×
Ad

ತೀರ್ಪು ಕಾದಿರಿಸಿದ ಸುಪ್ರೀಂ

Update: 2016-06-07 23:25 IST

ಹೊಸದಿಲ್ಲಿ, ಜೂ.7: ಅನಧಿಕೃತ ಸಂಪತ್ತು ಪ್ರಕರಣದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾರ ಖುಲಾಸೆಯನ್ನು ಪ್ರಶ್ನಿಸಿ ಕರ್ನಾಟಕ ಸರಕಾರ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್ ಕಾದಿರಿಸಿದೆ.

ಜೂ.10ರೊಳಗೆ ತಮ್ಮ ಲಿಖಿತ ಹೇಳಿಕೆಗಳನ್ನು ದಾಖಲಿಸುವಂತೆ ಕರ್ನಾಟಕ ಸರಕಾರ ಹಾಗೂ ಇತರ ಕಕ್ಷಿದಾರರಿಗೆ ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಹಾಗೂ ಅಮಿತಾಭ್ ರಾಯ್‌ಯವರಿದ್ದ ರಜಾಕಾಲದ ಪೀಠವೊಂದು ಕಳೆದವಾರ ಕರ್ನಾಟಕದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ರ ಸುದೀರ್ಘ ವಾದವನ್ನು ಆಲಿಸಿತ್ತು.
1991 ಹಾಗೂ 1996ರ ನಡುವೆ ಸುಮಾರು ರೂ.67 ಕೋಟಿ ಅನಧಿಕೃತ ಸಂಪತ್ತು ಶೇಖರಣೆಗಾಗಿ ಮುಖ್ಯಮಂತ್ರಿ ಸ್ಥಾನವನ್ನು ದುರುಪಯೋಗಪಡಿಸಿಕೊಂಡುದಕ್ಕಾಗಿ ವಿಚಾರಣಾ ನ್ಯಾಯಾಲಯವು ಜಯಲಲಿತಾರನ್ನು ಅಪರಾಧಿಯೆಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿತ್ತು. ಆದರೆ, ಕಳೆದ ವರ್ಷ ಈ ತೀರ್ಪನ್ನು ತಳ್ಳಿ ಹಾಕಿದ್ದ ಕರ್ನಾಟಕ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News