×
Ad

ಚರ್ಮ, ಕೋರೆಹಲ್ಲುಗಳೊಂದಿಗೆ ಹುಲಿ ಮಂದಿರದಿಂದ ಪರಾರಿಯಾಗುತ್ತಿದ್ದ ಅರ್ಚಕನ ಬಂಧನ

Update: 2016-06-02 19:25 IST

ಬ್ಯಾಂಕಾಕ್ (ಥಾಯ್ಲೆಂಡ್), ಜೂ. 2: ಥಾಯ್ಲೆಂಡ್‌ನ ವಿವಾದಾಸ್ಪದ ‘‘ಹುಲಿ ದೇವಸ್ಥಾನ’’ದಿಂದ ಪ್ರಾಣಿಗಳ ಚರ್ಮಗಳು ಮತ್ತು ಕೋರೆಹಲ್ಲುಗಳೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ದೇವಸ್ಥಾನದ ಅರ್ಚಕನೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇವಸ್ಥಾನವು ವನ್ಯಪ್ರಾಣಿಗಳ ಕಾನೂನುಬಾಹಿರ ಮಾರಾಟ ದಂಧೆಯಲ್ಲಿ ತೊಡಗಿಕೊಂಡಿದೆ ಎಂಬ ಆರೋಪಗಳನ್ನು ಸಮರ್ಥಿಸುವ ಇನ್ನೊಂದು ಪುರಾವೆ ಇದಾಗಿದೆ.

ದೇವಸ್ಥಾನದಲ್ಲಿರುವ 100ಕ್ಕೂ ಅಧಿಕ ವಯಸ್ಕ ಹುಲಿಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯವೊಂದು ಆದೇಶ ನೀಡಿದ ಬಳಿಕ ಪೊಲೀಸರು ಮತ್ತು ವನ್ಯಜೀವಿ ಪಾಲಕರ ದೊಡ್ಡ ತಂಡವೇ ದೇವಸ್ಥಾನದ ಆವರಣದಲ್ಲಿ ಬೀಡುಬಿಟ್ಟಿದೆ.

ಪಶ್ಚಿಮ ಕಂಚನಾಬುರಿ ಪ್ರಾಂತದ ವಾಟ್ ಫ ಲುವಾಂಗ್ ಟ ಬುವ ಎಂಬ ಈ ವಿವಾದಾತ್ಮಕ ದೇವಸ್ಥಾನವು ದಶಕಗಳಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಇಲ್ಲಿ ಹುಲಿಗಳನ್ನು ತಟ್ಟಲು ಮತ್ತು ಅವುಗಳ ಜೊತೆಗೆ ನಿಂತು ಚಿತ್ರ ತೆಗೆಸಿಕೊಳ್ಳಲು ಪ್ರವಾಸಿಗರಿಂದ ಭಾರೀ ಪ್ರಮಾಣದಲ್ಲಿ ಶುಲ್ಕ ಪಡೆಯಲಾಗುತ್ತದೆ. ಈ ಸಂದರ್ಭದಲ್ಲಿ ಹುಲಿಗಳಿಗೆ ಮತ್ತು ಬರಿಸುವ ಔಷಧಿಗಳನ್ನು ಭಾರೀ ಪ್ರಮಾಣದಲ್ಲಿ ನೀಡಲಾಗುತ್ತದೆ ಎಂದು ಅವರು ಆರೋಪಿಸುತ್ತಾರೆ.

ಶೋಧ ಕಾರ್ಯಾಚರಣೆಯ ವೇಳೆ ದೇವಸ್ಥಾನದ ಒಳಗಿರು ಫ್ರೀಝರ್ ಒಂದರಿಂದ 40ಕ್ಕೂ ಅಧಿಕ ಹುಲಿ ಮರಿಗಳ ಕಳೇಬರಗಳನ್ನು ಪತ್ತೆಹಚ್ಚಲಾಗಿತ್ತು. ಪುರೋಹಿತರ ಮನೆಗಳಲ್ಲೂ ಹುಲಿಗಳ ವಿವಿಧ ಭಾಗಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News