ಕರ್ನಾಟಕ ನಿಷ್ಠೆ ಪ್ರದರ್ಶಿಸಲಿ
Update: 2016-05-30 23:49 IST
ಮಾನ್ಯರೆ,
ವೆಂಕಯ್ಯ ನಾಯ್ಡುರವರ ರಾಜ್ಯಸಭಾ ಸದಸ್ಯತ್ವದ ಉಮೇದ್ವಾರಿಕೆಗೆ ರಾಜ್ಯಾದಾದ್ಯಂತ ವಿರೋಧ ಕಂಡು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಕೊನೆಗೂ ಅವರನ್ನು ಕೈಬಿಟ್ಟು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ತನ್ನ ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ.
ಮೂಲತಃ ತಮಿಳುನಾಡಿನವರಾದರೂ ರಾಜ್ಯದ ‘ಸೊಸೆ’ ಎಂಬ ಮಾನದಂಡದಲ್ಲಿ ನಿರ್ಮಲಾ ಸೀತಾರಾಮನ್‌ರಿಗೆ ಅವಕಾಶ ಕೊಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಹಿಂದಿನ ವೆಂಕಯ್ಯ ನಾಯ್ಡುರವರಂತೆ ಆಯ್ಕೆಯಾದ ಕರ್ನಾಟಕಕ್ಕೆ ದ್ರೋಹ ಬಗೆಯದೆ ಕನ್ನಡಿಗರನ್ನು ಪ್ರತಿನಿಧಿಸುತ್ತಿದ್ದೇನೆಂಬ ಅರಿವು ನಿರ್ಮಲಾರಿಗಿದ್ದರೆ ಸಾಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡಿಗರ ಆಕ್ರೋಶಕ್ಕೆ ಇವರೂ ತುತ್ತಾಗಬೇಕಾದೀತು.