×
Ad

ಬಿಶಪ್‌ಗಳ ವಜಾ ಪ್ರಕ್ರಿಯೆಗೆ ಪೋಪ್ ಚಾಲನೆ ಅತ್ಯಾಚಾರಿಗಳನ್ನು ರಕ್ಷಿಸಿದ ಆರೋಪ

Update: 2016-06-04 22:27 IST

ವ್ಯಾಟಿಕನ್ ಸಿಟಿ, ಜೂ. 4: ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸುವಲ್ಲಿ ವಿಫಲರಾದ ಬಿಶಪ್‌ಗಳನ್ನು ವಜಾಗೊಳಿಸುವ ಕಾನೂನು ವಿಧಿವಿಧಾನಗಳಿಗೆ ಪೋಪ್ ಫ್ರಾನ್ಸಿಸ್ ಚಾಲನೆ ನೀಡಿದ್ದಾರೆ. ತಮ್ಮ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ವ್ಯಾಟಿಕನ್‌ಗೆ ಮನವರಿಕೆಯಾದರೆ ಈ ಬಿಶಪ್‌ಗಳನ್ನು ಅಧಿಕಾರದಿಂದ ಉಚ್ಚಾಟಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಜನರನ್ನು ಶಿಶುಕಾಮಿಗಳಿಂದ ರಕ್ಷಿಸಲು ವಿಫಲರಾಗಿರುವುದಕ್ಕಾಗಿ ಬಿಶಪ್‌ಗಳನ್ನು ಹೊಣೆಗಾರರಾಗಿಸುವಂತೆ ಕೋರುವ ದೌರ್ಜನ್ಯಗಳ ಸಂತ್ರಸ್ತರು ಹಾಗೂ ಅವರ ಬೆಂಬಲಿಗರ ದೀರ್ಘಕಾಲೀನ ಬೇಡಿಕೆಗಳಿಗೆ ಪೋಪ್ ಈ ರೀತಿಯಾಗಿ ಸ್ಪಂದಿಸಿದ್ದಾರೆ.

ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸವನ್ನು ಬಿಶಪ್‌ಗಳು ಮಾಡುತ್ತಿದ್ದಾರೆ, ಅವರನ್ನು ಪೊಲೀಸರಿಗೆ ಒಪ್ಪಿಸುವ ಬದಲು ಪ್ಯಾರಿಶ್‌ನಿಂದ ಪ್ಯಾರಿಶ್‌ಗೆ ಕಳುಹಿಸುತ್ತಿದ್ದಾರೆ ಎಂಬುದಾಗಿ ಸಂತ್ರಸ್ತರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News