ಉಡುಪಿ: ಸೀಮೆಎಣ್ಣೆಗೆ ಬಯೋಮೆಟ್ರಿಕ್ ಕೂಪನ್

Update: 2016-06-02 18:49 GMT

ಉಡುಪಿ, ಜೂ.2: ಜೂನ್‌ನಲ್ಲಿ ಉಡುಪಿ ಜಿಲ್ಲೆಯ ನಗರ ವ್ಯಾಪ್ತಿಯ ಆಯ್ದ ಹತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಸೀಮೆಎಣ್ಣೆಯನ್ನು ವಿತರಿಸಲು ಸೇವಾಕೇಂದ್ರಗಳ ಮೂಲಕ ಬಯೋಮೆಟ್ರಿಕ್ ಆಧಾರ್ ಕೂಪನ್ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಮುಂದಿನ ತಿಂಗಳಿನಿಂದ ಉಡುಪಿ ಜಿಲ್ಲಾದ್ಯಂತ ಇದೇ ಮಾದರಿ ಜಾರಿಗೆ ತರಲು ಆಹಾರ ಇಲಾಖೆ ಸೂಚನೆ ನೀಡಿದೆ.

ಪಡಿತರ ಅಂಗಡಿಯ ಮುಂದೆ ಕೂಪನ್ ಪಡೆಯುವ ವಿಧಾನ ಬಗ್ಗೆ ಕಾರ್ಡ್‌ದಾರರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಪಡಿತರ ದಾರರು ತಮ್ಮ ವ್ಯಾಪ್ತಿಯ ಪಡಿತರ ಅಂಗಡಿಗೆ ತೆರಳಿ ತಮ್ಮ ಆಧಾರ್ ಸಂಖ್ಯೆ ಮತ್ತು ಬಯೋ ಐಡೆಂಟಿಟಿ ನೀಡುವ ಮೂಲಕ ಎರಡು ಕೂಪನ್ ಜನರೇಟ್ ಮಾಡಿಕೊಳ್ಳಬೇಕು. ಅಥವಾ ಸ್ವತ: ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಆಗಿ ಕೂಪನ್ ಜನರೇಟ್ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ತಮ್ಮ ಮೊಬೈಲ್ ಸಂಖ್ಯೆಯ ಮೂಲಕ 9731979899 ನಂಬರ್‌ಗೆ -್ಟಛಿಛ್ಟಿಟ


- ಎಂದು ಎಸ್‌ಎಂಎಸ್ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಆಹಾರ ಇಲಾಖೆ ಅಥವಾ ಉಡುಪಿ ತಾಲೂಕು ಕಚೇರಿಯನ್ನು ಸಂಪರ್ಕಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಪ್ರಕಟನೆ ತಿಳಿಸಿದೆ. ಪ್ರಾಯೋಗಿಕವಾಗಿ ಸೀಮೆಎಣ್ಣೆ ವಿತರಣೆಗೆ ಆಯ್ಕೆ ಮಾಡಲಾದ 10 ನ್ಯಾಯಬೆಲೆ ಅಂಗಡಿಗಳ ಪಟ್ಟಿ ಈ ಕೆಳಗಿನಂತಿದೆ. 1.(17902-120) ಪರ್ಕಳ- ಸಿಎಸ್‌ಎಸ್ ಪರ್ಕಳ, 2.(17900-118) ಕೊರಂಗ್ರಪಾಡಿ ಸಿಎ ಬ್ಯಾಂಕ್ ಅಲೆವೂರು, 3.(17896-114) ಕೊಡವೂರು ಸಿಎ ಬ್ಯಾಂಕ್ ಕಡೆಕಾರ್, 4.(17895-113) ಕೊರಂಗ್ರಪಾಡಿ ಸಿಎ ಬ್ಯಾಂಕ್ ತೆಂಕನಿಡಿಯೂರು, 5.(17875-93) ಮಣಿಪಾಲ ಸಿಸಿಎಸ್ ಮಣಿಪಾಲ, 6.(17871-89) ಹೆರ್ಗ ಸಿಎ ಬ್ಯಾಂಕ್ ಮಣಿಪಾಲ, 7. (17892-110) ಗಣಪತಿ ಸಿಎ ಬ್ಯಾಂಕ್ ಬಡಾನಿಡಿಯೂರು, 8.(17874-92) ಕೊರಂಗ್ರಪಾಡಿ ಸಿಎ ಬ್ಯಾಂಕ್ ಕುಕ್ಕಿಕಟ್ಟೆ, 9. (17891-109) ಗಣಪತಿ ಸಿಎ ಬ್ಯಾಂಕ್ ಕೆಮ್ಮಣ್ಣು, 10. (17876-94) ಮಲ್ಪೆ ಎ್ಸಿಎಸ್ ಮಲ್ಪೆ. ಸೀಮೆಎಣ್ಣೆ ಕೂಪನ್ ಉಚಿತವಾಗಿ ಪಡೆಯಲು ಸಂಬಂಧಪಟ್ಟ ಗ್ರಾಪಂ ಹಾಗೂ ಉಡುಪಿ ತಾಲೂಕು ಕಚೇರಿಯನ್ನೂ ಸಂಪರ್ಕಿಸ ಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News