ನಿರಾಶ್ರಿತರನ್ನು ಕಂಗೆಡಿಸಿದೆ ‘ಚರ್ಮ ತಿನ್ನುವ’ ರೋಗ

Update: 2016-06-09 12:39 GMT

ಸಿರಿಯಾ,ಜೂ 9 : ಆಂತರಿಕ ಯುದ್ಧದಿಂದ ಕಂಗೆಟ್ಟಿದ್ದ ಸಿರಿಯಾ ನಾಗರಿಕರು ಇದೀಗ ಇನ್ನೊಂದು ಗಂಭೀರ ಸಮಸ್ಯೆಯೆದುರಿಸುತ್ತಿದ್ದಾರೆ. ಅದುವೇ ಚರ್ಮ ತಿನ್ನುವ ರೋಗ.

“ಕ್ಯುಟೇನಿಯಸ್ ಲೀಶ್ಮನ್ಯೇಸಿಸ್” ಎಂಬರೋಗ ಈ ಹಿಂದೆ ಸಿರಿಯಾದಲ್ಲಿ ನಿಯಂತ್ರಣದಲ್ಲಿದ್ದರೂ ಇದೀಗ ಮತ್ತೆ ಕಾಣಿಸಿಕೊಂಡಿದ್ದು ಮಧ್ಯ ಪ್ರಾಚ್ಯ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ.

ಈ ರೋಗದಿಂದ ಚರ್ಮದಲ್ಲಿ ಕಲೆಗಳಾಗುವುದಲ್ಲದೆ ರೋಗಪೀಡಿತ ಸ್ಯಾಂಡ್ ಫ್ಲೈಗಳಿಂದ ಹರಡುತ್ತದೆ. ಈಗಾಗಲೇ ಆಂತರಿಕ ಯುದ್ಧದಿಂದ ಕಂಗೆಟ್ಟಿರುವ ಸಿರಿಯಾದಲ್ಲಿ ವೈದ್ಯಕೀಯ ಸೌಕರ್ಯಗಳ ತೀವ್ರಕೊರೆತೆಯಿದ್ದು, ಶುದ್ಧ ಕುಡಿಯುವ ನೀರಿನ ಅಲಭ್ಯತೆಯೂ ರೋಗ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

2013ರಲ್ಲಿ ಸಿರಿಯಾದಲ್ಲಿ ಅಂದಾಜು 82,000 ಜನರು ಈ ರೋಗದಿಂದ ಬಾಧಿತರಾಗಿದ್ದು ಅಲೆಪ್ಪೋ ಹಾಗೂ ಡಮಾಸ್ಕ ನಾಗರಿಕರು ಅತಿ ಹೆಚ್ಚು ತೊಂದರೆಗೊಳಗಾದವರಾಗಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಪ್ರಭಾವಶಾಲಿಯಾಗಿರುವ ಪ್ರದೇಶಗಳಾದ ರಖಾ, ಡೀರ್ ಅಝೋರ್ ಹಾಗೂ ಹಸಕಹ್ ಕೂಡಬಾಧಿತವಾಗಿದೆ.

ಆಂತರಿಕ ಯುದ್ಧ ಆರಂಭವಾಗುವ ಮೊದಲು ಸಿರಿಯಾ ಸರಕಾರ ಕೀಟ ನಿರೋಧಕಗಳನ್ನು ಸಿಂಪಡಿಸುತ್ತಿತ್ತಾದರೂ ಯುದ್ಧ ಆರಂಭವಾದಂದಿನಿಂದ ಈ ಕಾರ್ಯವನ್ನು ನಿಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News