ಕಾಪು: ಅವೈಜ್ಞಾನಿಕ ಮೇಲ್ಸೇತುವೆ ಕಾಮಗಾರಿಯಿಂದ ಕೃತಕ ನೆರೆ

Update: 2016-06-06 15:44 GMT

ಕಾಪು, ಜೂ.6: ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಕಾಪು ಹೆದ್ದಾರಿ ಪಕ್ಕದ ಮನೆಗಳಲ್ಲಿ ಕೃತಕ ನೆರೆ ಉಂಟಾಗಿದೆ. ಹೆದ್ದಾರಿ ಇಲಾಖಾ ಗುತ್ತಿಗೆದಾರ ನವಯುಗ ಕಂಪನಿ ಹೆದ್ದಾರಿ ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸಿದೆಯಾದರೂ, ಎಲ್ಲಿಯೂ ಸೂಕ್ತ ಚರಂಡಿ ವ್ಯವಸ್ತೆ ಮಾಡದ ಪರಿಣಾಮ ಸ್ಥಳೀಯರು ಸಣ್ಣ ಮಳೆಗೂ ಕೃತಕ ನೆರೆ ಅನುಭವಿಸುವಂತಾಗಿದೆ.

ಹೆದ್ದಾರಿಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಮೇಲ್ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಮೇಲ್ಸೇತುವೆಯಲ್ಲಿ ಹರಿದ ನೀರು ಸೂಕ್ತ ಚರಂಡಿ ವ್ಯವಸ್ತೆ ಇಲ್ಲದೆ ನೇರವಾಗಿ ಮನೆಗೆ ನುಗ್ಗುವಂತಾಗಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದ ಕಾಪು ಪುರಸಭೆಯ ಅಧಿಕಾರಿ ವರ್ಗವೂ ಮುಂಬರುವ ಮಳೆಗಾಲದ ಬಗ್ಗೆ ಯೋಚನೆಯನ್ನೇ ಮಾಡದ ಪರಿಣಾಮ ಈ ಅವಾಂತರ ಸಂವಿಸಿದೆ.

ಕಾಪು ಹೊಸ ಮನೆ ಗಿರಿಜಾ ಶೆಡ್ತಿಯವರು ಸುಮಾರು 50ವರ್ಷಗಳಿಂದ ಹೆದ್ದಾರಿ ಪಕ್ಕದ ತಮ್ಮ ಮನೆಯಲ್ಲಿ ನೆಲೆಸಿದ್ದು, ರಾತ್ರಿ ಸುರಿದ ಭಾರೀ ಮಳೆಯಿಂದ ಮನೆಯ ಎಲ್ಲಾ ಕೋಣೆಗಳಿಗೂ ಎರಡು ಅಡಿಗಿಂತಲೂ ಹೆಚ್ಚು ನೀರು ನುಗ್ಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಗಿರಿಜಾ ಕಂಗಾಲಾಗಿದ್ದಾರೆ. ಉಟ್ಟ ಬಟ್ಟೆಯಲ್ಲಿಯೇ ಇರುವ ಅವರ ಕುಟುಂಬ ಸಂಬಂಧಿಕರ ಮನೆ ಬಾಗಿಲು ಬಡಿಯುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಈ ಸಂದರ್ಆ ಕಾಪು ಪುರಸಬಾ ಅಧಿಕಾರಿ ಮೇಬಲ್ ಮಾತನಾಡಿ, ಹೆದ್ದಾರಿ ಇಲಾಖೆಯವರ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ನೆರೆ ಉಂಟಾಗಿದೆ. ಹೆದ್ದಾರಿ ಇಲಾಖಾ ಸಿಬ್ಬಂದಿ ಆಗಮಿಸಿ ತುರ್ತು ಕಾಮಗಾರಿ ನಡೆಸುತ್ತಿದ್ದಾರೆ. ಮುಂದೆ ಈ ತರಹ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಮರ್ಥನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News