ಕತರ್: ಭಾರತೀಯ ಕಾರ್ಮಿಕರ ಮನಗೆದ್ದ ಪ್ರಧಾನಿ ಮೋದಿ
Update: 2016-06-05 13:38 IST
ಕತರ್, ಜೂ.5: ಕತ್ತರ್ ನಲ್ಲಿರುವ ಭಾರತೀಯ ಕಾರ್ಮಿಕರ ಸಮಸ್ಯೆಗಳ ಕುರಿತು ಕತರ್ ನಾಯಕರ ಜೊತೆ ಮಾತುಕತೆ ನಡೆಸಿ ಬಗೆಹರಿಸುವುದಾಗಿ ನರೇಂದ್ರ ಮೋದಿಯವರು ಆಶ್ವಾಸನೆ ನೀಡಿದ್ದಾರೆ.
5 ರಾಷ್ಟ್ರಗಳ ಪ್ರವಾಸದಲ್ಲಿರುವ ನರೇಂದ್ರ ಮೋದಿ, ಅಫ್ಘಾನಿಸ್ತಾನ ಪ್ರವಾಸದ ಬಳಿಕ ಕತರ್ ಗೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಕಾರ್ಮಿಕರ ಶಿಬಿರದವೊಂದಕ್ಕೆ ಭೇಟಿ ನೀಡಿದ ಪ್ರಧಾನಿ ಕಾರ್ಮಿಕರನ್ನುದ್ಧೇಶಿಸಿ ಮಾತನಾಡಿದರು. ನಿಮ್ಮ ಹಾಗೂ ನಿಮ್ಮನ್ನು ಕರೆದುಕೊಂಡು ಬಂದಿರುವ ಕಂಪೆನಿಗಳು ಎದುರಿಸುತ್ತಿರುವ ಸಮಸ್ಯೆಗಳ ಅರಿವು ನನಗಿದೆ. ಈ ಸಮಸ್ಯೆಗಳ ಬಗ್ಗೆ ನಾನು ಕತರ್ ದೇಶದ ನಾಯಕರೊಂದಿಗೆ ಚರ್ಚಿಸಿ ಯಾವುದೇ ನಿಯಮಗಳಲ್ಲಿ ಬದಲಾವಣೆ ಆಗಬೇಕೆಂದು ನೀವು ಬಯಸಿದ್ದಲ್ಲಿ ಆ ನಿಟ್ಟಿನಲ್ಲಿ ನಿಮ್ಮೊಂದಿಗೆ ನಾನು ಸೇರಿ ಶ್ರಮಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಪುಟ್ಟ ಭಾಷಣದ ಬಳಿಕ ಪ್ರಧಾನಿ ಮೋದಿ ಭಾರತೀಯ ಕಾರ್ಮಿಕರ ಜೊತೆ ಕುಳಿತು ಉಪಹಾರ ಸೇವಿಸಿದರು.