ಬಾಲ್ಯವಿವಾಹ ಹಿಂದೂಗಳಲ್ಲೇ ಅತ್ಯಧಿಕ!
ಭಾರತದಲ್ಲಿ ಸುಮಾರು 12 ದಶಲಕ್ಷ ಭಾರತೀಯ ಮಕ್ಕಳು ಹತ್ತು ವರ್ಷಕ್ಕಿಂತ ಕೆಳಗಿನ ವಯಸ್ಸಲ್ಲೇ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾರೆ. ಈ ಪೈಕಿ ಶೇಕಡ 84ರಷ್ಟು ಹಿಂದೂಗಳು ಹಾಗೂ ಶೇಕಡ 11ರಷ್ಟು ಮುಸ್ಲಿಮರು ಎನ್ನುವುದು ಇತ್ತೀಚೆಗೆ ಬಿಡುಗಡೆಯಾದ ಜನಗಣತಿ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ
ಈ ಅಂಕಿ ಸಂಖ್ಯೆಗಳನ್ನು ಹೆಚ್ಚು ನಿಖರವಾಗಿ ಹೇಳಬೇಕು ಎಂದರೆ ಬಾಲ್ಯವಿವಾಹಿತರ ಪ್ರಮಾಣ ಜಮ್ಮು ಕಾಶ್ಮೀರದ ಜನಸಂಖ್ಯೆಯಷ್ಟು. ಬಾಲ್ಯವಿವಾಹಕ್ಕೆ ಒಳಗಾದವರಲ್ಲಿ ಶೇಕಡ 65ರಷ್ಟು ಅಂದರೆ 7.84 ದಶಲಕ್ಷ ಮಂದಿ ಮಹಿಳೆಯರು. ಇದರಿಂದ ಈ ಅನಿಷ್ಟಕ್ಕೆ ಬಲಿಯಾಗುತ್ತಿರುವವರು ಬಾಲಕಿಯರೇ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗೆ ವಿವಾಹ ಬಂಧನಕ್ಕೆ ಒಳಗಾಗುತ್ತಿರುವ ಪ್ರತಿ ಹತ್ತು ಅನಕ್ಷರಸ್ಥ ಮಕ್ಕಳ ಪೈಕಿ ಎಂಟು ಮಂದಿ ಬಾಲಕಿಯರೇ ಎನ್ನುವುದು ಗಮನಾರ್ಹ.
ಈ ಅಂಕಿ ಅಂಶಗಳಿಂದ ತಿಳಿದುಬರುವ ಇನ್ನೊಂದು ಮಹತ್ವದ ಅಂಶವೆಂದರೆ, 10 ವರ್ಷಕ್ಕಿಂತ ಮುನ್ನ ವಿವಾಹವಾಗುತ್ತಿರುವ ಹಿಂದೂ ಬಾಲಕಿಯರ ಪೈಕಿ ಶೇಕಡ 72ರಷ್ಟು ಮಂದಿ ಗ್ರಾಮೀಣ ಭಾಗದವರು.
ಮುಸ್ಲಿಂ ಹುಡುಗಿಯರ ಪೈಕಿ ಗ್ರಾಮೀಣರು ಶೇಕಡ 58.5 ಮಂದಿ ಮಾತ್ರ. ಶಿಕ್ಷಣ ಮಟ್ಟ ಹೆಚ್ಚಿದಷ್ಟೂ ವಿವಾಹ ವಿಳಂಬವಾಗುತ್ತಿರುವ ಅಂಶ ಕೂಡಾ ವ್ಯಕ್ತವಾಗಿದೆ.
ಜೈನ ಮಹಿಳೆಯರು ಸರಿಸುಮಾರು ವಯಸ್ಸು ಅಂದರೆ ಸರಾಸರಿ 20.8 ವರ್ಷಕ್ಕೆ ವಿವಾಹವಾಗುತ್ತಾರೆ. ಕ್ರೆಸ್ತ ಮಹಿಳೆಯರ ಸರಾಸರಿ ವಿವಾಹ ವಯಸ್ಸು 20.6 ಹಾಗೂ ಸಿಖ್ ಮಹಿಳೆಯರ ಸರಾಸರಿ ವಿವಾಹ ವಯಸ್ಸು 19.9. ಹಿಂದೂ ಹಾಗೂ ಮುಸ್ಲಿಂ ಮಹಿಳೆಯರ ಸರಾಸರಿ ವಿವಾಹ ವಯಸ್ಸು ಕನಿಷ್ಠ ಅಂದರೆ 16.7ರಷ್ಟಿದೆ ಎನ್ನುವುದು ‘ನಿರಂತರ’ ಎಂಬ ದಿಲ್ಲಿ ಮೂಲದ ಸ್ವಯಂಸೇವಾ ಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಸ್ಪಷ್ಟವಾಗಿದೆ.
ನಗರ ಪ್ರದೇಶದ ಮಹಿಳೆಯರು ಗ್ರಾಮೀಣ ಮಹಿಳೆಯರಿಗಿಂತ ಸರಾಸರಿ ಎರಡು ವರ್ಷ ವಿಳಂಬವಾಗಿ ವಿವಾಹ ಬಂಧನಕ್ಕೆ ಒಳಪಡುತ್ತಾರೆ. ಅಂಕಿ ಅಂಶಗಳ ವಿಶ್ಲೇಷಣೆಯಿಂದ ವ್ಯಕ್ತವಾಗಿರುವ ಇನ್ನೊಂದು ಕುತೂಹಲಕರ ಅಂಶವೆಂದರೆ, ಅನಕ್ಷರಸ್ಥ ಅಥವಾ ಕಡಿಮೆ ಶಿಕ್ಷಣ ಹೊಂದಿದ ಹೆಣ್ಣುಮಕ್ಕಳು ಹದಿಹರೆಯದಲ್ಲೇ ಗರ್ಭಿಣಿಯರಾಗುವುದು ಹಾಗೂ ತಾಯಂದಿರಾಗುವುದು ಅಕ. 12ನೆ ತರಗತಿ ಅಥವಾ ಹೆಚ್ಚು ಶಿಕ್ಷಣ ಪಡೆದ ಮಹಿಳೆಯರು ಹದಿಹರೆಯದಲ್ಲಿ ಗರ್ಭವತಿಯರಾಗುವ ನಿದರ್ಶನಗಳು ತೀರಾ ಅಪರೂಪ ಎನ್ನುವುದು ತಿಳಿದುಬಂದಿದೆ.
ಅನಕ್ಷರಸ್ಥರೇ ಅಧಿಕ
ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ವಿವಾಹ ಬಂಧಕ್ಕೆ ಒಳಗಾಗುತ್ತಿರುವವರ ಪೈಕಿ ಶೇಕಡ 80ಕ್ಕಿಂತ ಅಕ ಮಂದಿ ಅಂದರೆ 54 ಲಕ್ಷ ಬಾಲಕಿಯರು ಅನಕ್ಷರಸ್ಥರು. ಅಂದರೆ ಶಿಕ್ಷಣ ಮಟ್ಟ ಕಡಿಮೆ ಇದ್ದಷ್ಟೂ ಶೀಘ್ರ ವಿವಾಹವಾಗುವ ನಿದರ್ಶನಗಳೂ ಅಕ. ಸಮೀಕ್ಷೆಗೆ ಒಳಪಡಿಸಿದವರ ಪೈಕಿ 1000 ಪುರುಷರಿಗೆ ಗಂಧಗಾಳಿ ಇಲ್ಲದಿದ್ದರೆ, ಶಾಲೆಯ ಮೆಟ್ಟಲು ಹತ್ತದ ಮಹಿಳೆಯರ ಸಂಖ್ಯೆ ಪ್ರತಿ 1000 ಪುರುಷರಿಗೆ 1403ರಷ್ಟಿದೆ.
ಅಭಿವೃದ್ಧಿಶೀಲ ದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ಕೈಗೆಟುಕದ ಬಾಲಕಿಯರು ಬೇಗ ವಿವಾಹವಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವಿಶ್ವಬ್ಯಾಂಕ್ ಶಿಕ್ಷಣ ವಿಭಾಗದ ಸಲಹೆಗಾರರಾದ ಕ್ವೆಂಟಿನ್ ವೊಂಡನ್. ಬಾಲಕಿಯರಿಗೆ ಉತ್ತಮ ಹಾಗೂ ಸುರಕ್ಷಿತ ಉದ್ಯೋಗಾವಕಾಶ ಕಲ್ಪಿಸಿದರೆ, ಬಾಲ್ಯ ವಿವಾಹಕ್ಕೆ ತಡೆ ಒಡ್ಡಬಹುದು ಎನ್ನುವುದು ಅವರ ಅಭಿಪ್ರಾಯ. ಅಂತೆಯೇ ನೀರು, ವಿದ್ಯುತ್‌ನಂಥ ಮೂಲಸೌಕರ್ಯ ಲಭ್ಯವಾದಲ್ಲಿ ಮಕ್ಕಳು ಶಾಲೆಗೆ ಹೋಗುವ ಸಾಧ್ಯತೆ ಅಕ ಎಂದು ವೊಂಡೊನ್ ಅಭಿಪ್ರಾಯಪಡುತ್ತಾರೆ.
ಬಾಲ್ಯವಿವಾಹ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುವ ಇನ್ನೊಂದು ಪ್ರಮುಖ ಅಂಶವೆಂದರೆ ಶೇಕಡ 30ರಷ್ಟು ಬಾಲಕಿಯರು ಕಾನೂನುಬದ್ಧ ವಯಸ್ಸಿಗಿಂತ ಮುನ್ನ ವಿವಾಹ ಬಂಧನಕ್ಕೆ ಒಳಗಾದರೆ, ಶೇಕಡ 42ರಷ್ಟು ಬಾಲಕರು ಕಾನೂನು ಬದ್ಧವಾಗಿ ಪರಿಪಕ್ವವಾಗುವ ವಯಸ್ಸಿನ ಮುನ್ನವೇ ವಿವಾಹವಾಗುತ್ತಿದ್ದಾರೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಅನ್ವಯ ಭಾರತದಲ್ಲಿ ಬಾಲಕಿಯರ ಕನಿಷ್ಠ ವಿವಾಹ ವಯಸ್ಸು 18 ಹಾಗೂ ಪುರುಷರ ಕನಿಷ್ಠ ವಿವಾಹಯೋಗ್ಯ ವಯಸ್ಸು 21. ಮುಸ್ಲಿಂ ಬಾಲಕಿ ಪ್ರೌಢ ವಯಸ್ಸಿಗೆ ಬಂದ ತಕ್ಷಣ ಅಂದರೆ 15ನೆ ವರ್ಷದಲ್ಲೇ ವಿವಾಹವಾಗಬಹುದು ಎಂಬ ಮುಸ್ಲಿಂ ವೈಯಕ್ತಿಕ ಕಾನೂನನ್ನು ದಿಲ್ಲಿ ಹಾಗೂ ಗುಜರಾತ್ ಹೈಕೋರ್ಟ್‌ಗಳು ಭಿನ್ನ ಪ್ರಕರಣಗಳಲ್ಲಿ ಎತ್ತಿ ಹಿಡಿದಿವೆ.
2011ರಲ್ಲಿ ದೇಶದಲ್ಲಿ 102 ದಶಲಕ್ಷ ಬಾಲಕಿಯರು ಅಂದರೆ ಒಟ್ಟು ಮಹಿಳಾ ಜನಸಂಖ್ಯೆಯ ಪೈಕಿ ಶೇಕಡ 30ರಷ್ಟು ಮಂದಿ ಪರಿಪಕ್ವ ವಯಸ್ಸಿಗೆ ಮುನ್ನವೇ ವಿವಾಹವಾಗಿದ್ದಾರೆ. 2001ರಲ್ಲಿ ಈ ಪ್ರಮಾಣ 11.9 ದಶಲಕ್ಷ ಅಂದರೆ ಒಟ್ಟು ಮಹಿಳಾ ಜನಸಂಖ್ಯೆಯ ಶೇಕಡ 44 ಆಗಿತ್ತು. ಅಂದರೆ ಒಂದು ದಶಕದಲ್ಲಿ ಶೇಕಡ 10ರಷ್ಟು ಇಳಿಕೆ ಕಂಡಿದೆ.
2011ರಲ್ಲಿ ಹುಡುಗರಲ್ಲಿ 125 ದಶಲಕ್ಷ ಮಂದಿ ಅಂದರೆ ಒಟ್ಟು ಪುರುಷ ಜನಸಂಖ್ಯೆಯ ಶೇಕಡ 42ರಷ್ಟು ಮಂದಿ 21 ವರ್ಷ ಪೂರ್ಣಗೊಳ್ಳುವ ಮುನ್ನವೇ ವಿವಾಹವಾಗಿದ್ದಾರೆ. ಈ ಪ್ರಮಾಣ 2001ರಲ್ಲಿ 120 ದಶಲಕ್ಷ ಅಂದರೆ ಒಟ್ಟು ಪುರುಷ ಜನಸಂಖ್ಯೆಯ ಶೇಕಡ 49ರಷ್ಟು ಇತ್ತು. ಅಂದರೆ ಒಂದು ದಶಕದಲ್ಲಿ ಶೇಕಡ 10ರಷ್ಟು ಇಳಿಕೆ ಕಂಡುಬಂದಿದೆ.
(ಕೃಪೆ: ಇಂಡಿಯಾಸ್ಪೆಂಡ್.ಕಾಮ್)