ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ ವಲಸಿಗ ಹಡಗು 300 ಮಂದಿಯ ರಕ್ಷಣೆ

Update: 2016-06-03 14:03 GMT

ಅಥೆನ್ಸ್, ಜೂ. 3: ಗ್ರೀಸ್ ದ್ವೀಪ ಕ್ರೆಟೆಯ ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಅರ್ಧ ಮುಳುಗಿರುವ ದೋಣಿಯಿಂದ ಭಾರೀ ಪ್ರಮಾಣದಲ್ಲಿರುವ ವಲಸಿಗರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ ಎಂದು ಗ್ರೀಸ್ ಅಧಿಕಾರಿಗಳು ಹೇಳಿದ್ದಾರೆ.
ಈವರೆಗೆ ಸುಮಾರು 302 ವಲಸಿಗರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.
25-30 ಮೀಟರ್ ಉದ್ದದ ದೊಡ್ಡ ಮೀನಿನ ದೋಣಿಯಂತೆ ಕಂಡುಬರುವ ನೌಕೆಯನ್ನು ಕ್ರೆಟೆಯ ದಕ್ಷಿಣಕ್ಕೆ 75 ನಾಟಿಕಲ್ ಮೈಲಿ ದೂರದಲ್ಲಿ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಅರ್ಧ ಮುಳುಗಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಹಚ್ಚಲಾಗಿದೆ ಎಂದು ತಟರಕ್ಷಣಾ ಪಡೆ ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ಗ್ರೀಸ್ ಎರಡು ಗಸ್ತು ದೋಣಿಗಳು ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಿದೆ. ದುರಂತ ನಡೆದ ಸಮೀಪದಲ್ಲಿರುವ ನಾಲ್ಕು ಹಡಗುಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News