ನಮ್ಮ ಪಾಲಿನ ಸೋಲಿಲ್ಲದ ಸೂಪರ್ ಮ್ಯಾನ್ ದಿ ಗ್ರೇಟೆಸ್ಟ್ ಅಲಿ

Update: 2016-06-05 07:24 GMT

ನಾನು ಮುಹಮ್ಮದ್ ಅಲಿ ಬಾಕ್ಸಿಂಗ್ ಕಣದಲ್ಲಿ ಹೋರಾಡುವುದನ್ನು ಟಿವಿಯಲ್ಲಿ ನೋಡಿಯೇ ಇಲ್ಲ. ಜೋ ್ರೆಝಿಯರ್ ವಿರುದ್ಧದ ಆ ಶ್ರೇಷ್ಠ ಸ್ಪರ್ಧೆ ಯನ್ನೂ ನಾನು ನೋಡಿಲ್ಲ. 1970 ರ ದಶಕದಲ್ಲಿ ಈಗಿನಂತೆ ನಮಗೆ ಮನರಂಜನೆ ನೀಡಲು ಹಲವಾರು ಕ್ರೀಡಾ ಟಿವಿ ಚಾನೆಲ್ ಗಳು ಇರಲಿಲ್ಲ. ಆದರೆ ಅಲಿ ನಮ್ಮ ಕಲ್ಪನೆಯೊಳಗೆ ಶಾಶ್ವತವಾಗಿ ನೆಲೆಸಿದ್ದ ಕ್ರೀಡಾಪಟು. ಕೆಲವು ದಂತಕತೆಗಳನ್ನು ನಾವು ನೇರವಾಗಿ ನೋಡಲೇ ಬೇಕೆಂದಿಲ್ಲ.

ಗೆಯೇ ಅಲಿ ೈಟ್ ಮಾಡುವುದನ್ನು ನೋಡಿಯೇ ಆತನ ಅಭಿಮಾನಿಯಗಬೇಕಾಗಿಲ್ಲ. ೈಟಿಂಗ್ ರಿಂಗ್ ಕೇವಲ ಒಂದು ಸೈಡ್ ಶೋ ಮಾತ್ರ ಆಗಿತ್ತು ಅಲಿಗೆ. ಆತನಿಗೆ ಇಡೀ ಜಗತ್ತೇ ವೇದಿಕೆಯಾಗಿತ್ತು. ಅಲಿ ಕೇವಲ ಆ ಪೀಳಿಗೆಯ ಶ್ರೇಷ್ಠ ಬಾಕ್ಸರ್ ಮಾತ್ರ ಆಗಿರಲಿಲ್ಲ, ಆತ ಈವರೆಗಿನ ಅತ್ಯಂತ ಶ್ರೇಷ್ಠ ಕ್ರೀಡಾಪಟು ಆಗಿದ್ದ . ಇದರ ಬಗ್ಗೆ ಅಲಿಗೆ ಖುದ್ದು ಸಂಶಯವಿರಲಿಲ್ಲ. ಹಿ ವಾಸ್ ದಿ ಗ್ರೇಟೆಸ್ಟ್. ಈ ಮಾತು ಬೇರೆ ಯಾವುದೇ ವ್ಯಕ್ತಿಯ ಬಗ್ಗೆ ಹೇಳಿದ್ದರೆ ಭೊಪರಾಕ್ ಆಗುತ್ತಿತ್ತು. ಆದರೆ ಅಲಿಯ ದೈತ್ಯ ಪ್ರತಿಭೆಗೆ ಇದು ಅತ್ಯಂತ ಸಹಜ ಅಭಿವ್ಯಕ್ತಿ ಯಾಗಿತ್ತು. ಆತನ ಪ್ರತಿಯೊಂದು ಹೇಳಿಕೆಗೆ ನಾವು ಕಟ್ಟಾ ಅಭಿಮಾನಿ ಹುಡುಗರಂತೆ ಕೇಕೆ ಹಾಕುತ್ತಿದ್ದೆವು. ಆತ ನಮಗೆ ನೀಡುತ್ತಿದ್ದ ಥ್ರಿಲ್‌ಗಳಿಗೆ ಮಿತಿಯಿರಲಿಲ್ಲ. ಅಲಿ ನಾನು ಚಿಟ್ಟೆಯಂತೆ ತೇಲಿದೆ ಹಾಗೂ ಜೇನು ನೊಣದಂತೆ ಚುಚ್ಚಿದೆ ಎಂದಾಗ ನಾವದನ್ನು ನಂಬಿದ್ದೇವೆ. ನೀವು ಕನಸಿನಲ್ಲೂ ನನ್ನನ್ನು ಸೋಲಿಸುವ ಬಗ್ಗೆ ಯೋಚಿಸಿದರೆ, ನಿದ್ದೆಯಿಂದ ಎದ್ದು ಕ್ಷಮೆ ಯಾಚಿಸಿ ಎಂದು ಅಲಿ ಹೇಳಿದಾಗ ಅದು ನಮಗೆ ಸರಿ ಎನಿಸಿದೆ. ನಮ್ಮ ಪಾಲಿಗೆ ಆತ ಕೇವಲ ಒಬ್ಬ ಬಾಕ್ಸರ್ ಅಲ್ಲ, ಆತ ಸೋಲಿಲ್ಲದ ಸೂಪರ್ ಮ್ಯಾನ್ ನಮ್ಮ ಪಾಲಿಗೆ .

ಅಲಿಗಿಂತ ಉತ್ತಮ ಬಾಕ್ಸರ್‌ಗಳು ಇದ್ದರೆಂದು ನಾವು ಚರ್ಚಿಸಬಹುದು. ಜೋ ಲೂಯಿಸ್, ರಾಕಿ ಮರ್ಸಿಯಾನೋ, ಸಗರ್ ರೆ ಲಿಯೋನಾರ್ಡ್ - ಇವರೆಲ್ಲರೂ ಬಾಕ್ಸಿಂಗ್‌ನಲ್ಲಿ ಅಲಿಯಷ್ಟೇ ಉತ್ತಮ ದಾಖಲೆ ಇದ್ದವರು ಎಂದು ಹೇಳಬಹುದು. ಬಾಸ್ಕೆಟ್ ಬಾಲ್ ನಲ್ಲಿ ಮೈಕಲ್ ಜೋರ್ಡಾನ್, ಕ್ರಿಕೆಟ್‌ನಲ್ಲಿ ಡಾನ್ ಬ್ರಾಡ್ಮನ್, ಟೆನಿಸ್ ನಲ್ಲಿ ರೋಜರ್ ೆಡರರ್ ದಂತಕತೆಗಳಾಗಿದ್ದಾರೆ. ಅತ್ಯುತ್ತಮ ಬಾಕ್ಸರ್ ಆಗಿದ್ದಕ್ಕಿಂತಲೂ ಮಿಗಿಲಾಗಿ ಅಲಿ ಸಾಸಿದ್ದಕ್ಕೆ ಇವರು ಯಾರೂ ಸಾಟಿಯಲ್ಲ. ಆತನ ಪ್ರತಿಯೊಂದು ನಡೆಯೂ ದೊಡ್ಡ ಉದ್ದೇಶವೊಂದರ ಸಂಕೇತವಾಗುತ್ತಿತ್ತು. ಆಟ ಕೇವಲ ಜಗತ್ತಿನ ಹೆವಿವೇಟ್ ಚಾಂಪಿಯನ್ ಆಗಿರಲಿಲ್ಲ, ಅದನ್ನು ಮೀರಿದ ಹೆಗ್ಗುರುತಾಗಿ ಅಲಿ ಗುರುತಿಸಿಕೊಂಡ. ಅದು ಅಲಿಯಿಂದ ಮಾತ್ರ ಸಾಧ್ಯ. ಸವರ್ಣೀಯರ ಹೊಟೇಲ್‌ಗೆ ಪ್ರವೇಶ ನಿರಾಕರಿಸಿದಾಗ ತನ್ನ ಚಿನ್ನದ ಪದಕವನ್ನು ಓಹಿಯೋ ನದಿಗೆ ಬಿಸಾಡಿದ್ದಿರಬಹುದು, ತನ್ನ ಹೆವಿವೇಟ್ ಚಾಂಪಿಯನ್ ಪಟ್ಟ ಹೋದರೂ ಪರವಾಗಿಲ್ಲ ವಿಯೆಟ್ನಾಮ್ ಯುದ್ಧಕ್ಕೆ ಹೋಗುವುದಿಲ್ಲ ಎಂದಿದ್ದಾಗಲಿ, ಇಸ್ಲಾಂ ಸ್ವೀಕರಿಸಿದ್ದಾಗಲಿ ಅಲಿ ಯಾವತ್ತೂ ತಡೆಯಿಲ್ಲದ ಬಂಡಾಯಗಾರ. ಆಟದ ಪ್ರತಿಯೊಂದು ನಿಯಮವನ್ನು ಮುರಿದ ಆದರೂ ಗೆದ್ದ ಕ್ರೀಡಾ ಕ್ರಾಂತಿಕಾರಿ ಅಲಿ. ಆತನನ್ನು ಬಾಕ್ಸಿಂಗ್ ರಿಂಗ್‌ನಲ್ಲಿ ಸೋಲಿಸುವವರು ಯಾರೂ ಇರಲಿಲ್ಲ. ಹಾಗೆಯೇ ಆತನ ಸೂರ್ತಿ, ಚೈತನ್ಯವನ್ನು ಸೋಲಿಸುವವರೂ ಯಾರೂ ಇರಲಿಲ್ಲ. ಇಂದು ಬೆಳಗ್ಗೆ ಟಿವಿ ಶೋ ಒಂದರಲ್ಲಿ ನಾನು ಅಲಿಯನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಹೋಲಿಸಿದೆ.

ಬೇಡ್ಕರ್ ದಲಿತರಿಗೆ ಏನಾಗಿದ್ದರೋ, ಅಲಿ ಇಡೀ ಜಗತ್ತಿನ ಕರಿಯರಿಗೆ ಅದೇ ಆಗಿದ್ದ. ಬ್ರಾಹ್ಮಣ್ಯ ಯಜಮಾನಿಕೆಯ ಹಿಂದೂ ಧರ್ಮದ ವಿರುದ್ಧ ಪ್ರತಿಭಟನೆಯಾಗಿ ಅಂಬೇಡ್ಕರ್ ಬುದ್ಧ ಧರ್ಮ ಸ್ವೀಕರಿಸಿದರೆ, ಅಸಮಾನತೆಯ ವರ್ಣಭೇದದ ಸಮಾಜದ ವಿರುದ್ಧ ಅಲಿ ಇಸ್ಲಾಮನ್ನು ಆಯ್ಕೆ ಮಾಡಿಕೊಂಡ. ಕಾಸಿಯಸ್ ಕ್ಲೇ ಮುಹಮ್ಮದ್ ಅಲಿ ಆದಾಗ ಆತ ಕೇವಲ ತನ್ನ ಹೆಸರು ಮಾತ್ರ ಬದಲಾಯಿಸಿದ್ದಲ್ಲ, ಇಡೀ ಒಂದು ಪೀಳಿಗೆಗೆ ಆತ ಆ ಮೂಲಕ ಹೊಸ ಚೈತನ್ಯ ತುಂಬಿದ. ವರ್ಣ ಭೇದದ ವಿರುದ್ಧ ಮಾರ್ಟಿನ್ ಲೂಥರ್ ಕಿಂಗ್ ಶಾಂತಿಯುತ ಪ್ರತಿಭಟನೆಗೆ ನಾಯಕತ್ವ ನೀಡಿದರೆ , ಅಲಿ ಅದಕ್ಕೊಂದು ಮೊನಚು ನೀಡಿದ. ಹಾಗಾಗಿ ಅಲಿಯ ನಿಧನ ಕೇವಲ ಒಬ್ಬ ಕ್ರೀಡಾ ತಾರೆಯ ನಿಧನ ಅಲ್ಲ. ಅದು ಪ್ರಭುತ್ವದ ವಿರುದ್ಧದ ಹೀರೋಗಳನ್ನು ಜನರು ಅಭಿಮಾನದಿಂದ ಕಾಣುತ್ತಿದ್ದ ಕಾಲದ ಇನ್ನೊಂದು ಕೊಂಡಿ ಕಳಚಿ ದಂತೆ.

 ಕಾಲದಲ್ಲಿ ಒಬ್ಬ ಅಥ್ಲೀಟ್ ನನ್ನು ಆತನ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂಬುದರ ಮೇಲೆ ಅಲ್ಲ ಬದಲಾಗಿ ಆತ ಸಮಾಜಕ್ಕೆ ನೀಡಿದ ಕೊಡುಗೆಯಿಂದ ಅಳೆಯಲಾಗುತ್ತಿತ್ತು. 1996 ರ ಅಟ್ಲಾಂಟ ಒಲಿಂಪಿಕ್ಸ್ ಜ್ಯೋತಿ ಬೆಳಗಲು ಅಲಿಗೆ ಆಹ್ವಾನ ನೀಡಿದಾಗ ಭಾವೋದ್ವೇಗಕ್ಕೆ ಒಳಗಾಗಿದ್ದು ನನಗೀಗ ನೆನಪಿದೆ. ಇಂದು ಬೆಳಗ್ಗೆ ನಾನು ಮತ್ತೆ ಅತ್ತೆ. ಬೆಳೆದು ನಿಂತ ಗಂಡಸರಿಗೂ ಕಣ್ಣೀರು ಹಾಕಿಸುವ ಸಾಮರ್ಥ್ಯ ಅಲಿಗಿತ್ತು. ಆತ ಯಾವತ್ತೂ ಒಳ್ಳೆಯ ಉದ್ದೇಶಕ್ಕೆ ಹೋರಾಡಿದ. ಹಾಗಾಗಿ ನಮ್ಮನ್ನು ಕಣ್ಣೀರು ಹಾಕುವಂತೆ ಮಾಡಿದ. ಏಕೆಂದರೆ ಆತನ ಹೋರಾಟ ನಮ್ಮ ಹೋರಾಟವಾಗಿತ್ತು. ಕೊನೆಯ ಮಾತು: 1991 ರಲ್ಲಿ ನನಗೆ ಮುಹಮ್ಮದ್ ಅಲಿಯನ್ನು ಸಂದರ್ಶಿಸುವ ಜೀವಮಾನದ ಅವಕಾಶ ಸಿಕ್ಕಿತ್ತು. ಜುಹು ಹೊಟೇಲ್ ಒಂದರಲ್ಲಿ ಅಲಿ ತಂಗಿದ್ದಾರೆಂದು ಸ್ನೇಹಿತನೊಬ್ಬ ನೀಡಿದ ಮಾಹಿತಿ ಪಡೆದು ಅಲ್ಲಿಗೆ ಹೋದೆ. ಕೊಠಡಿಯ ಬಾಗಿಲು ಬಡಿದಾಗ ಬಂದು ಬಾಗಿಲು ತೆರೆದಿದ್ದು ‘ಜಗತ್ತಿನ ಅತ್ಯಂತ ಸುಂದರ ಮುಖ’ ಇದ್ದ ವ್ಯಕ್ತಿಯಲ್ಲ. ಏಕೆಂದರೆ ಆಗಲೇ ಅವರಿಗೆ ಪಾರ್ಕಿನ್ಸನ್ ಬಾಸಿತ್ತು ಹಾಗೂ ನಡೆಯುವುದು, ಮಾತಾಡುವುದೇ ಅವರಿಗೆ ಕಷ್ಟವಾಗುತ್ತಿತ್ತು. ಆದರೆ ನನಗದು ಮುಖ್ಯವಾಗಿರಲಿಲ್ಲ. ಅಲಿಯ ಜೊತೆ ಇರುವುದೇ ನನ್ನ ಪಾಲಿಗೆ ಬಹುದೊಡ್ಡ ಗೌರವವಾಗಿತ್ತು. ಆತ ಹಿಂದೆಯೂ ಮುಂದೆಯೂ ಅತ್ಯಂತ ಶ್ರೇಷ್ಠ. ದಿ ಗ್ರೇಟೆಸ್ಟ್ !

ನೆಲದ ಮೇಲೆ ‘ಮುಹಮ್ಮದ್’ ಹೆಸರು ಬೇಡ ಎಂದು ಬಿಟ್ಟರು ಅಲಿ!
 ಹಾಲಿವುಡ್‌ನ ವಾಕ್ ಆ್ ೇಮ್ ಯಾರಿಗೆ ಗೊತ್ತಿಲ್ಲ? ಅಮೆರಿಕದ ಹಾಲಿವುಡ್‌ನ ಸುಮಾರು 5.6 ಕಿ.ಮೀ. ದೂರವಿರುವ ಹಾದಿಯ ನೆಲದ ಮೇಲೆ ಅತ್ಯಂತ ಶ್ರೇಷ್ಠ ಕಲಾವಿದರ ಹೆಸರು ಹಾಕಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಆ ನೆಲದ ಮೇಲೆ ತಮ್ಮ ಹೆಸರು ಕಾಣುವುದೇ ಹಾಲಿವುಡ್‌ನ ಖ್ಯಾತ ಕಲಾವಿದರ ಅತ್ಯುನ್ನತ ಗುರಿಗಳಲ್ಲಿ ಒಂದು. ಆದರೆ ಅಲ್ಲಿ ಹೆಸರು ಹಾಕುತ್ತೇವೆ ಎಂದು ಹೇಳಿದಾಗ ಅದಕ್ಕೆ ಒಪ್ಪಿಗೆ ನೀಡದ ಮಹಾನ್ ಪ್ರತಿಭೆ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ!
‘ಅಲಿ’ ಚಿತ್ರ ಬಿಡುಗಡೆಯಾದ ಮೇಲೆ ವಾಕ್ ಆ್ ೇಮ್ ತಮ್ಮ ಸಂಪ್ರದಾಯವನ್ನು ಮುರಿದು ಕಲಾವಿದರಲ್ಲದ, ಕ್ರೀಡಾಪಟು ಅಲಿ ಅವರ ಹೆಸರನ್ನು ಹಾಕಲು ತೀರ್ಮಾನಿಸಿತು. ಆದರೆ ಅಲಿ ಅದಕ್ಕೆ ಒಪ್ಪಲಿಲ್ಲ. ನಾನು ಮುಹಮ್ಮದ್ ಅಲಿ. ಪ್ರವಾದಿ ಮುಹಮ್ಮದ್ (ಸ) ಅವರ ಹೆಸರು ನನ್ನ ಹೆಸರಲ್ಲಿದೆ. ನಾನು ಅತ್ಯಂತ ಹೆಚ್ಚು ಗೌರವಿಸುವ ಪ್ರವಾದಿಯ ಹೆಸರನ್ನು ಜನರು ಮೆಟ್ಟಿಕೊಂಡು ಹೋಗುವುದು ನನಗೆ ಇಷ್ಟವಿಲ್ಲ ಎಂದು ಬಿಟ್ಟರು ಅಲಿ.
ಕೊನೆಗೆ ಮುಹಮ್ಮದ್ ಅಲಿಯ ಹೆಸರನ್ನು ಕೊಡ್ಯಾಕ್ ಥಿಯೇಟರ್ ಸಂಕೀರ್ಣದ ಗೋಡೆಯ ಮೇಲೆ ಬರೆಯಲಾಯಿತು. ಇದೊಂದು ಐತಿಹಾಸಿಕ ದಾಖಲೆ!

‘‘ನೀವು ನನ್ನನ್ನು ಸೋಲಿಸುವ ಬಗ್ಗೆ ಕನಸು ಕಂಡರೂ ನಿದ್ದೆಯಿಂದ ಎದು್ದ ಕ್ಷಮೆ ಕೇಳಿ’’
ವಿಶ್ವವಿಖ್ಯಾತ ಬಾಕ್ಸರ್ ಮುಹಮ್ಮದ್ ಅಲಿಯವರ ಪ್ರತಿಭೆ ಕೇವಲ ಬಾಕ್ಸಿಂಗ್ ರಿಂಗ್‌ಗೆ ಸೀಮಿತವಾಗಿರಲಿಲ್ಲ. ಅವರು ಬಹಳ ಆಳವಾಗಿ ಯೋಚಿಸುತ್ತಿದ್ದರು ಹಾಗೂ ಕ್ರೀಡಾಳುಗಳಲ್ಲಿ ಅಪರೂಪ ವಾಗಿರುವ ತೀಕ್ಷ್ಣ ನಾಲಗೆಯನ್ನೂ ಹೊಂದಿದ್ದರು. ಅವರ ಕೆಲವು ಸೂರ್ತಿದಾಯಕ ಹಾಗೂ ಮರೆಯಲಾಗದ ಮಾತು ಗಳು ಇಲ್ಲಿವೆ.

    1.‘‘ತಮ್ಮ ಜಗತ್ತನ್ನು ಬದಲಾಯಿಸು ವಂತಹ ತಮ್ಮಳಗಿನ ಶಕ್ತಿಯನ್ನು ಕಂಡು ಕೊಳ್ಳುವ ಬದಲು ತಮಗೆ ನೀಡಲಾದ ಜಗತ್ತಿನಲ್ಲಿ ಜೀವಿಸುವುದು ಸುಲಭವೆಂದು ತಿಳಿದುಕೊಂಡ ಕೆಲ ಸಣ್ಣ ಮನುಷ್ಯರು ಎಸೆಯುವ ಪದವೇ ಅಸಾಧ್ಯ. ಅಸಾಧ್ಯವೆಂಬುದು ವಾಸ್ತವವಲ್ಲ. ಅದೊಂದು ಅಭಿಪ್ರಾಯ. ಅಸಾಧ್ಯವೆಂಬುದು ಒಂದು ಸಾಮರ್ಥ್ಯ. ಅಸಾಧ್ಯವೆಂಬುದು ತಾತ್ಕಾಲಿಕ. ಅಸಾಧ್ಯ ಏನೂ ಅಲ್ಲ.’’

    2. ‘‘ಚಿಟ್ಟೆಯಂತೆ ಹಾರಾಡಿ, ಜೇನುನೊಣದಂತೆ ಕಚ್ಚಿ. ನಿಮ್ಮ ಕಣ್ಣಿಗೆ ಕಾಣದೇ ಇರುವುದನ್ನು ನಿಮಗೆ ಹೊಡೆಯಲು ಸಾಧ್ಯವಿಲ್ಲ.

    3.‘‘ನಾನೇ ಮಹಾನ್. ನಾನು ಮಹಾನ್ ಎಂದು ತಿಳಿಯುವ ಮೊದಲೇ ನಾನು ಹಾಗೆಂದು ಹೇಳಿದ್ದೇನೆ. ನಾನು ಹಾಗೆಂದು ತಿಳಿದುಕೊಂಡಿದ್ದರೆ, ನಾನು ನಿಜವಾಗಿಯೂ ಮಹಾನ್ ಎಂದು ವಿಶ್ವಕ್ಕೆ ಸಾಬೀತು ಪಡಿಸಲ್ಲೆ.’’

    4. ‘‘ನಾನು ಆ ದೀಪಗಳಡಿಯಲ್ಲಿ ನರ್ತಿಸುವುದಕ್ಕಿಂತ ಬಹಳಷ್ಟು ಮೊದಲು, ಸಾಕ್ಷಿಗಳಿಂದ ಬಹಳ ದೂರ, ಗೆರೆಗಳ ಹಿಂದೆ, ಜಿಮ್‌ನಲ್ಲಿ, ಅಲ್ಲಿ ರಸ್ತೆಯಲ್ಲಿ ಪಂದ್ಯಗಳನ್ನು ಗೆಲ್ಲಲಾಗುತ್ತದೆ ಅಥವಾ ಸೋಲಲಾಗುತ್ತದೆ.

    5. ‘‘ದಿನಗಳನ್ನು ಲೆಕ್ಕ ಮಾಡಬೇಡಿ, ಪ್ರತಿ ದಿನವೂ ಅವಿಸ್ಮರಣೀಯವನ್ನಾಗಿಸುವಂತೆ ನೋಡಿ.

    6. ‘‘ಆತ್ಮಬಲ ತೋಳ್ಬಲಕ್ಕಿಂತ ಶಕ್ತಿಶಾಲಿಯಾಗಿರಬೇಕು.’’

    7. ‘‘ಮುಂದೆ ಇರುವ ಪರ್ವತಗಳು ನಿಮ್ಮ ಶಕ್ತಿಯನ್ನು ಕುಂದಿಸುವುದಿಲ್ಲ, ನಿಮ್ಮ ಶೂನಲ್ಲಿರುವ ಕಲ್ಲುಗಳು ನಿಮ್ಮ ಶಕ್ತಿ ಕುಂದಿಸುತ್ತವೆ.’’
    8. ‘‘ನನ್ನನ್ನು ಪ್ರೀತಿಸಿದಷ್ಟೇ ಜನರು ಎಲ್ಲರನ್ನೂ ಪ್ರೀತಿಸಬೇಕು ಎಂದು ನಾನು ಬಯಸುತ್ತೇನೆ. ಆಗ ಈ ಜಗತ್ತು ಉತ್ತಮವಾಗುತ್ತದೆ.
    9. ‘‘ಉತ್ತಮ ಉತ್ತರ ನಿಮಗೆ ಹೊಳೆಯದಿದ್ದರೆ ಆಗ ಮೌನ ಬಂಗಾರವಾಗುತ್ತದೆ.’’
10. ‘‘ನಾನು ಸಿಟ್-ಅಪ್‌ಗಳನ್ನು ಲೆಕ್ಕ ಮಾಡುವುದಿಲ್ಲ. ನೋವಾಗಲು ಶುರುವಾದಾಗ ಮಾತ್ರ ನಾನು ಅವುಗಳನ್ನು ಲೆಕ್ಕ ಮಾಡಲುಆರಂಭಿಸುತ್ತೇನೆ. ಈ ಸಿಟ್-ಅಪ್ ಗಳೇ ನಿಜವಾಗಿ ಲೆಕ್ಕ ಹಾಕುವಂತಹವು. ಅದೇ ನಿಮ್ಮನ್ನು ಚಾಂಪಿಯನ್ ಆಗಿಸುವುದು.’’

Writer - ರಾಜದೀಪ್ ಸರ್ದೇಸಾಯಿ

contributor

Editor - ರಾಜದೀಪ್ ಸರ್ದೇಸಾಯಿ

contributor

Similar News