27 ವರ್ಷಗಳಿಂದ ರಮಝಾನ್ ಉಪವಾಸ ಆಚರಿಸುತ್ತಿದ್ದಾರೆ ಪೊಲೀಸ್ ಅಧಿಕಾರಿ ಸುಜಾತಾ ಪಾಟೀಲ್ !

Update: 2016-06-07 18:16 GMT

ಮುಂಬೈ, ಜೂ 8: "ರಮಝಾನ್ ಉಪವಾಸ ಆಚರಿಸುವುದರಿಂದ ನನಗೆ ಮನಶ್ಶಾಂತಿ ಸಿಗುತ್ತದೆ. ಜೊತೆಗೆ ಪ್ರಾಮಾಣಿಕತೆ ಹಾಗೂ ನೆಮ್ಮದಿಯಿಂದ ಕೆಲಸ ಮಾಡುವ ಚೈತನ್ಯ ಸಿಗುತ್ತದೆ. ಕಳೆದ 27 ವರ್ಷಗಳಿಂದ ನಾನು ರಮಝಾನ್ ಉಪವಾಸ ಆಚರಿಸುತ್ತಿದ್ದು ಈಗ ಅದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿ ವರ್ಷ ರಮಝಾನ್ ತಿಂಗಳಿಗಾಗಿ ನಾನು ಕಾತರದಿಂದ ಕಾಯುತ್ತೇನೆ " ಎಂದು ಹೇಳಿದ್ದು ಮುಂಬೈಯ ಹಿರಿಯ ಪೊಲೀಸ್ ಅಧಿಕಾರಿ ಸುಜಾತಾ ಪಾಟೀಲ್ ಅವರು !

ಸುಜಾತಾ ಅವರು ಕಳೆದ 27 ವರ್ಷಗಳಿಂದ ರಮಝಾನ್ ಉಪವಾಸ ವನ್ನು ಮುಸ್ಲಿಮರು ಆಚರಿಸಿದಂತೆ ಆಚರಿಸುತ್ತಿದ್ದಾರೆ.  ಮುಂಜಾನೆ ಎದ್ದು ಸಹರಿ ತಿನ್ನುವ ಅವರು ಸಂಜೆ ಮಗ್ರಿಬ್ ನ ಸಮಯವಾದ ಮೇಲೆಯೇ ಆಹಾರ ಸೇರಿಸುತ್ತಾರೆ. 

ತಮ್ಮ ರಮಝಾನ್ ಉಪವಾಸ ಆಚರಣೆಯಿಂದ ಸುಜಾತಾ ಅವರು ಕೆಲವು ಬಾರಿ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೂ ಅವರು ತಮ್ಮ ಉಪವಾಸ ಆಚರಣೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News