ಪ್ರವಾಸಿಗರ ಸ್ವರ್ಗ ಮನಾಲಿಯ ಐದು ಆಕರ್ಷಣೆಗಳು

Update: 2016-06-05 08:44 GMT

ಭಾರತದಲ್ಲಿರುವ ಅತೀ ಅಗ್ಗದ ಹಿಲ್ ಸ್ಟೇಷನ್ ಎಂದರೆ ಮನಾಲಿ. ಅಗ್ಗದ ಪ್ರಯಾಣ ಬಯಸಿ ಪ್ರವಾಸ ಹೊರಡುವವರಿಗೆ ಇದು ಉತ್ತಮ ಸ್ಥಳ. ರೆಸ್ಟೊರೆಂಟುಗಳು, ಕೆಫೆಗಳು, ಪ್ರಾಕೃತಿಕ ಸೌಂದರ್ಯ, ಚಾರಣ ಮತ್ತು ಸಾಹಸ ಕ್ರೀಡೆಗಳೂ ಇಲ್ಲಿವೆ. ಸ್ವಲ್ಪ ಆರಾಮವಾಗಿ ಹೆಚ್ಚು ರಜಾ ಇದ್ದವರು ಇಲ್ಲಿನ ನಿಜ ಸೌಂದರ್ಯವನ್ನು ಅನುಭವಿಸಬಹುದು.

ಅಗ್ಗದಲ್ಲಿ ಪ್ರವಾಸ ಮಾಡುವವರಿಗೆ ಮನಾಲಿ ಹೊಟೇಲುಗಳು

ಸಾಹಸ ಪ್ರಿಯರಿಗೆ ಮತ್ತು ಪ್ರವಾಸಿಗರಿಗೆ ಮನಾಲಿಯಲ್ಲಿ ಹಲವು ಕಡಿಮೆ ಬೆಲೆಯ ಹೊಟೇಲುಗಳು ಇವೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕಾರಣ ವರ್ಷವಿಡೀ ಹೊಟೇಲುಗಳು ಲಭ್ಯವಿರುತ್ತವೆ.

ಕೆಫೆಗಳು

ಮನಾಲಿಯಲ್ಲಿ ಕೆಲವು ಅತ್ಯುತ್ತಮ ಕೆಫೆಗಳಿವೆ. ಪೈನ್ ಮರಗಳು ಮತ್ತು ಅದರ ನಡುವಿನ ಹಾದಿ ಹಾಗು ಗುಣಮಟ್ಟದ ಕೆಫೆಗಳು ಇಲ್ಲಿನ ವಿಶೇಷ. ಶಾಂತವಾದ ಪರಿಸರದಲ್ಲಿ ಏಕಾಂತ ಬಯಸುವವರಿಗೆ ಇವು ಹೇಳಿ ಮಾಡಿಸಿದ ತಾಣಗಳು.

ಮನಾಲಿಯ ರೆಸ್ಟೊರೆಂಟುಗಳು

ಮನಾಲಿಯ ನಗರ ಮತ್ತು ಆಂತರಿಕ ಭಾಗಗಳಲ್ಲಿ ಅತ್ಯುತ್ತಮ ರೆಸ್ಟೊರೆಂಟುಗಳಿವೆ. ಮಾಲ್ ರಸ್ತೆಯಲ್ಲಿ ನಿಮಗೆ ಬೇಕಾದಷ್ಟು ರೆಸ್ಟೊರೆಂಟುಗಳು ಸಿಗುತ್ತವೆ. ಮನಾಲಿಯ ಇತರ ಹಲವು ಕಿರು ಹಾದಿಗಳಲ್ಲೂ ಅಲ್ಲಲ್ಲಿ ರೆಸ್ಟೊರೆಂಟುಗಳಲ್ಲಿ ವಿವಿಧ ರುಚಿಯ ಆಹಾರಗಳು ಸಿಗುತ್ತವೆ. ಕಾಂಟಿನೆಂಟಲ್, ದೇಸಿ, ದಕ್ಷಿಣ-ಉತ್ತರ ಎಂದು ನೀವು ಆರಿಸಿಕೊಳ್ಳಬಹುದು.

ಮನಾಲಿಯ ಪ್ರವಾಸಿ ಸ್ಥಳಗಳು

ಮನಾಲಿಯಲ್ಲಿ ಎಷ್ಟು ದಿನ ತಂಗಿದರೂ ನೋಡಿ ಮುಗಿಸಲಾರದಷ್ಟು ತಾಣಗಳಿವೆ. ವಿವಿಧ ಅಭಿರುಚಿ ಇದ್ದವರಿಗೆ ವಿವಿಧ ತಾಣಗಳಿವೆ. ರೋಟಂಗ್ ಪಾಸ್ ನ ಪ್ರಕೃತಿ ಸೌಂದರ್ಯ, ಕುಲು ಮನಾಲಿಯ ಸುಂದರ ತಾಣಗಳು, ಬೆಟ್ಟದ ಮೇಲಿನ ಹಿಡಿಂಬಾ ದೇಗುಲ ಹೀಗೆ ಸಾಮಾನ್ಯವಾಗಿ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳೂ ಇವೆ. ಸಾಹಸಿಗರಿಗೆ ಗುಡ್ಡದ ಮೇಲಿನಿಂದ ಪ್ಯಾರಾ ಗ್ಲೈಡಿಂಗ್, ನದಿಗಳಲ್ಲಿ ದೋಣಿಯಾನ ಮಾಡಬಹುದು. ಚಾರಣಿಗರಿಗೆ ಕಣಿವೆಗಳ ಸೌಂದರ್ಯ ಕೈಬೀಸಿ ಕರೆಯುತ್ತವೆ.

ಮನಾಲಿಯಲ್ಲಿ ಶಾಪಿಂಗ್

ಮನಾಲಿಯ ಮಳಿಗೆಗಳು ಮತ್ತು ರಸ್ತೆಯ ಮಾರುಕಟ್ಟೆಗಳಲ್ಲಿ ಮನದಣಿಯ ಶಾಪಿಂಗ್ ಮಾಡಬಹುದು. ಸ್ಥಳೀಯ ಕರಕುಶಲ ವಸ್ತುಗಳು, ಸ್ಮರಣಿಕೆಗಳು, ವಸ್ತ್ರಗಳು ಹೀಗೆ ಎಲ್ಲಾ ರೀತಿಯ ವಸ್ತುಗಳೂ ಇಲ್ಲಿ ಸಿಗುತ್ತವೆ. ಅಗ್ಗದ ದರದಲ್ಲಿ ಇವು ಕೈಗೆಟುಕುವ ಕಾರಣ ಖರೀದಿಸಲು ಹೆಚ್ಚು ಯೋಚಿಸಬೇಕಾಗಿಲ್ಲ.

ಕೃಪೆ: www.happytrips.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News