ಕೋತಿಯಿಂದ ಅಂಗಡಿಗೆ ನುಗ್ಗಿ ಹಣ ದರೋಡೆ

Update: 2016-06-05 15:42 GMT

ಗುಂಟೂರು, ಜೂ.5: ವಿಚಿತ್ರ ಸಿನಿಮೀಯ ವಿದ್ಯಮಾನವೊಂದರಲ್ಲಿ, ಕೋತಿಯೊಂದು ಆಭರಣಗಳ ಅಂಗಡಿಯೊಂದರಿಂದ ರೂ.10 ಸಾವಿರ ವೌಲ್ಯದ ನೋಟುಗಳ ಕಂತೆಯನ್ನು ಎಗರಿಸಿಕೊಂಡು ಓಡಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ವರದಿಯಾಗಿದೆ.
ಸುಳಿದಾಡುತ್ತಿರುವ ವೀಡಿಯೊ ಒಂದರಲ್ಲಿ, ಮುಗ್ಧನಂತೆ ತೋರುತ್ತಿದ್ದ ಮಂಗವೊಂದು ತನ್ನಲ್ಲಿದ್ದ ಹಣ್ಣೊಂದು ಒಳಗೆ ಬಿದ್ದತೆಂಬ ನೆಪದಲ್ಲಿ ಆಭರಣ ಅಂಗಡಿಯೊಳಗೆ ನುಗ್ಗಿತು. ಅದರ, ನೀಚ ಉದ್ದೇಶ ಬಹಿರಿಂಗವಾದಾಗ ಅಲ್ಲಿದ್ದವರಿಗೆ ಸನ್ನಿಪಾತ ಬಡಿದಂತಾಯಿತು.

ಕೋತಯು ಅಂಗಡಿಯೊಳಗೆ ಪೇರಳ ಹಣ್ಣೊಂದನ್ನು ಎಸೆಯಿತು. ಬಳಿಕ ಅದು ಆಭರಣದಂಗಡಿಯನ್ನು ಪ್ರವೇಶಿಸಿತು ಹಾಗೂ ಹಣದೊಂದಿಗೆ ಪರಾರಿಯಾಯಿತು. ತಾವು ಹಣ್ಣನ್ನು ಮರಳಿ ಎಸೆದವು. ಆದರೂ, ಅದು ಅಂಗಡಿಯೊಳಗೆ ಪ್ರವೇಶಿಸಿತ. ಅದು ಮೊದಲು ಕೆಲಸಗಾರನ ಮೇಲೆ ದಾಳಿ ನಡೆಸಿತು. ಆದರೆ, ಆತ ಪಾರಾದನು. ಕೋತಿ ಸುಮಾರು 20 ಡ್ರಾಯರ್ ತೆರೆಯಿತು ಹಾಗೂ ರೂ.10 ಸಾವಿರ ನಗದಿನೊಂದಿಗೆ ಓಡಿಹೋಯಿತೆಂದು ಅಂಗಡಿಯ ಮಾಲಕ ವಿವರಸಿದ್ದಾನೆ.

ಅಂಗಡಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಂಗವು ಅಂಗಡಿಯೊಳಗೆ ಪ್ರವೇಶಿಸುವುದು ಹಾಗೂ ಏನಾದರೂ ಸಿಗುತ್ತದೋ ಎಂದು ಸುತ್ತ ನೋಡುತ್ತಿರುವುದು ದಾಖಲಾಗಿದೆ.
ಅದು ಡ್ರಾಯರನ್ನು ತೆರೆಯುವುದು ಹಾಗೂ ರೂ.10 ಸಾವಿರದ ಕಟ್ಟೊಂದನ್ನು ಎತ್ತಿಕೊಳ್ಳುವುದು ಅವರಲ್ಲಿ ಕಾಣಿಸುತ್ತಿದೆ.
ಅಂಗಡಿಯಾತ ಕೋತಿಯನ್ನು ಓಡಿಸಲು ಪ್ರಯತ್ನಿಸಿದನಾದರೂ, ಅದು ಡ್ರಾಯರ್‌ನ ಹತ್ತಿರ ಬಂದು ಹಣವನ್ನೆತ್ತಕೊಂಡಿತ್ತು. ಘಟನೆಯನ್ನು ಕಂಡು ಅಂಗಡಿಯ ಕೆಲಸಗಾರರು ಸ್ತಂಭಿಭೂತರಾಗಿದ್ದರು.

ಮಾರುಕಟ್ಟೆ ಹಾಗೂ ದೇವಾಯಲಗಳಲ್ಲಿ ಮಂಗಗಳು ಜನರ ಹಣವನ್ನು ಅಪಹರಿಸಿದ ಘಟನೆಗಳು ಈ ಹಿಂದೆಯೂ ವರದಿಯಾಗಿವೆ.
ವೃಂದಾವನದ ದೇವಾಲಯವೊಂದರ ಬಳಿ ಆಕಾಶದಿಂದ ಹಣ ಉದುರುತ್ತಿತ್ತು. ಅದು ಕೆಲವರಿಗೆ ಪವಾಡದಂತೆ ಗೋಚರವಾಗಿತ್ತು. ಆದರೆ, ಪರಿಶೀಲನೆ ನಡೆಸಿದಾಗ, ಮಂಗವೊಂದು ಭಕ್ತನೊಬ್ಬನ ಹಣದ ಗಂಟು ಅಪಹರಿಸಿ ಮರದಿಂದ ಕೆಳಗೆ ಎಸೆಯುತ್ತಿತ್ತು!
ಇನ್ನೊಂದು ಘಟನೆಯಲ್ಲಿ, ಮುಂಬೈಯ ಬೊರಿವಿಲಿಯ ನಿವಾಸಿಯೊಬ್ಬರು ಬಂಕೆ ಬಿಹಾರಿ ದೇವಾಲಯದಲ್ಲಿ ಪ್ರಾರ್ಥನೆ ಮುಗಿಸುವುದರೊಳಗೆ ಕಪಿಯೊಂದು ಅವರ ಪರ್ಸನ್ನು ಸೆಳೆದು ಪರಾರಿಯಾಗಿತ್ತು.
ಇದು ಮತ್ತೆ ಅಂತೆ-ಕಂತೆಗಳು ಹರಡಲು ಕಾರಣವಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News