×
Ad

ಮಹಿಳೆಯರೇ ಹೆಚ್ಚು..!

Update: 2016-06-05 23:32 IST

ಮಾನ್ಯರೆ,
ಇದು ದುರಂತ ನೋಡಿ. ರಾಜಧಾನಿ ಬೆಂಗಳೂರಲ್ಲಿ ಮಹಿಳಾ ಧೂಮಪಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಲ್ಲಿ 32.43 ರಷ್ಟು ತಂಬಾಕು ಬಳಕೆದಾರರಿದ್ದಾರೆ. ಇದರಲ್ಲಿ 5 ಲಕ್ಷ ಮಹಿಳೆಯರೇ ಇದ್ದಾರೆ. ಐಟಿ-ಬಿಟಿ ಕಂಪೆನಿಗಳ ಉದ್ಯೋಗಿಗಳು, ಸ್ವ-ಉದ್ಯೋಗಿಗಳು, ಉನ್ನತ ಸ್ಥಾನದಲ್ಲಿರುವ ಮಹಿಳೆಯರು ‘ಪ್ರತಿಷ್ಠೆ’ಗಾಗಿ ತಂಬಾಕು ವ್ಯಸನಿಗಳಾಗುತ್ತಿದ್ದಾರೆ. ಸಿಗರೇಟ್ ಸೇದದ ಮಂದಿ ‘ವೇಸ್ಟ್’ ಎಂಬ ಭಾವನೆ ಇವರಲ್ಲಿದೆ. ನೀವು ಸಭೆ, ಪಾರ್ಟಿಗೆ ಹೋದರೆ ಅಲ್ಲಿ ಸಿಗರೇಟ್, ಮದ್ಯ ಕುಡಿಯಲೇಬೇಕು. ಇದೆಲ್ಲಾ ಬೇಡ ಅನ್ನುವವರು ‘ಬದುಕಿದ್ದು ವ್ಯರ್ಥ’ ಎನ್ನುವ ಮಂದಿಯೇ ಜಾಸ್ತಿ. ಅದರಲ್ಲೂ ಸಾರ್ವಜನಿಕವಾಗಿಯೇ ಮಹಿಳೆಯರು ಸಿಗರೇಟ್ ಸೇದುವುದು ರಾಜಧಾನಿಯಲ್ಲಿ ಫ್ಯಾಷನ್ ಆಗಿಬಿಟ್ಟಿದೆ. ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದರೂ ಇದಕ್ಕೆ ಹೈಪ್ರೊಫೈಲ್ ಮಹಿಳೆಯರು ಕ್ಯಾರೇ ಅನ್ನುತ್ತಿಲ್ಲ. ಹೀಗಾಗಿ ಮಹಿಳೆಯರು ವಿವಿಧ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ ಒತ್ತಡದ ಜೀವನ, ಖಿನ್ನತೆಯಿಂದ ಬಳಲುತ್ತಿರುವವರು ಸಹ ತಂಬಾಕು ವ್ಯಸನಿಗಳಾಗುತ್ತಿದ್ದಾರೆ. ಪರಿಣಾಮ ಮಹಿಳೆಯರು ಕ್ಯಾನ್ಸರ್, ಬಂಜೆತನದಂತಹ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಡೈವೋರ್ಸ್‌ಗಳಿಗೂ ಇದೊಂದು ಕಾರಣವಾಗುತ್ತಿದೆ. 

Writer - -ಶಂಶೀರ್ ಬುಡೋಳಿ

contributor

Editor - -ಶಂಶೀರ್ ಬುಡೋಳಿ

contributor

Similar News