×
Ad

ಆರೋಪಿ ಶೋಧಕ್ಕಾಗಿ ಮೂರು ನಗರಗಳಲ್ಲಿ ದಾಳಿ

Update: 2016-06-05 23:51 IST

ಹೊಸದಿಲ್ಲಿ, ಜೂ.5: ಕಿಡ್ನಿ ಮಾರಾಟ ಹಗರಣದ ಪ್ರಮುಖ ಆರೋಪಿಗೆ ಬಲೆ ಬೀಸಿರುವ ದಿಲ್ಲಿ ಪೊಲೀಸರು, ತಮ್ಮ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಅಪೋಲೊ ಆಸ್ಪತ್ರೆ ಅಧಿಕಾರಿಗಳಿಗೂ ನೋಟಿಸ್ ನೀಡಲಾಗಿದ್ದು, ಕಳೆದ ಕೆಲ ತಿಂಗಳುಗಳಲ್ಲಿ ನಡೆದಿರುವ ಮೂತ್ರಪಿಂಡ ಕಸಿ ಪ್ರಕರಣಗಳ ಸಮಗ್ರ ವಿವರ ನೀಡುವ ಮೂಲಕ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದಾರೆ.

ಐದು ಪ್ರತ್ಯೇಕ ತಂಡಗಳು ಕೊಲ್ಕತ್ತಾ, ಚೆನ್ನೈ ಹಾಗೂ ಹೈದರಾಬಾದ್‌ಗಳಲ್ಲಿ ದಾಳಿ ನಡೆಸಿದ್ದು, ಪ್ರಮುಖ ಆರೋಪಿ ರಾಜಕುಮಾರ್ ರಾವ್ ಬಂಧನಕ್ಕೆ ಜಾಲ ಹೆಣೆದಿದ್ದಾರೆ. ಹಲವು ವರ್ಷಗಳಿಂದ ಈ ದಂಧೆಯಲ್ಲಿ ಶಾಮೀಲಾಗಿದ್ದಾನೆ ಎನ್ನಲಾದ ಈತ ನೇಪಾಳ, ಶ್ರೀಲಂಕಾ ಹಾಗೂ ಇಂಡೋನೇಷ್ಯಾಗಳಲ್ಲೂ ಇಂಥದ್ದೇ ದಂಧೆ ನಡೆಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಗರಣದಲ್ಲಿ ಹಿರಿಯ ಸಿಬ್ಬಂದಿ ಹಾಗೂ ವೈದ್ಯರು ಕೂಡಾ ಶಾಮೀಲಾಗಿರುವ ಸಾಧ್ಯತೆ ಇದೆ. ಅಪರಾಧ ದಂಡಸಂಹಿತೆಯ ಸೆಕ್ಷನ್ 90 ಹಾಗೂ 160ರ ಅನ್ವಯ ದಿಲ್ಲಿ ಪೊಲೀಸರು ಅಪೋಲೊ ಆಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News