ವಿಮಾನವಾಹಕ ನೌಕೆಯಿಂದ ಐಸಿಸ್ ನೆಲೆಗಳ ಮೇಲೆ ದಾಳಿ
Update: 2016-06-04 22:34 IST
ವಾಶಿಂಗ್ಟನ್, ಜೂ. 4: ಮೆಡಿಟರೇನಿಯನ್ ಸಮುದ್ರದಲ್ಲಿರುವ ವಿಮಾನವಾಹಕ ನೌಕೆಯೊಂದರಿಂದ ಅಮೆರಿಕದ ಯುದ್ಧ ವಿಮಾನಗಳು ಶುಕ್ರವಾರ ಐಸಿಸ್ ನೆಲೆಗಳ ಮೇಲೆ ದಾಳಿ ನಡೆಸಿವೆ. ಭಯೋತ್ಪಾದನೆ ಸಂಘಟನೆ ವಿರುದ್ಧ ಎರಡು ವರ್ಷಗಳ ಹಿಂದೆ ಸೇನಾ ಕಾರ್ಯಾಚರಣೆ ಆರಂಭಗೊಂಡಂದಿನಿಂದ ವಿಮಾನವಾಹಕ ನೌಕೆಯೊಂದರಿಂದ ಅಮೆರಿಕದ ಪಡೆಗಳು ದಾಳಿ ನಡೆಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಯುಎಸ್‌ಎಸ್ ಹ್ಯಾರಿ ಎಸ್ ಟ್ರೂಮನ್ ಸೂಯಝ್ ಕಾಲುವೆ ಮೂಲಕ ಮೆಡಿಟರೇನಿಯನ್ ಸಮುದ್ರಕ್ಕೆ ಬಂದಿದ್ದು, ಈ ನೌಕೆಯಿಂದ ಯುದ್ಧ ವಿಮಾನಗಳು ಹಾರಾಟ ನಡೆಸಿವೆ. 2003ರಲ್ಲಿ ಇರಾಕ್ ಯುದ್ಧ ಆರಂಭಗೊಂಡ ಬಳಿಕ ಈ ವಲಯದಿಂದ ಮೊದಲ ಬಾರಿಗೆ ವಿಮಾನವಾಹಕ ನೌಕೆಯೊಂದರಿಂದ ಯುದ್ಧ ವಿಮಾನಗಳು ಹಾರಾಟ ನಡೆಸಿದಂತಾಗಿದೆ.
ಇರಾಕ್ ಮತ್ತು ಸಿರಿಯಗಳಲ್ಲಿನ ಐಸಿಸ್ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ನೌಕಾ ಪಡೆ ಹೇಳಿದೆ.
ಈ ವಲದಯದಲ್ಲಿ ರಶ್ಯದ ಸೇನೆಯ ಹೆಚ್ಚುತ್ತಿರುವ ಉಪಸ್ಥಿತಿಯಿಂದ ಅಮೆರಿಕ ಕಳವಳಗೊಂಡಿತ್ತು.