×
Ad

ಮದ್ಯದ ಅಮಲು: ಪತ್ನಿಯನ್ನು ಕೊಂದು ಶವದ ಜತೆ ನಿದ್ದೆಹೊಡೆದ ಭೂಪ!

Update: 2016-06-05 09:31 IST

ಹೊಸದಿಲ್ಲಿ, ಜೂ.5: ತಾನು ಪ್ರೀತಿಸಿದ ಪ್ರಿಯತಮೆಯನ್ನು ವಿವಾಹವಾಗುವ ವೇಳೆ, ಪ್ರದೀಪ್ ಶರ್ಮಾ ಜೀವನವಿಡೀ ಸುಖದ ಸುಪ್ಪತ್ತಿಗೆಯಲ್ಲಿ ಇಡುವುದಾಗಿ ಭರವಸೆ ನೀಡಿದ್ದ. ಆದರೆ ಮದುವೆಯಾಗಿ ಕೆಲ ತಿಂಗಳುಗಳಲ್ಲೇ ಯುವತಿಗೆ ವಾಸ್ತವ ಅರಿವಾಯಿತು. ಪ್ರೀತಿಯ ಬದಲು ಆಕೆಗೆ ಸಿಕ್ಕಿದ್ದು, ಅಭದ್ರತೆ, ಅಪನಂಬಿಕೆ ಹಾಗೂ ವಿಷಾದದ ಪ್ರತಿಫಲವಷ್ಟೇ. ಆದರೆ ಈ ಪ್ರೇಮವಿವಾಹ ದುಃಖಾಂತ್ಯ ಕಂಡಿದೆ. ಪಾನಮತ್ತ ಪತಿ 23 ವರ್ಷದ ತನ್ನ ಪತ್ನಿ ಮೋನಿಯಾಳನ್ನು ಹತ್ಯೆ ಮಾಡಿ, ಆ ಬಳಿಕ ಭೋಗಿಸಿ ಬೆಳಗ್ಗೆವರೆಗೂ ಶವದ ಜತೆ ಗಡದ್ದಾಗಿ ನಿದ್ದೆ ಹೊಡೆದ ಪ್ರಕರಣ ಬೆಳಕಿಗೆ ಬಂದಿದೆ, ಶನಿವಾರ ಆರೋಪಿಯನ್ನು ಬಂಧಿಸಲಾಗಿದ್ದು, ಈತನ ಪತ್ತೆಗೆ ಪೊಲೀಸರಿಗೆ ಐದು ದಿನ ಬೇಕಾಯಿತು.
ಶರ್ಮಾ ತನ್ನ ಅಣ್ಣನ ವಿವಾಹದಲ್ಲಿ ಮೋನಿಕಾಳನ್ನು ನೋಡಿದ ಮೊದಲ ನೋಟದಲ್ಲೇ ಪ್ರೇಮ ಅಂಕುರಿಸಿತ್ತು. ನಿರುದ್ಯೋಗಿ ಹಾಗೂ ಬ್ಯಾಡ್ ಬಾಯ್ ಎಂದು ಸ್ಥಳೀಯರು ಈತನಿಗೆ ಹಣೆಪಟ್ಟಿ ಕಟ್ಟಿದ್ದರು. ಆಕೆಯನ್ನು ವಿವಾಹವಾಗುವ ಸಲುವಾಗಿ ಕೆಲಸಕ್ಕೆ ಸೇರುವುದಾಗಿ ಮತ್ತು ತನ್ನ ನಡತೆ ಸರಿಪಡಿಸಿಕೊಳ್ಳುವುದಾಗಿ ಪ್ರಮಾಣ ಮಾಡಿದ್ದ. ಆರಂಭದಲ್ಲಿ ಉತ್ತರ ಪ್ರದೇಶದ ಬಲಂದ್ಶೆಹರ್ನಲ್ಲಿ ವಾಸವಿದ್ದ ದಂಪತಿ ಆರು ತಿಂಗಳ ಬಳಿಕ ದೆಹಲಿಯ ನಿಹಾಲ್ ವಿಹಾರ್ಗೆ ಬಂದಿದ್ದರು.
ವಿವಾಹಕ್ಕೆ ಮುನ್ನ ನೀಡಿದ ಆಶ್ವಾಸನೆಯಂತೆ ದೆಹಲಿಗೆ ಬಂದು ಇ- ರಿಕ್ಷಾ ಚಾಲಕನಾಗಿ ಕೆಲಸ ಆರಂಭಿಸಿದ. ಆದರೆ ದೊಡ್ಡ ಪ್ರಮಾಣದ ಬಾಡಿಗೆ, ಗೃಹಬಳಕೆ ವಸ್ತುಗಳು ಹಾಗೂ ಇತರ ವೆಚ್ಚಕ್ಕೆ ಹಣ ಸಾಕಾಗಲಿಲ್ಲ. ಇದು ಇಬ್ಬರ ಮಧ್ಯೆ ಹಣಕಾಸು ವಿಚಾರದಲ್ಲಿ ಜಗಳಕ್ಕೆ ಕಾರಣವಾಗಿತ್ತು. ನಿರಂತರ ಜಗಳದಿಂದಾಗಿ ಎರಡು ಮನೆಗಳಿಂದ ಇವರನ್ನು ಖಾಲಿ ಮಾಡಿಸಲಾಗಿತ್ತು.
ಮೇ 29ರಂದು ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ಮನೆಯ ಮಾಲಕ, ಅವರನ್ನು ಮನೆ ಖಾಲಿಮಾಡುವಂತೆ ಎರಡು ದಿನ ಹಿಂದೆಯೇ ಸೂಚಿಸಿದ್ದ. ಇದರಿಂದ ಹತಾಶನಾಗಿ ಪತ್ನಿಯನ್ನು ತ್ಯಜಿಸಲು ನಿರ್ಧರಿಸಿದ. "ಮದ್ಯ ತಂದು ಪತ್ನಿಗೆ ಕುಡಿಸಿ, ಇಟ್ಟಿಗೆಯಿಂದ ಹೊಡೆದೆ. ಹಠಾತ್ ದಾಳಿಯಿಂದ ಅಧೀರಳಾದ ಮೋನಿಕಾ ಸಹಾಯಕ್ಕಾಗಿ ಕೂಗಿಕೊಂಡಳು. ಇದರಿಂದ  ಭಯಗೊಂಡು ಆಕೆಯ ತಲೆಯನ್ನು ಗೋಡೆಗೆ ಚಚ್ಚಿ ಸಾಯಿಸಿದೆ" ಎಂದು ಒಪ್ಪಿಕೊಂಡಿದ್ದಾನೆ. ಸ್ನಾನಗೃಹಕ್ಕೆ ಶವ ಒಯ್ದು ಸ್ನಾನ ಮಾಡಿಸಿ, ಬೆತ್ತಲು ದೇಹವನ್ನು ಹಾಸಿಗೆಗೆ ಹೊತ್ತು ತಂದೆ. ಆಕೆಯ ಕ್ಷಮೆ ಯಾಚಿಸಿ, ಕೊನೆಯ ಬಾರಿ ಆಕೆಯನ್ನು ಪ್ರೀತಿಸಬೇಕು ಎನಿಸಿತು. ಬಳಿಕ ಶವದ ಜತೆಗೇ ಬೆಳಗ್ಗೆ 10ರವರೆಗೂ ನಿದ್ದೆ ಮಾಡಿದೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

ಗಲಾಟೆ ಹಿನ್ನೆಲೆಯಲ್ಲಿ ಆತ ಮೊಬೈಲ್ ಸ್ವಿಚ್ ಆಫ್ ಮಾಡಿ, ಮೋನಿಕಾಳ ಫೋನ್ ಹಾಗೂ ಇತರ ವಸ್ತುಗಳೊಂದಿಗೆ ಮನೆ ಬಿಟ್ಟ. ಮೇ 30ಕ್ಕೆ ಪೊಲೀಸರಿಗೆ ಸುದ್ದಿ ಮುಟ್ಟಿತು. ತನಿಖೆಗಾಗಿ ವಿಶೇಷ ತಂಡ ನಿಯೋಜಿಸಲಾಯಿತು. ನಂಗ್ಲೋಯಿ ಸ್ಟೇಷನ್ ಬಳಿ ಅವಿತಿದ್ದ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News