×
Ad

ಮಥುರಾ ಹಿಂಸಾಚಾರದ ಹಿಂದೆ 12 ಸಾವಿರ ಕೋಟಿ ಸಾಮ್ರಾಜ್ಯದ ಜೈ ಗುರುದೇವ್ !

Update: 2016-06-03 14:07 IST

ಮಥುರಾ : ನಗರದಲ್ಲಿ ಗುರುವಾರ ನಡೆದ ಹಿಂಸಾಚಾರದಲ್ಲಿ ಮಥುರಾ ಎಸ್ಪಿಹಾಗೂ ಇನ್ನೊಬ್ಬ ಪೊಲೀಸ್ ಅಧಿಕಾರಿ ಸಹಿತ 19 ಜನರು ಸಾವನ್ನಪ್ಪಿದ್ದರೆಇದೀಗಈ ಹಿಂಸೆಗೆ ಸ್ವಘೋಷಿತ ಆಧ್ಯಾತ್ಮಿಕ ಗುರು ಜೈ ಗುರುದೇವ್ ಅವರ ಅನುಯಾಯಿಗಳ ನಡುವಿನ ಕಲಹ ಕಾರಣವೆಂದು ಹೇಳಲಾಗುತ್ತಿದೆ. ಜೈ ಗುರುದೇವ್ ರೂ 12,000 ಕೋಟಿ ಬೆಲೆಯ ಸಾಮ್ರಾಜ್ಯದ ಒಡೆಯನಾಗಿದ್ದುಮಥುರಾ-ದೆಹಲಿ ರಾಷ್ಟ್ರೀಯ ಹೆದ್ದಾರಿಹಾಗೂ ಉತ್ತರಪ್ರದೇಶದ ಇಟಾವಾದಲ್ಲಿ ವೈಭವೋಪೇತಆಶ್ರಮಗಳನ್ನು ಹೊಂದಿದ್ದಾನೆ.

ಆತನ ಒಡೆತನದ ಆಸ್ತಿಗಳಲ್ಲಿ ರೂ 4000 ಕೋಟಿ ಮೌಲ್ಯದ ಭೂಮಿ, ರೂ 150 ಕೋಟಿಗೂ ಅಧಿಕ ಮೌಲ್ಯದ ಮರ್ಸಿಡಿಸ್, ಪ್ಲೈಮೌತ್ ಸಹಿತ ಹಲವಾರು ಐಷಾರಾಮಿ ಕಾರುಗಳು ಹಾಗೂ ರೂ 100 ಕೋಟಿಗೂ ಅಧಿಕ ಮೌಲ್ಯದ ಬ್ಯಾಂಕ್ ಠೇವಣಿಗಳು ಸೇರಿವೆ.

ಪ್ರತಿ ದಿನ ಗುರುದೇವ್ ಅನುಯಾಯಿಗಳು ಆಶ್ರಮಗಳಿಗೆ ನೀಡುವ ಕಾಣಿಕೆಯೇ ಸುಮಾರು ರೂ 10 ರಿಂದ 12 ಲಕ್ಷಗಳಷ್ಟಾಗುತ್ತದೆ ಎಂದು ಮೂಲಗಳು ತಿಳಿಸುತ್ತವೆ. ಗುರುದೇವ್ ನ ಮೂಲ ಹೆಸರು ತುಲಸೀದಾಸ್ ಮಹಾರಾಜ್ ಎಂದಾಗಿದೆ ಹಾಗೂ ಆತ 2012 ರಲ್ಲಿ ಸಾವನ್ನಪ್ಪಿದ್ದಾನೆಂದು ಹೇಳಲಾಗುತ್ತಿದೆ.

ಎರಡು ವರ್ಷಗಳ ಹಿಂದೆ ಗುರುದೇವ್ ಅನುಯಾಯಿಗಳು ಮಥುರಾದ ಜವಾಹರ್ ಬಾಗ್ ಪ್ರದೇಶದ ನೂರಾರು ಎಕರೆ ಪ್ರದೇಶಗಳನ್ನು ಧರಣಿಯ ನೆಪದಲ್ಲಿ ಆಕ್ರಮಿಸಿಕೊಂಡಿದ್ದರು.

ಸ್ವಾಧೀನ್ ಭಾರತ್ ಆಂದೋಲನ್ ಎಂಬ ಹೆಸರಿನ ಗುರುದೇವ್ ಅನುಯಾಯಿಗಳ ವಿಭಜಿತ ಗುಂಪೊಂದುಗುರುವಾರ ಪೊಲೀಸರು ಅವರನ್ನು ಜವಾಹರ್ ಬಾಗ್ ನಿದ ಹೊರದಬ್ಬಲು ಯತ್ನಿಸಿದಾಗ ಅವರೊಂದಿಗೆ ಕಾಳಗ ಮಾಡಲು ಶುರುವಿಟ್ಟುಕೊಂಡಿದ್ದುಈ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಸಹಿತ 19 ಮಂದಿ ಸಾವಿಗೀಡಾಗಿದ್ದರು.

ಸುಮಾರು 3000 ಮಂದಿ ಪೊಲೀಸರತ್ತ ಕಲ್ಲು ತೂರಿ ನಂತರ ಗುಂಡು ಹಾರಿಸಿದ್ದರು. ಅವರ ಬಳಿ ಗ್ರೆನೇಡುಗಳು ಹಾಗೂ ಸ್ವಯಂಚಾಲಿತ ಆಯುಧಗಳಿದ್ದವೆಂದು ಹೇಳಲಾಗುತ್ತಿದೆ. ಪ್ರದೇಶದಿಂದ ಪೊಲೀಸರು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ.

ಆ ಪ್ರದೇಶದ ಒತ್ತುವರಿ ತೆರವುಗೊಳಿಸಬೇಕೆಂಬ ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳುವಾಗ ಘರ್ಷಣೆ ನಡೆದಿತ್ತು.

ಸಮಾಜವಾದಿ ಪಕ್ಷ ನಾಯಕ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಕಿರಿಯ ಸಹೋದರ ಶಿವಪಾಲ್ ಸಿಂಗ್ ಯಾದವ್ ಕೂಡ ಗುರುದೇವ್ ಅಭಿಮಾನಿಗಳೆಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News