×
Ad

ಇಸ್ಲಾಮಾಬಾದ್ ಹೈಕೋರ್ಟ್ ನೋಟಿಸ್

Update: 2016-05-30 23:49 IST

ಇಸ್ಲಾಮಾಬಾದ್, ಮೇ 30: 26/11 ಮುಂಬೈ ದಾಳಿ ಪ್ರಕರಣದಲ್ಲಿ, 10 ಲಷ್ಕರೆ ತಯ್ಯಿಬ ಭಯೋತ್ಪಾದಕರು ಮುಂಬೈ ತಲುಪಲು ಬಳಸಿದ ದೋಣಿಯನ್ನು ಪರಿಶೀಲನೆ ನಡೆಸಲು ಆಯೋಗವೊಂದನ್ನು ರಚಿಸಬೇಕು ಎಂಬ ಪ್ರಾಸಿಕ್ಯೂಶನ್‌ನ ಮನವಿಯ ಹಿನ್ನೆಲೆಯಲ್ಲಿ, ಸೂತ್ರಧಾರಿ ಝಕೀವುರ್ರಹ್ಮಾನ್ ಲಖ್ವಿ ಸೇರಿದಂತೆ ಏಳು ಆರೋಪಿಗಳು ಮತ್ತು ಸರಕಾರಕ್ಕೆ ಇಸ್ಲಾಮಾಬಾದ್‌ನ ಹೈಕೋರ್ಟ್ ಸೋಮವಾರ ನೋಟಿಸ್‌ಗಳನ್ನು ಜಾರಿಮಾಡಿದೆ.

ವಿಚಾರಣಾ ನ್ಯಾಯಾಲಯವಾದ ಇಸ್ಲಾಮಾಬಾದ್‌ನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಿಂದ ಪ್ರಕರಣದ ದಾಖಲೆಗಳನ್ನೂ ಹೈಕೋರ್ಟ್ ಕೋರಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News