ಸಹಾರಾದ 4,700 ಎಕರೆ ಜಮೀನು ಮಾರಾಟಕ್ಕೆ

Update: 2016-05-30 18:27 GMT

ಮುಂಬೈ, ಮೇ 30: ಪ್ರಾಯಶಃ ಅತಿದೊಡ್ಡ ಅಖಿಲ ಭಾರತ ಜಮೀನು ಮಾರಾಟವೊಂದರಲ್ಲಿ ಸಹಾರಾ ಗುಂಪು 14 ರಾಜ್ಯಗಳಲ್ಲಿ ಹೊಂದಿರುವ 4,700 ಎಕರೆಗಳಿಗೂ ಹೆಚ್ಚು ಜಮೀನನ್ನು ಎಚ್‌ಎಡಿಎಫ್‌ಸಿ ರಿಯಾಲ್ಟಿ ಹಾಗೂ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್‌ಗಳು ಮಾರಾಟಕ್ಕಿರಿಸಿವೆ. ಈ ಮಾರಾಟದಿಂದ ರೂ.6,500 ಕೋಟಿ ಲಭ್ಯವಾಗುವ ನಿರೀಕ್ಷೆಯಿದೆ.

ತನ್ನಲ್ಲಿ ಒಟ್ಟು 33,633 ಎಕರೆ ಜಮೀನಿದೆಯೆಂದು ಸಹಾರಾ ಪ್ರತಿಪಾದಿಸಿದೆ. ಇದರಲ್ಲಿ ಲೋನಾವಳದ ಸಮೀಪದ ಆಂಬಿ ವ್ಯಾಲಿ ಸಿಟಿ 10,600 ಎಕರೆಯಷ್ಟಿದೆ. ಸುಮಾರು 1 ಸಾವಿರ ಎಕ್ರೆ ಭೂಮಿ ಉತ್ತರ ಪ್ರದೇಶದ ಪಟ್ಟಣಗಳು ಹಾಗೂ ನಗರಗಳಲ್ಲಿ ಹರಡಿದೆ. ಕಂಪೆನಿಯ ಮುಖ್ಯಾಲಯ ಲಕ್ನೊದಲ್ಲಿದೆ.

ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್ ಸಹಾರಾದ ವರಿಷ್ಠ ಸುಬ್ರತೊ ರಾಯ್ ಹಾಗೂ ಗುಂಪಿನ ನಿರ್ದೇಶಕ ಅಶೋಕ್ ರಾಯ್ ಚೌಧರಿಯವರನ್ನು 4 ವಾರಗಳ ಪರೋಲ್‌ನ ಮೇಲೆ ಬಿಡುಗಡೆ ಮಾಡಿದೆ. ಸಹಾರಾ ಗುಂಪನ್ನು ಸೆಬಿ ನ್ಯಾಯಾಲಯಕ್ಕೆಳೆದ ಮೇಲೆ, 2014ರ ಮಾರ್ಚ್‌ನಿಂದ ರಾಯ್ ತಿಹಾರ್ ಜೈಲಿನಲ್ಲಿದ್ದಾರೆ. ರೂ. 5 ಸಾವಿರ ಕೋಟಿ ಬ್ಯಾಂಕ್ ಖಾತ್ರಿ ಹಾಗೂ ಮತ್ತೆ ರೂ. 5 ಸಾವಿರ ಕೋಟಿ ಜಾಮೀನಿಗಾಗಿ ಹೊಂದಿಸಲು ಸಹರಾ ತನ್ನ ಆಸ್ತಿಗಳನ್ನು ಮಾರಬಹುದೆಂದು ನ್ಯಾಯಾಲಯ ಸಲಹೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News