×
Ad

ಬಾಲಕನನ್ನು ಕಾಡಲ್ಲಿ ಬಿಟ್ಟು ಹೋದ ಹೆತ್ತವರು; ನಾಪತ್ತೆ

Update: 2016-05-30 23:44 IST

ಟೋಕಿಯೊ, ಮೇ 30: ಏಳು ವರ್ಷದ ಬಾಲಕನೊಬ್ಬ ಯಾವುದೋ ತಪ್ಪು ಮಾಡಿದ. ಅದಕ್ಕೆ ಶಿಕ್ಷೆಯಾಗಿ ಕಾಡಿನ ದಾರಿಯಲ್ಲಿ ಹೋಗುತ್ತಿದ್ದ ಆತನ ಹೆತ್ತವರು ಆತನನ್ನು ಕಾರಿನಿಂದ ಇಳಿಸಿ ಕಾಡಿನಲ್ಲೇ ಬಿಟ್ಟು ಹೋದರು. ಬಾಲಕನನ್ನು ಕರೆದೊಯ್ಯಲು ಹೆತ್ತವರು ಮರಳಿದಾಗ ಆತ ನಾಪತ್ತೆಯಾಗಿದ್ದ.

ಜಪಾನ್‌ನ ನಾಲ್ಕು ಪ್ರಮುಖ ದ್ವೀಪಗಳ ಪೈಕಿ ಒಂದಾಗಿರುವ ಹೊಕಾಯಿಡೊದ ಕಾಡಿನಲ್ಲಿ ರಕ್ಷಣಾ ಸಿಬ್ಬಂದಿ ಸೋಮವಾರ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಶನಿವಾರ ಸಂಜೆಯಿಂದ ಬಾಲಕ ನಾಪತ್ತೆಯಾಗಿದ್ದಾನೆ.

 ತಾವು ಕಾಡಿನ ತರಕಾರಿಗಳನ್ನು ಕೊಯ್ಯುತ್ತಿದ್ದಾಗ ಬಾಲಕ ನಾಪತ್ತೆಯಾಗಿದ್ದಾನೆ ಎಂಬುದಾಗಿ ಹೆತ್ತವರು ಆರಂಭದಲ್ಲಿ ಪೊಲೀಸರಿಗೆ ತಿಳಿಸಿದ್ದರು ಎಂಬುದಾಗಿ ಜಪಾನ್ ಮಾಧ್ಯಮಗಳು ವರದಿ ಮಾಡಿವೆ. ಆದರೆ, ನದಿಯಲ್ಲಿ ಆಟವಾಡುತ್ತಿದ್ದಾಗ ಕಲ್ಲುಗಳನ್ನು ಎಸೆಯುತ್ತಿದ್ದುದಕ್ಕಾಗಿ ಆತನಿಗೆ ಶಿಕ್ಷೆ ನೀಡಲು ಕಾಡಿನ ಮಧ್ಯದಲ್ಲಿ ಇಳಿಸಿರುವುದಾಗಿ ಬಳಿಕ ಅವರು ಒಪ್ಪಿಕೊಂಡಿದ್ದರು.

ಕೆಲವು ನಿಮಿಷಗಳ ಬಳಿಕ ತಂದೆ ವಾಪಸ್ ಬಂದಾಗ ಬಾಲಕ ಕಾಣೆಯಾಗಿದ್ದ ಎಂದು ಜಪಾನ್‌ನ ಕ್ಯೋಡೊ ನ್ಯೂಸ್ ಸರ್ವಿಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News