×
Ad

ಆಸ್ಟ್ರೇಲಿಯದಲ್ಲಿ ಚತುಷ್ಕೋನ ಏಕದಿನ ಸರಣಿ ಆಡಲಿರುವ ಭಾರತ ‘ಎ’

Update: 2016-06-01 23:41 IST

ಮೆಲ್ಬೋರ್ನ್, ಜೂ.1: ಭಾರತ ‘ಎ’ ತಂಡ ಆ.13 ರಿಂದ ಆಸ್ಟ್ರೇಲಿಯದಲ್ಲಿ ಚತುಷ್ಕೋನ ಸರಣಿಯಲ್ಲಿ ಭಾಗವಹಿಸಲಿದೆ ಎಂದು ಭಾರತ ‘ಎ’ ತಂಡದ ಕೋಚ್ ರಾಹುಲ್ ದ್ರಾವಿಡ್ ಬುಧವಾರ ಖಚಿತಪಡಿಸಿದ್ದಾರೆ.

 ಚತುಷ್ಕೋನ ಸರಣಿಯಲ್ಲಿ 18 ಪಂದ್ಯಗಳು ಇರಲಿದ್ದು, ಮೆಕೆ, ಬ್ರಿಸ್ಬೇನ್ ಹಾಗೂ ಟೌನ್ಸ್‌ವಿಲ್ಲೆಯಲ್ಲಿ ಪಂದ್ಯಗಳು ನಡೆಯುತ್ತವೆ.

ಭಾರತ ಎ ತಂಡ ಆಗಸ್ಟ್‌ನಲ್ಲಿ ತ್ರಿಕೋನ ಏಕದಿನ ಸರಣಿ ಆಡಲಿದೆ. ಸೆಪ್ಟಂಬರ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಎರಡು ಚತುರ್ದಿನ ಪಂದ್ಯಗಳನ್ನು ಆಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ(ಸಿಎ) ಬುಧವಾರ ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News