ನೀಟ್ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ: ಮೊಯ್ಲಿ

Update: 2016-05-30 18:34 GMT

ಬೆಂಗಳೂರು, ಮೇ 30: ಕನ್ನಡ ಭಾಷೆಯಲ್ಲಿಯೂ ಏಕೀಕೃತ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (ನೀಟ್) ಬರೆಯುವ ಅವಕಾಶವಿದೆ ಎಂದು ಸಂಸದ ಹಾಗೂ ಸಾಹಿತಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ, ನೂತನ ಕಸಾಪ ಜಿಲ್ಲಾಧ್ಯಕ್ಷರಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನೀಟ್ ಪರೀಕ್ಷೆಯನ್ನು ಇತರೆ ಭಾಷೆಗಳಲ್ಲೂ ಬರೆಯಲು ಅವಕಾಶ ನೀಡಬೇಕೆನ್ನುವ ಕೂಗು ಈಗಾಗಲೇ ಎಲ್ಲೆಡೆ ಎದ್ದಿದೆ. ಅಲ್ಲದೆ, ಕನ್ನಡ ಭಾಷೆಯಲ್ಲಿಯೂ ನೀಟ್ ಪರೀಕ್ಷೆ ಬರೆಯಲು ಅವಕಾಶವಿದೆ. ಆದರೆ, ಕನ್ನಡದಲ್ಲಿ ವಿಜ್ಞಾನ ಪರೀಕ್ಷೆ ಬರೆಯುವವರ ಸಂಖ್ಯೆ ತೀರ ಕಡಿಮೆ. ಹೀಗಾಗಿ, ಮುನ್ನೋಟದ ದೃಷ್ಟಿಯಿಟ್ಟು ಕನ್ನಡದಲ್ಲಿಯೇ ವಿಜ್ಞಾನ ಪರೀಕ್ಷೆ ಬರೆಯುವವರ ಸಂಖ್ಯೆ ಶೇ.5 ರಷ್ಟಾದರೂ ಏರಿಸಬೇಕೆಂದು ಅವರು ಹೇಳಿದರು.

ನೀಟ್ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿ ಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ವಿಶ್ವದ ಭಾಷಾ ಸಂಪತ್ತು ಸಂಗ್ರಹಿಸುವ ನಿಂಘಟು ಕನ್ನಡಕ್ಕೆ ಬೇಕಾಗಿದ್ದು, ಇಂತಹ ನಿಘಂಟು ರಚಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News