×
Ad

ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದೇವ್‌ಬಂದ್ ಫತ್ವಾ

Update: 2016-06-08 22:53 IST

ಲಕ್ನೊ, ಜೂ.8: ಹೆಣ್ಣು ಭ್ರೂಣ ಹತ್ಯೆಯನ್ನು ವಿರೋಧಿಸಿ ಇಲ್ಲಿನ ದಾರುಲ್ ಉಲೂಮ್ ದೇವ್‌ಬಂದ್ ಬುಧವಾರ ಫತ್ವಾ ಒಂದನ್ನು ಹೊರಡಿಸಿದೆ. ಅದೊಂದು ಕಾನೂನು ಬಾಹಿರ ಹಾಗೂ ಇಸ್ಲಾಮ್ ವಿರೋಧಿ ಕೃತ್ಯವೆಂದು ಬಣ್ಣಿಸಿದೆ. 2001ರಲ್ಲಿ ಮುಸ್ಲಿಮರಲ್ಲಿ 6ರ ಹರೆಯದವರೆಗಿನ ಹೆಣ್ಣು ಮಕ್ಕಳ ಸಂಖ್ಯೆ 1 ಸಾವಿರ ಗಂಡು ಮಕ್ಕಳಿಗೆ 950ರಷ್ಟಿತ್ತು. 2011ರ ವೇಳೆಗೆ ಅದು 943ಕ್ಕೆ ಕುಸಿದಿದೆ. ಈ ಅಸಮಾನ ಲಿಂಗ ಪ್ರಮಾಣದ ಕುರಿತಾದ ಪ್ರಶ್ನೆಗಳು ಹಾಗೂ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಈ ಫತ್ವಾ ಹೊರ ಬಿದ್ದಿದೆ.

ಪುತ್ರಿಯರ ಬಗ್ಗೆ ಹೆತ್ತವರ ಕರ್ತವ್ಯ ಹಾಗೂ ಗರ್ಭದಲ್ಲಿರುವ ವೇಳೆ ಅಥವಾ ಜೀವನದಲ್ಲಿ ಮಗಳನ್ನು ಸರಿಯಾಗಿ ನೋಡಿಕೊಳ್ಳದವರಿಗೆ ದೊರೆಯುವ ಶಿಕ್ಷೆಯ ಬಗ್ಗೆ ಇಸ್ಲಾಂ, ಕುರ್‌ಆನ್ ಹದೀಸ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಲಿಂಗದ ಕಾರಣಕ್ಕಾಗಿ ಹೆಣ್ಣ ಭ್ರೂಣವನ್ನು ಹತ್ಯೆ ಮಾಡುವುದು ಅನ್ಯಾಯ ಹಾಗೂ ಹರಾಂ ಎಂದು ದಾರುಲ್ ಇಫ್ತಾ ಹೇಳಿದೆ.

ವೌಢ್ಯದ ಯುಗದಲ್ಲಿ ಜನರು ತಮ್ಮ ಮಗಳಂದಿರನ್ನು ಜೀವಂತ ಹುಗಿಯುತ್ತಿದ್ದರು. ಅದನ್ನು ಕುರ್‌ಆನ್ ತೀವ್ರವಾಗಿ ಖಂಡಿಸಿದೆ. ಭ್ರೂಣವು 4 ತಿಂಗಳಿನದಿರುವಾಗ ಅಂತಹ ತೀವ್ರ ಕಾರಣವಿಲ್ಲದೆ ಗರ್ಭಪಾತ ನಡೆಸುವುದು ಸಂಪೂರ್ಣ ಕಾನೂನು ಬಾಹಿರ ಹಾಗೂ ಹರಾಂ ಆಗಿದೆಯೆಂದು ಅದು ಸ್ಪಷ್ಟಪಡಿಸಿದೆ.
 ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಇಸ್ಲಾಂ ಆದೇಶಿಸುತ್ತದೆ. ಹೆಣ್ಣು ಮಕ್ಕಳಿಂದ ದುರದೃಷ್ಟ ಅಥವಾ ಆಗೌರವ ಬರುತ್ತದೆಂಬ ಸಿದ್ಧಾಂತವೇ ಇಸ್ಲಾಂನಲ್ಲಿಲ್ಲವೆಂದು ದಾರುಲ್ ಇಫ್ತಾ ತಿಳಿಸಿದೆ.

ಪುತ್ರಿಯರನ್ನು ಬೆಳೆಸುವ ಹೊಣೆಗಾರಿಕೆಯಲ್ಲಿ ಯಾರು ತೊಡಗಿದ್ದಾರೋ ಹಾಗೂ ಅವರ ಬಗ್ಗೆ ಉದಾರವಾಗಿರುತ್ತಾರೋ ಅಂತಹವರನ್ನು ಪುತ್ರಿಯರು ನರಕದ ಬೆಂಕಿಯಿಂದ ರಕ್ಷಿಸುತ್ತಾರೆಂದು ಒವ್ಮೆು ಪ್ರವಾದಿ ಮುಹಮ್ಮದರೇ ಹೇಳಿದ್ದರೆಂದು ಅದು ಉಲ್ಲೇಖಿಸಿದೆ.
ಈ ವಿಷಯದಲ್ಲಿ ಇದು ಮೊದಲ ಫತ್ವಾ ಅಲ್ಲವೆಂದು ದಾರುಲ್ ಉಲೂಂನ ರೆಕ್ಟರ್ ವೌಲಾನಾ ಅಬ್ದುಲ್ ಖಾಸಿಂ ನೊಮಾನಿ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News