×
Ad

ಬ್ಯಾಟ್‌ಗಳ ಅಳತೆ ಮಿತಿಗೆ ಕ್ರಿಕೆಟ್ ಸಮಿತಿ ಸಲಹೆ

Update: 2016-06-03 22:59 IST

ಲಂಡನ್, ಜೂ.3: ಕ್ರಿಕೆಟ್‌ನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಬ್ಯಾಟ್‌ಗಳ ಅಳತೆಯಲ್ಲಿ ಮಿತಿ ನಿಗದಿಪಡಿಸುವ ಬಗ್ಗೆ ದೀರ್ಘ ಚಿಂತನೆ ನಡೆಸುವ ಅಗತ್ಯವಿದೆ ಎಂದು ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಅಧ್ಯಕ್ಷತೆಯ ಐಸಿಸಿ ಕ್ರಿಕೆಟ್ ಸಮಿತಿ ಸಲಹೆ ನೀಡಿದೆ.

ಟ್ವೆಂಟಿ-20 ಹಾಗೂ ಏಕದಿನ ಪಂದ್ಯಗಳಲ್ಲಿ ಉದ್ದದ ಬ್ಯಾಟ್‌ನ್ನು ಬಳಸುತ್ತಿರುವ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳನ್ನು ಚೆನ್ನಾಗಿ ದಂಡಿಸುತ್ತಿದ್ದಾರೆ. ಇದು ಕ್ರಿಕೆಟ್ ಪಂದ್ಯವನ್ನು ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿಸುತ್ತಿದೆ ಎಂದು ಕ್ರಿಕೆಟ್ ಪಂಡಿತರು ಚಿಂತೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಹೆಲ್ಮೆಟ್ ಧರಿಸದೇ ಆಡುತ್ತಿರುವ ಬಗ್ಗೆ ಮಾಜಿ ನಾಯಕರಾದ ರಾಹುಲ್ ದ್ರಾವಿಡ್, ಮಹೇಲ ಜಯವರ್ಧನೆ ಹಾಗೂ ಆ್ಯಂಡ್ರೂ ಸ್ಟ್ರಾಸ್ ಅವರನ್ನೊಳಗೊಂಡ ಕ್ರಿಕೆಟ್ ಸಮಿತಿ ಆತಂಕ ವ್ಯಕ್ತಪಡಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News