ಸಮಸ್ತದ ನೂತನ ಅಧ್ಯಕ್ಷರ ಪರಿಚಯ
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕುಮರಂಪುತ್ತೂರು ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಅವರ ಕುರಿತ ಕಿರುಪರಿಚಯ:
ಕುಮರಂಪುತ್ತೂರಿನ ಪಳ್ಳಿಕುನ್ನ್ ನಿವಾಸಿಯಾಗಿರುವ ಎ.ಪಿ. ಮುಹಮ್ಮದ್ ಮುಸ್ಲಿಯಾರ್ "ಅಂಬಾಡತ್ತ ಕುಟುಂಬ" ಎಂಬ ಪ್ರಸಿದ್ಧ ಮನೆತನದಲ್ಲಿ ಜನಿಸಿದ್ದರು. ಮುಂಕತ್ತ ಮೊಯ್ದೀನ್ ಮುಲ್ಲ ಎಂಬವರ ಓತುಪಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ತಿಗೊಳಿಸಿದ್ದ ಅವರು, ನಂತರ ತಂದೆಯ ಸಹೋದರನಾಗಿರುವ ಬೀರಾನ್ ಕುಟ್ಟಿ ಮುಸ್ಲಿಯಾರ್ ಅವರ ದರ್ಸ್‌ಗೆ ಸೇರಿದರು. ಅಲ್ಲಿಂದ ತನ್ನ ಮಾವ( ಹೆಂಡತಿಯ ತಂದೆ) ಅಂಬಡತ್ತ್ ಮುಹಮ್ಮದ್ ಮುಸ್ಲಿಯಾರರ ಬಳಿ ಶಿಕ್ಷಣಕ್ಕಾಗಿ ತೆರಳಿದರು. ನಂತರ ಸಮಸ್ತ ಮುಶಾವರ ಸದಸ್ಯರಾಗಿದ್ದ ಪೋತ್ತನ್ ಅಬ್ದುಲ್ಲ ಮುಸ್ಲಿಯಾರರ ದರ್ಸಿನಲ್ಲಿ ಒಂದು ವರ್ಷ ಹಾಗೂ ಮಣ್ಣಾರ್ಕಾಡ್ ಕುಂಞಿಮಾಹೀನ್ ಮುಸ್ಲಿಯಾರರ ಬಳಿ ಎರಡು ವರ್ಷಗಳ ಕಾಲ ದಾರ್ಮಿಕ ಶಿಕ್ಷಣವನ್ನು ಕರಗತ ಮಾಡಿಕೊಂಡಿದ್ದರು. ಅಲ್ಲಿಂದ ಮತ್ತೊಮ್ಮೆ ತನ್ನ ಮಾವನ ದರ್ಸಿಗೆ ಸೇರಿ ವಿವಿಧ ದಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಪಟ್ಟಿಕ್ಕಾಡ್ ಜಾಮಿಃ ನೂರಿಯಾ ಅರಬಿಕ್ ಕಾಲೇಜಿಗೆ ಬರುವವರೆಗೂ ಮಾವನ ಬಳಿಯೇ ಶಿಕ್ಷಣವನ್ನು ಮುಂದುವರಿಸಿದ್ದರು. 1963ರಲ್ಲಿ ಅವರುಉನ್ನತ ಶಿಕ್ಷಣಕ್ಕಾಗಿ ಜಾಮಿಅಃ ಕಾಲೇಜಿಗೆ ಸೇರಿ, ಅಲ್ಲಿ 3 ವರ್ಷಗಳ ಕಾಲ ಕಲಿತರು. ಅಂದು ಒಟ್ಟು 27 ಮಂದಿ ವಿದ್ಯಾರ್ಥಿಗಳು ಅಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದರು .
ಜಾಮಿಅಃದಲ್ಲಿ ಶಿಕ್ಷಣವನ್ನು ಪೂರ್ತಿಗೊಳಿಸಿದ ನಂತರ ಓರಾಂಪುರಂ, ಮಾಟುಲ್ ತೆಕ್ಕ್, ಕೊಳಪ್ಪರಂಬ್, ಮಣಲಡಿ, ಪಳ್ಳಿಶ್ಶೇರಿ, ನಂದಿ ಆಲತ್ತೂರ್ ಪಡಿ ಪಾಲಕ್ಕಾಡ್ ಜನ್ನತುಲ್ ಉಲೂಂ, ಚೆಮ್ಮಾಡ್, ಮಡವೂರ್, ಕಾರಂದೂರು ಮುಂತಾದೆಡೆಗಳಲ್ಲಿ ಮುದರ್ರಿಸರಾಗಿ ಉಸ್ತಾದರು ವರ್ಷಗಟ್ಟಲೆ ದೀನೀ ಸೇವೆಗೈದಿದ್ದಾರೆ. ಇದೀಗ ಪಟ್ಟಿಕ್ಕಾಡ್ ಜಾಮಿಅಃ ಕಾಲೇಜಿನಲ್ಲಿ 15 ವರ್ಷಗಳಿಂದೀಚಿಗೆ ಪ್ರೊಪೆಸರಾಗಿ ದೀನೀ ಜ್ಞಾನವನ್ನು ದಾರೆಯೆರೆಯುತ್ತಿದ್ದಾರೆ. ಅಧ್ಯಾಪಕ ಜೀವನದಲ್ಲಿ ಪ್ರಾರಂಭ ಘಟ್ಟದಲ್ಲಿ ಬಾಫಕಿ ತಂಞಳರ ಒತ್ತಾಯದ ಈ ಹಿಂದೆ ಮೇರೆಗೆ 5 ವರ್ಷಗಳ ಕಾಲ ಪಟ್ಟಿಕ್ಕಾಡ್ ಜಾಮಿಅಃದಲ್ಲೇ ಅದ್ಯಾಪಕರಾಗಿ ಸೇವೆಗೈದಿದ್ದರು.
ಚೆಮ್ಮಾಡಿನಲ್ಲಿ ಮುದರ್ರಿಸರಾಗಿ ಸೇವೆಗೈಯುತ್ತಿರುವ ಸಂದರ್ಭದಲ್ಲಿ ಸಮಸ್ತದ ಮುಶಾವರಕ್ಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಮುಶಾವರಕ್ಕೆ ಸೇರ್ಪಡೆಗೊಂಡ ಎರಡೇ ವರ್ಷದಲ್ಲಿ ಫತ್ವಾ ಕಮಿಟಿಯ ಸದಸ್ಯರಾಗಿಯೂ ಆಯ್ಕೆಯಾದರು. ಸಮಸ್ತದ ಮಣ್ಣಾರ್ಕಾಡ್ ತಾಲೂಕಿನ ಪ್ರಥಮ ಕಾರ್ಯದರ್ಶಿಯಾಗುವುದರೊಂದಿಗೆ ಉಸ್ತಾದರು ನಾಯಕತ್ವ ಕ್ಷೇತ್ರದಲ್ಲಿ ಸಕ್ರೀಯರಾಗತೊಡಗಿದರು. ಎಸ.ಎಂ.ಎಫ. ಜಿಲ್ಲಾಧ್ಯಕ್ಷರಾಗಿ, ಸಮಸ್ತ ಪಾಲಕ್ಕಾಡ್ ಜಿಲ್ಲಾ ಉಪಾಧ್ಯಕ್ಷರಾಗಿ, ಮದ್ರಸ ಮ್ಯಾನೇಜ್ಮೆಂಟ್ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಮುಂತಾದ ಕ್ಷೇತ್ರಗಳಲ್ಲಿ ಉನ್ನತ ಪದವಿಯನ್ನು ಅಲಂಕಾರಿಸಿದ್ದಾರೆ. ಶಂಸುಲ್ ಉಲಮಾ, ಕೋಟುಮಲ ಉಸ್ತಾದ್, ಕನ್ಯಾಲ ವೌಲ ಮುಂತಾದ ಮಹಾನ್ ವ್ಯಕ್ತಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು.