಆಕೆ ಇಸ್ರೇಲ್‌ನ ವಸಾಹತುಶಾಹಿಯಲ್ಲಿ ಫೆಲೆಂ್ತೀನಿಯರ ಐತಿಯಾಸಿಕ ಹಾಗೂ ಸಮಕಾಲೀನ ವಾಸ್ತವದ ಬಗ್ಗೆ ಮಾತನಾಡಿದ್ದಳು.
ಜಾಕ್ ಪೆಚಿ ಪ್ರಾಯೋಜಿತ ಸ್ಪರ್ದೇಯನ್ನು ಸ್ಪೀಕರ್ಸ್ ಟ್ರಸ್ಟ್ ನಡೆಸುತ್ತದೆ.
ಫೆಲೆಸ್ತೀನ್ ವಿರೋಧಿ ಬ್ಲಾಗರ್ ಎಡ್ಗರ್ ಡೇವಿಡ್ಸನ್‌ನ ದೂರುಗಳಿಗೆ ಸ್ಪೆಂದಿಸಿದ ಸ್ಪೀಕರ್ಸ್ ಟ್ರಸ್ಟ್ ಸಿಇಒ ಜೂಲೀ ಹಾಲ್‌ನೆಸ್, ಅವರ ಕಳವಳಗಳನ್ನು ತಾವು ತುಂಬಾ ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದರು. ಗ್ರಾಂಡ್ ಫೈನಲ್‌ನಲ್ಲಿ ಬಾಲಕಿ ಭಾಷಣ ಮಾಡುವುದಿಲ್ಲ ಎಂಬುದನ್ನು ಅವರು ಖಚಿತಪಡಿಸಿದರು.
ಎರಡು ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಆಕೆಯನ್ನು ಸ್ಪೆರ್ಧೆಯಿಮದ ಅನರ್ಹಗೊಳಿಸಲಾಗಿದೆ ಎಂದು ಸಂಘಟಕರು ವಿವರಣೆ ನೀಡಿದ್ದಾರೆ. ಮೊದಲನೆಯದು, ಭಾಷಣ ಧನಾತ್ಮಕ ಹಾಗೂ ಉತ್ಸಾಹದಾಯಕ ಸಂದೇಶ ಹೊಂದಿರಬೇಕು ಹಾಗೂ ಎರಡನೆಯದು, ಭಾಷಣಗಾರರು ಪ್ರೇಕ್ಷಕರನ್ನು ಪ;್ರಚೋದಿಸಬಾರದು ಅಥವಾ ಬೇರೆಯವರನ್ನು ಅಣಕಿಸಬಾರದು.
ಇದಕ್ಕೆ ಪ್ರತಿಕ್ರಿಯಿಸಿರುವ ಲಿಯಾನ್, ‘‘ನನ್ನ ಬಾಯಿ ಮುಚ್ಚಿಸುವುದಾದರೆ ಅದಕ್ಕೆ ‘‘ಸ್ಪೀಕ್ ಔಟ್ ಚಾಲೆಂಜ್’’ ಎಂದು ಯಾಕೆ ಹೆಸರಿಡಬೇಕು?’’ ಎಂದು ಪ್ರಶ್ನಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News