ಇಂಡೋನೇಷ್ಯಾ ಸೂಪರ್ ಸರಣಿ : ಸೈನಾ ಸವಾಲು ಅಂತ್ಯ
Update: 2016-06-03 22:52 IST
ಜಕಾರ್ತ, ಜೂ.3: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇಂಡೋನೇಷ್ಯಾ ಸೂಪರ್ ಸರಣಿ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಕಾರೊಲಿನಾ ಮರಿನ್ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಟೂರ್ನಿಯಲ್ಲಿ ಸ್ಪರ್ಧೆಯಲ್ಲಿದ್ದ ಭಾರತದ ಏಕೈಕ ಆಟಗಾರ್ತಿಯಾಗಿದ್ದ ಸೈನಾ ಶುಕ್ರವಾರ ಇಲ್ಲಿ ನಡೆದ 900,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಅಂತಿಮ 8 ಹಂತದಲ್ಲಿ ಸ್ಪೇನ್‌ನ ಮರಿನ್ ವಿರುದ್ಧ 22-24, 11-21 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದ್ದಾರೆ.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಸೈನಾ ಈ ಹಿಂದೆ 2009, 2010 ಹಾಗೂ 2012ರಲ್ಲಿ ಇಂಡೋನೇಷ್ಯಾ ಓಪನ್ ಟ್ರೋಫಿಯನ್ನು ಜಯಿಸಿದ್ದರು.
ಸೈನಾ ಗುರುವಾರ ನಡೆದಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಳೀಯ ಆಟಗಾರ್ತಿ ಫಿಟ್ರಿಯಾನಿ ವಿರುದ್ಧ 21-11, 21-10 ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು.