ಫಿಫಾ ಮುಖ್ಯ ಕಚೇರಿಯಲ್ಲಿ ಸ್ವಿಸ್ ಅಧಿಕಾರಿಗಳ ಶೋಧ ಕಾರ್ಯ, ದಾಖಲೆಗಳ ಜಪ್ತಿ

Update: 2016-06-03 17:31 GMT

 ಝೂರಿಕ್, ಜೂ.3: ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾವನ್ನು ಸುತ್ತುವರಿದಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸುತ್ತಿರುವ ಸ್ವಿಸ್ ಅಧಿಕಾರಿಗಳು ಝೂರಿಕ್‌ನಲ್ಲಿರುವ ಫಿಫಾದ ಮುಖ್ಯ ಕಚೇರಿಗೆ ಮತ್ತೊಮ್ಮೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ದತ್ತಾಂಶವನ್ನು ಜಪ್ತಿ ಮಾಡಿದ್ದಾರೆ ಎಂದು ಸ್ವಿಸ್ ಅಟಾರ್ನಿ ಜನರಲ್ ಶುಕ್ರವಾರ ತಿಳಿಸಿದ್ದಾರೆ.

‘‘ಫಿಫಾ ವಿರುದ್ಧ ಈಗ ನಡೆಯುತ್ತಿರುವ ಕ್ರಿಮಿನಲ್ ತನಿಖೆಯ ಭಾಗವಾಗಿ ಸ್ವಿಟ್ಝರ್ಲೆಂಡ್‌ನ ಅಟಾರ್ನಿ ಜನರಲ್(ಒಎಜಿ) ಜೂ.2 ರಂದು ಫಿಫಾದ ಮುಖ್ಯ ಕಚೇರಿಗೆ ತೆರಳಿ ಶೋಧ ಕಾರ್ಯ ನಡೆಸಿದ್ದಾರೆ. ತನಿಖೆಯ ವೇಳೆ ಬೆಳಕಿಗೆ ಬಂದ ಮಾಹಿತಿಯನ್ನು ಖಚಿತಪಡಿಸಲು ಹಾಗೂ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುವ ಉದ್ದೇಶದಿಂದ ಫಿಫಾ ಕಚೇರಿಯನ್ನು ಜಾಲಾಡಲಾಗಿದೆ’’ ಎಂದು ಒಎಜಿ ಪ್ರಕಟನೆಯಲ್ಲಿ ತಿಳಿಸಿದೆ.

ಈ ಮೊದಲು ಒಎಜಿ ಪ್ರಕಟನೆಯಲ್ಲಿ ಹೆಸರಿಸಿರುವ ವ್ಯಕ್ತಿಗಳು ಮಾತ್ರ ತನಿಖೆಯ ವ್ಯಾಪ್ತಿಗೆ ಬರಲಿದ್ದಾರೆ. ಫಿಫಾದ ಹಾಲಿ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ತನಿಖಾ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಎಜಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News