ಪಿಯುಸಿ ಮೌಲ್ಯ ಮಾಪಕರ ಎಡವಟ್ಟು: 76 ಅಂಕ ಪಡೆದಿದ್ದರೂ ಅಂಕಪಟ್ಟಿಯಲ್ಲಿ 26!

Update: 2016-06-08 07:26 GMT

ಮಂಗಳೂರು, ಜೂ.8: ದ್ವಿತೀಯ ಪಿಯುಸಿ ಮೌಲ್ಯಮಾಪಕರ ಎಡವಟ್ಟಿನಿಂದಾಗಿ ಈಗಾಗಲೇ ಹಲವಾರು ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿರುವುದು ವರದಿಯಾಗುತ್ತಿದೆ.

ಮಂಗಳೂರಿನ ಪದವು ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಾಯ್ಲಿನ್ ಹಿಂದಿ ಭಾಷೆಯಲ್ಲಿ 76 ಅಂಕಗಳನ್ನು ಪಡೆದಿದ್ದರೂ 26 ಅಂಕಗಳಾಗಿ ನಮೂದಿಸಿ ಆಕೆ ಫೇಲ್ ಎಂದು ಅಂಕಪಟ್ಟಿಯಲ್ಲಿ ನಮೂದಿಸಲಾಗಿತ್ತು.

ಹಿಂದಿಯಲ್ಲಿ 26 ಅಂಕಗಳೊಂದಿಗೆ ಒಟ್ಟು 600 ಅಂಕಗಳಲ್ಲಿ 414 ಅಂಕಗಳನ್ನು ಪಡೆದಿದ್ದರೂ ಜಾಯ್ಲಿನ್ ಅನುತ್ತೀರ್ಣಳಾದ ಬಗ್ಗೆ ಸಂಶಯ ಮೂಡಿ ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅದರ ಸ್ಕಾನ್ ಪ್ರತಿಯನ್ನು ತರಿಸಿ ನೋಡಿದಾಗ ವಿದ್ಯಾರ್ಥಿನಿಗೆ ಹಿಂದಿ ಭಾಷೆಯಲ್ಲಿ 76 ಅಂಕ ಲಭ್ಯವಾಗಿದೆ.

ವಿದ್ಯಾರ್ಥಿನಿ ಇದೀಗ ವಾಣಿಜ್ಯ ವಿಭಾಗದಲ್ಲಿ ಪಡೆದ ಒಟ್ಟು ಮೊತ್ತ 464 ಆಗಿದೆ. ವಾಮಂಜೂರಿನ ಜೋಸೆಫ್ ಡಿಸೋಜಾ ಹಾಗೂ ಗ್ರೇಸಿ ಡಿಸೋಜಾ ದಂಪತಿ ಪುತ್ರಿಯಾಗಿದ್ದು, ವೌಲ್ಯ ಮಾಪಕರ ಎಡವಟ್ಟಿನ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಮಾತ್ರವಲ್ಲದೆ, ಶಿಕ್ಷಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಸಾಕಷ್ಟು ಪ್ರಮಾದಗಳು ಈಗಾಗಲೇ ಪಿಯುಸಿ ವೌಲ್ಯಮಾಪಕರಿಂದ ಆಗಿರುವುದು ವರದಿಯಾಗಿದ್ದು, ಈ ಎಡವಟ್ಟಿಗೆ ಯಾರು ಹೊಣೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News