ಉಡುಪಿ: ಅಲ್ಪಸಂಖ್ಯಾತರ ವೇದಿಕೆ ಪದಾಧಿಕಾರಿಗಳ ಆಯ್ಕೆ

Update: 2016-05-31 13:27 GMT

ಉಡುಪಿ, ಮೇ 31: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವಾರ್ಷಿಕ ಮಹಾಸಭೆಯು ಉಡುಪಿ ಮುಸ್ಲಿಮ್ ವೆಲ್‌ಫೇರ್ ಕಚೇರಿಯಲ್ಲಿ ಇತ್ತೀಚೆಗೆ ಜರಗಿತು.

ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷೆ ಸಾಮುವೆಲ್ ಐಸಾಕ್ ವಹಿಸಿದ್ದರು. ಕಾರ್ಯದರ್ಶಿ ಫಾರೂಕ್ ವರದಿ ವಾಚಿಸಿದರು. ಖಜಾಂಚಿ ಲುವಿಸ್ ಡಿ. ಆಲ್ಮೇಡಾ ಲೆಕ್ಕಪತ್ರ ಮಂಡಿಸಿದರು. ನಿಕಟಪೂರ್ವ ಅಧ್ಯಕ್ಷ ಬಿ.ಹುಸೇನ್ ಚುನಾವಣೆ ನಡೆಸಿಕೊಟ್ಟರು.

 2016-17ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಖಲೀಲ್ ಅಹ್ಮದ್ ಉಡುಪಿ, ಉಪಾಧ್ಯಕ್ಷರುಗಳಾಗಿ ರೋಜಿ ವಿಲಿಯಂ ಪಿಂಟೋ, ಉಸ್ಮಾನ್ ಸಾಹೇಬ್ ಕೊಡವೂರು, ಕಾರ್ಯದರ್ಶಿಯಾಗಿ ಲುವಿಸ್ ಡಿಆಲ್ಮೇಡಾ ಮಣಿಪಾಲ, ಸಹಕಾರ್ಯದರ್ಶಿಗಳಾಗಿ ಜಫ್ರುಲ್ಲಾ ಸಾಹೇಬ್ ನೇಜಾರು, ಸ್ಟಾನಿ ಪಿಂಟೋ ಕಟಪಾಡಿ, ಕೋಶಾಧಿಕಾರಿ ಯಾಗಿ ಸೆವ್ರಿನ್ ಡೇಸಾ ಬೆಳ್ಮಣ್ಣು, ಸಂಪರ್ಕ ಸಂಪಾದಕರಾಗಿ ಡಾ.ಜೆರಾಲ್ಡ್ ಪಿಂಟೋ ಕಲ್ಯಾಣಪುರ, ಸಲಹೆಗಾರರಾಗಿ ರೆ.ಫಾ.ಫ್ರೆಡ್ ಮಸ್ಕರೇನಸ್, ಫಾರೂಕ್ ಸಾಹೇಬ್, ಖತೀಲ್ ಅಬ್ದುಲ್ ರಶೀದ್, ಆಲ್ಫೋನ್ಸ್ ಡಿಕೋಸ್ತ, ಹುಸೇನ್ ಸಾಹೇಬ್ ಹೂಡೆ, ಕೆ.ಮೊದಿನ್ ಸಾಹೇಬ್, ವಾಲ್ಟರ್ ಸಿರಿಲ್ ಪಿಂಟೊ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News