ಶಿಕ್ಷಣ ರಂಗಕ್ಕೆ ಮರಳುವುದೇ ನನ್ನ ಬಯಕೆ: ರಾಜನ್
Update: 2016-06-08 22:52 IST
ಹೊಸದಿಲ್ಲಿ,ಜೂ.8: ತನ್ನ ಅಧಿಕಾರಾವಧಿಯ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ಇಂದಿಲ್ಲಿ ನಿರಾಕರಿಸಿದ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು,ವಿತ್ತ ಸಚಿವ ಅರುಣ್ ಜೇಟ್ಲಿಯವರೊಂದಿಗೆ ತಾನು ಅತ್ಯಂತ ಸೌಹಾರ್ದ ಸಂಬಂಧವನ್ನು ಹೊಂದಿದ್ದೇನೆ ಮತ್ತು ಶಿಕ್ಷಣ ರಂಗಕ್ಕೆ ಮರಳಬೇಕೆನ್ನುವುದು ತನ್ನ ಸುದೀರ್ಘ ಕಾಲದ ಬಯಕೆಯಾಗಿದೆ ಎಂದು ಹೇಳಿದರು.
ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನೇರ ಮಾತುಗಳಿಗೆ ಹೆಸರಾಗಿರುವ ರಾಜನ್ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಸರಕಾರದ ಹಸ್ತಕ್ಷೇಪಕ್ಕೆ ಅಂತ್ಯ ಹಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶಂಸಿದರು.