ಟ್ರಂಪ್ ಓರ್ವ ವಂಚಕ: ಹಿಲರಿ ಕ್ಲಿಂಟನ್
Update: 2016-06-02 20:54 IST
ವಾಶಿಂಗ್ಟನ್, ಜೂ. 2: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಓರ್ವ ವಂಚಕ ಎಂಬುದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಹಿಲರಿ ಕ್ಲಿಂಟನ್ ಆರೋಪಿಸಿದ್ದಾರೆ. ತನ್ನ ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ವಂಚಿಸಿದ ರೀತಿಯಲ್ಲಿಯೇ ಅಮೆರಿಕನ್ನರನ್ನು ವಂಚಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಹಿಲರಿ ಹೇಳಿದ್ದಾರೆ.
ಶ್ರಮಜೀವಿ ಅಮೆರಿಕನ್ನರ ಹೆಸರಿನಲ್ಲಿ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಟ್ರಂಪ್ ‘ವಂಚನಾ ಯೋಜನೆ’ಯೊಂದನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ಟ್ಯೂಶನ್ ಶುಲ್ಕವನ್ನು ಭರಿಸಲು ಸಾಧ್ಯವಿಲ್ಲದ ವಿದ್ಯಾರ್ಥಿಗಳು ತನ್ನ ಕಾಲೇಜಿಗೆ ಸೇರುವಂತೆ ಮಾಡಲು ಟ್ರಂಪ್ ಯತ್ನಿಸಿದ್ದರು ಎಂಬ ಕುರಿತ ದಾಖಲೆಗಳು ಈಗ ಹೊರಬಿದ್ದಿರುವುದನ್ನು ಸ್ಮರಿಸಬಹುದಾಗಿದೆ.