ರಮಝಾನ್ ಆರಂಭ:ಮುಸ್ಲಿಮರಿಗೆ ಪ್ರಧಾನಿ ಮೋದಿ ಶುಭಾಶಂಸನೆ
Update: 2016-06-07 21:16 IST
ಹೊಸದಿಲ್ಲಿ,ಜೂ.7:ರಮಝಾನ್ ಮಾಸ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮುಸ್ಲಿಮ ಸಮುದಾಯಕ್ಕೆ ಶುಭಾಶಯಗಳನ್ನು ಕೋರಿರುವ ಪ್ರಧಾನಿ ನರೇಂದ್ರ ಮೋದಿಯವರು, ಈ ಪವಿತ್ರ ಮಾಸವು ಸಮಾಜದಲ್ಲಿ ಭ್ರಾತೃತ್ವ ಮತ್ತು ಸೌಹಾರ್ದತೆಯನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಸದ್ಯ ಪಂಚರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ಮಂಗಳವಾರ ಅಧಿಕೃತ ಹೇಳಿಕೆಯಲ್ಲಿ ಈ ಶುಭಾಶಯಗಳನ್ನು ಕೋರಿದ್ದಾರೆ.